Wednesday, June 19, 2024

ಸತ್ಯ | ನ್ಯಾಯ |ಧರ್ಮ

‌ ಅಂಬೇಡ್ಕರ್‌ ಮತ್ತು ದಲಿತರಿಗೆ ಅಪಮಾನಿಸಿದ ಜೈನ್ ಯೂನಿವರ್ಸಿಟಿ: ವ್ಯಾಪಕ ವಿರೋಧ

ಬೆಂಗಳೂರಿನ ಜೈನ್‌ ಡೀಮ್ಡ್‌ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯಗಳ ವಿರುದ್ಧ ಅವಹೇಳನಕಾರಿ ನಾಟಕ ಪ್ರದರ್ಶನ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಬೆಂಗಳೂರಿನ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿದ್ದರೂ ಮಹಾರಾಷ್ಷ್ರದಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.  

Jhatkaa.org ಸಾಮಾಜಿಕ ಮಾದ್ಯಮದಲ್ಲಿ ಜೈನ್‌ ಯೂನಿವರ್ಸಿಟಿ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ವಿಡಿಯೋ ಪ್ರಕಟಿಸಿತ್ತಲ್ಲದೇ ʼಜೈನ್ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕೇಂದ್ರದ (CMS) ಕಾಲೇಜು ತಂಡವು ಕಾರ್ಯಕ್ರಮದಲ್ಲಿ, ” ಜಾತಿವಾದಿ ಮತ್ತು ಸಂವೇದಶಿಲವಲ್ಲದ ಸ್ಕಿಟ್‌ ರಚಿಸಿ ಪ್ರದರ್ಶಿಸಿದೆ ಎಂದು ಹೇಳಿತ್ತು.  

ಕಿರುನಾಟಕದಲ್ಲಿ (ಸ್ಕಿಟ್) ಏನಿದೆ?

 ಕಳೆದ ಫೆ. 5 ರಂದು ಜೈನ್‌ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ʼಸಂಯೋಗ – ಜೈನ್‌ ಯೂನಿವರ್ಸಿಟಿ ಯೂಥ್‌ ಫೆಸ್ಟ್ʼ ಕಾರ್ಯಕ್ರಮದ ಮ್ಯಾಡ್‌ ಆಡ್ಸ್‌ ಎಂಬ ಇವೆಂಟಿನಲ್ಲಿ ಜೈನ್‌ ಡೀಮ್ಡ್  ಯೂನಿವರ್ಸಿಟಿಯ ಸೆಂಟರ್‌ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕೇಂದ್ರದ ವಿದ್ಯಾರ್ಥಿಗಳು , ಸ್ಕಿಟ್‌ ರಚಿಸಿ ಪ್ರದರ್ಶಿಸಿದ್ದರು.  ಹಾಸ್ಯದ ಹೆಸರಲ್ಲಿ ಅಂಬೇಡ್ಕರ್‌ ಮತ್ತು ಪರಿಶಿಷ್ಟ ಜಾತಿಗಳನ್ನು ಅಪಮಾನಿಸುವ ನಾಟಕ ಪ್ರದರ್ಶಿಸಿದ್ದಾರೆ. ಒಬ್ಬ ನಿರೂಪಣೆ ಮಾಡುತ್ತಾ ಹೋದಂತೆ ಹಲವರು ಅಭಿನಯಿಸುವ ಈ ಸ್ಕಿಟ್‌ ನಲ್ಲಿ ಪ್ರೆಸೆಂಟಿಂಗ್ ಬಿ.ಆರ್.ಅಂಬೇಡ್ಕರ್‌ ಎಂದು ಹೇಳಿ ನಂತರ..‌ ಬಿ.ಆಂಬೇಡ್ಕರ್?‌ ಹೇ… ನೊ..ನೊ..ನೊ  ಬಿಯರ್‌ ಅಂಬೇಡ್ಕರ್‌ ಎಂದು ಹೇಳುತ್ತಾರೆ ಆಗ ಪ್ರೇಕ್ಷಕರು ಕುಶಿಯಿಂದ ಕೂಗುವ ಧ್ವನಿ ಕೇಳಿಸುತ್ತದೆ. ನೀನ್‌ ಲಿಟ್‌ ಆಗಬಹುದಾದರೆ ಯಾಕೆ ದಲಿತ್? ಎಂಧು ಕಿಚಾಯಿಸುತ್ತಾರೆ. ಡೇಟ್‌ ಮಾಡುವ ಹುಡುಗ ಹುಡುಗಿ ಸಂಭಾಷಣೆ ತರುತ್ತಾ, ʼಅಲ್ಲಿಯೂ ಆಕೆ ಅವನನ್ನು ಒಂದೇ ಪ್ಲೇಟಲ್ಲಿ ತಿನ್ನಲು ಬಿಡಲಿಲ್ಲ.  ಗರ್ಲ್‌ ಫ್ರೆಂಡ್‌ ಅವನನ್ನು ಕೇಳ್ತಾಳೆ, ಅದೇಗೆ ಇಷ್ಟು ಬೇಗ ಬಂದೆ ಅಂತ.. ಅದಕ್ಕವನು. ʼಹೇಯ್‌ ಬೇಬಿ ನಾನು ಶೆಡ್ಯೂಲ್ಡ್‌ ಕಾಸ್ಟ್, ಅದಕ್ಕೆ” ಎನ್ನುತ್ತಾನೆ. ಈ ದೃಶ್ಯಕ್ಕೂ ಪ್ರೇಕ್ಷಕರು ಕಿರುಚಿ ಮೆಚ್ಚುಗೆ ಸೂಚಿಸುತ್ತಾರೆ. ನಂತರ ‘ಡೋಂಟ್ ಟಚ್ ಮಿ, ಟಚ್ ಮಿʼ ಎಂಬ ಸಾಲಿಗೆ ನಟಿಸುತ್ತಾರೆ. ಮುಂದಿನ ಭಾಗದಲ್ಲಿ ವ್ಯಂಗವಾಗಿ ಹೇಳುತ್ತಾ ಅವರು ಹಿಂದೆ ಬಾಳಾ ತಾರತಮ್ಯ ಎದುರಿಸಿದ್ದಾರೆ. ಅವನು ಆರ್ಮಿ ಸೇರಲು ಪ್ರಯತ್ನ ಮಾಡಿದ. ಆದರೆ ಅಲ್ಲೂ ಅವನಿಗೆ ಜನರಲ್‌ ಆಗಲು ಆಗಲಿಲ್ಲ. ಯಾರನ್ನಾದರೂ ಸಿಟ್ಟಿಗೆಬ್ಬಿಸಲು ನಾವು ಯಾವುದೇ ಸುಲಬ ದಾರಿ ಹಿಡೀಲಿಲ್ಲ. ಅಪ್ಪರ್‌ ಕಾಸ್ಟ್‌ ಮೈಕಲ್‌, ಬಂದಾ ತುಳಿಯುತ್ತಾ ಸೈಕಲ್..‌ ಕೂಗಿದ ಏಯ್‌ ದಲಿತಾ, ನೀರನ್ನ ಮುಟ್ಟಬೇಡ, ನಿಂಗೆ ಒಂದು ಹನಿಯೂ ಸಿಗಲ್ಲ, ಕ್ವಾಟರ್‌ನಂತೂ ಮರೆತುಬಿಡು” ಎಂದು ನೇರವಾಗಿ ದಲಿತ ಸಮುದಾಯಗಳನ್ನು ಲೇವಡಿ ಮಾಡುವ ಸಂಭಾಷಣೆ ಹೇಳುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಅಭಿನಯಿಸುತ್ತಾರೆ. ಮುಂದುವರಿದುʼ ನಾನು ದೇವರ ಮಗನಂತೆ ಅನಿಸುತ್ತಿದೆ. ಒಂದು ಭಜನೆ ಹಾಡಲು ಇಚ್ಚಿಸ್ತೇನೆ, ಈಗ ನನಗೆ ಅರ್ಥವಾಯ್ತು, ಗಾಂಧೀಜಿ ನಮ್ಮನ್ನ ಯಾಕೆ ಹರಿಜನ ಎಂದು ಕರೆದಿದ್ದು ಎಂದು…. ನಿನಗೆ ಅರ್ಹತೆ ಏನಿದೆಯೋ ಅದು ಸಿಗುತ್ತದೆ, ಯಾವ ರೀತಿ ನನ್ನ ಕಾಲೇಜ್‌ ಸೀಟು ಈಗಾಗಲೇ ಮೀಸಲಾಗಿದೆಯೋ ಹಾಗೆ” ಎಂದು ಹೇಳುತ್ತಿದ್ದಂತೆ ಮತ್ತೊಮ್ಮೆ ಸಭಿಕರಲ್ಲಿನ ಹುಡುಗಿಯರ ಮೆಚ್ಚುಗೆಯ ಕೂಗು ಕೇಳುತ್ತದೆ. ‌

ಈ ಸ್ಕಿಟ್‌ ಪ್ರದರ್ಶನದ ಅಂಶಗಳನ್ನು ನೋಡಿದಾಗ ಇದರ ಉದ್ದೇಶವು ಡಾ.ಬಿ.ಆರ್.‌ ಅಂಬೇಡ್ಕರ್‌ ಅವರನ್ನು ಮತ್ತು ಮೀಸಲಾತಿ ಪಡೆಯುವ ಸಮುದಾಯಗಳನ್ನು ಅಪಮಾನಿಸುವುದೇ ಇದರ ಉದ್ದೇಶವಾಗಿದೆ.  ಇದೊಂದು ಹಸಿಹಸಿಯಾದ ಮೇಲ್ಜಾತಿ ದುರಭಿಮಾನದ ಮತ್ತು ಜಾತಿ ತಾರತಮ್ಯದ ಸಂಗತಿಗಳನ್ನೇ ಲೇವಡಿ ಮಾಡುತ್ತಾ ಸಂವಿಧಾನವನ್ನು ಅಪಮಾನಿಸುವ ಉದ್ದೇಶ ಹೊಂದಿದ ಸ್ಕಿಟ್‌ ಆಗಿರುವುದು ಕಂಡು ಬರುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಈ ನಾಟಕದ ವಿಡಿಯೋ ತುಣುಕು ವೈರಲ್‌ ಆಗುತ್ತಿದ್ದಂತೆ ನಾಟಕದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಫೆಬ್ರವರಿ 9, ಗುರುವಾರದಂದು ಮಹಾರಾಷ್ಟ್ರದ ಪೊಲೀಸ್ ಅಧೀಕ್ಷಕರಿಗೆ ವಂಚಿತ್ ಬಹುಜನ ಯುವ ಆಘಾಡಿಯ ರಾಜ್ಯ ಸದಸ್ಯ ಅಕ್ಷಯ್ ಬನ್ಸೋಡೆ ಅವರು ಸೆಕ್ಷನ್ ಎಕ್ಸ್ (3) SC/ST ಕಾಯ್ದೆಯಡಿಯಲ್ಲಿ ದೂರು ಸಲ್ಲಿಸಿದ್ದಾರೆ. ಹಾಗೆಯೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153, 153A, 295, 499, 500, 503, 504, 506 ಮತ್ತು 34ರಲ್ಲಿ ದೂರು ದಾಖಲಾಗಿದೆ. ದೂರನ್ನು ಎಫ್‌ಐಆರ್ ಎಂದು ಪರಿಗಣಿಸಿ ಪ್ರದರ್ಶಕರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರುದಾರರು ಪೊಲೀಸರನ್ನು ಒತ್ತಾಯಿಸಿದ್ದಾರೆ.

 “ಇದೊಂದು ವಿಕೃತ ಮನಸ್ಸಿನ ಸ್ಕಿಟ್.‌ ಇದನ್ನು ಮಾಡಿದವರ ಹಿನ್ನೆಲೆ ಏನು, ಇದಕ್ಕೆ ಅವಕಾಶ ಮಾಡಿಕೊಟ್ಟ ಮ್ಯಾನೇಜ್ಮೆಂಟ್‌ ಮನಸ್ಥಿತಿ ಏನು ಎಂದು ನೋಡಬೇಕಿದೆ. ಇದನ್ನು ಮಾಡಿದವರ ಮೇಲೆ ದೌರ್ಜನ್ಯ ವಿರೋದಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಎಲ್ಲರನ್ನೂ ಕೂಡಲೇ ಬಂಧಿಸಬೇಕು. ಜೈನ್‌ ಯೂನಿವರ್ಸಿಟಿಯಂತಹ ಡೀಮ್ಡ್‌ ಯೂನಿವರ್ಸಿಟಿಯ ಮೇಲೆ ಸರ್ಕಾರಕ್ಕೆ ಅಂಕುಶವಿಲ್ಲ. ಅವರು ಆಡಿದ್ದೇ ಆಟವಾಗಿದೆ. ಯಾವುದೇ ಸಾಮಾಜಿಕ ನ್ಯಾಯಕ್ಕೆ ಅಲ್ಲಿ ಅವಕಾಶ ಇರುವುದಿಲ್ಲ. ಇಂತಹ ಸಂಸ್ಥೆಗಳಿಗೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು ಮತ್ತು ಸುತ್ತೋಲೆ ಹೊರಡಿಸಬೇಕು. ದೇಶಕ್ಕೆ ಸಂವಿಧಾನ ನೀಡಿದ ಮಹಾನ್‌ ಚೇತನ ಬಾಬಾಸಾಹೇಬ್ ಅಂಬೇಡ್ಕರ್‌ ಅವರಂತವರ ಮೇಲೆ ಹೀಗೆ ಕೊಳಕು ಮನಸ್ಥಿತಿಯ ಸ್ಕಿಟ್‌ ಮಾಡಿರುವುದು ಖಂಡನೀಯ.‌ ಈ ಕುರಿತು ವಿದ್ಯಾರ್ಥಿ ಸಮೂಹದೊಂದಿಗೆ ಚರ್ಚಿಸಿಕೊಂಡು ಪ್ರತಿಭಟನೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಇನ್ನೂ ಯಾಕೆ ಪೊಲೀಸ್‌ ಇಲಾಖೆ ಈ ಬಗ್ಗೆ ಕಣ್ಣುಮುಚ್ಚಿಕೊಂಡು ಕುಳಿತಿದೆ? ಪೋಲೀಸ್‌ ಇಲಾಖೆ ಈ ಘಟನೆ ಕುರಿತು ಸುಮೊಟೊ ಕೇಸ್‌ ದಾಖಲಿಸಿಕೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇನೆ. ಸರ್ಕಾರದ ಒಳಗಿರುವ ಮನಸ್ಸುಗಳು ಎಷ್ಟು ವಿಕೃತವಾಗಿವೆ ಎಂಬುದಕ್ಕೆ ಇದು ಕನ್ನಡಿ ಹಿಡಿದಿದೆ. ಸಂವಿಧಾನಕ್ಕೆ ಅಪಮಾನಿಸುವ, ಸಮುದಾಯಗಳನ್ನು ಅವಹೇಳನ ಮಾಡಿಸುವ ಇಂತಹ ಕೃತ್ಯಗಳ ಕುರಿತು ನಾವು ಎಚ್ಚರಗೊಳ್ಳುವ ಅಗ್ಯತವಿದೆ

ಮಾವಳ್ಳಿ ಶಂಕರ್‌, ದಲಿತ ಮುಖಂಡರು

 

Related Articles

ಇತ್ತೀಚಿನ ಸುದ್ದಿಗಳು