Tuesday, July 15, 2025

ಸತ್ಯ | ನ್ಯಾಯ |ಧರ್ಮ

ರೈತರ ಬೆಳೆಗೆ ವಿಮೆ ಮಾಡಿಸಿ‌ ತೆಂಗು ರೋಗಕ್ಕೆ ಪರಿಹಾರ ಕಂಡುಕೊಳ್ಳಿ – ರಾಜಣ್ಣ ಸಭೆಯಲ್ಲಿ ಸೂಚನೆ

ಹಾಸನ : ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರು ಮೆಕ್ಕೆ ಜೋಳದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾತನಾಡಿ, ಮೆಕ್ಕೆಜೋಳದಲ್ಲಿ ರೈತರು ನಷ್ಟಹೊಂದಿದ್ದಾರೆ. ರೈತರ ರಕ್ಷಣೆಗೆ ಬರುವಂತದ್ದು ಇನ್ಸ್ ರೆನ್ಸ್. ಕಡ್ಡಾಯವಾಗಿ ವಿಮೆ ಮಾಡುವ ಬಗ್ಗೆ ಪ್ರಚಾರ ಮಾಡಿ ರೈತರಿಗೆ ವಿಶ್ವಾಸ ಬರುವಾಗೆ ಮನವರಕೆ ಮಾಡಿಕೊಡಬೇಕು ಎಂದರು.ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಸರಕಾರದ ಗ್ರಾಂಟ್ ಏನಿದೆ ಅದರ ಸದುಪಯೋಗವಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಮುಂದುವರೆಯಬೇಕು ಎಂದು ಸಿಡಿಮಿಡಿಗೊಂಡರು.ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರು ಮಾತನಾಡಿ, ಸರಕಾರದಿಂದ ಕೊಡಲಾಗಿರುವ ಗ್ರಾಂಟ್ ಸದ್ಬಳಿಕೆ ಆಗಬೇಕು. ಆದರೇ ಇನ್ನು ಆಕ್ಷನ್ ಪ್ಲಾನೆ ಆಗಿರುವುದಿಲ್ಲ. ಹೊಳೆನರಸೀಪುರ ತಾಲೂಕಿನದು ಮಾತ್ರ ಕ್ರಿಯಾ ಯೋಜನೆ ಆಗಿದೆ. ಜಿಲ್ಲೆಯ ವಿವಿಧ ತಾಲೂಕಿನ ನಿರ್ವಹಣಾಧಿಕಾರಿಗಳು ಏನು ಮಾಡುತ್ತಿದ್ದಾರೆ. ಇನ್ನು ನಾಲ್ಕೆದು ತಿಂಗಳುಗಳಿದ್ದು, ಕೆಲಸ ಆಗಬೇಕಾಗಿದೆ. ಸಿಇಓ ಗಮನಕ್ಕೆ ತರಬೇಕು. ಹಣ ಬಿಡುಗಡೆ ಆಗುವುದೇ ಕಷ್ಟ. ಇಲ್ಲಿವರೆಗೂ ಕ್ರಿಯಾ ಯೋಜನೆಗಳೆ ಆಗಿಲ್ಲ ಎಂದು ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳನ್ನು ಕರೆದು ಮಾಹಿತಿ ಕಲೆ ಹಾಕಿದರು.
ಇನ್ನು ತೋಟಗಾರಿಕ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಜಿಲ್ಲೆಯ ಅರಸೀಕೆರೆ ಮತ್ತು ಚನ್ನರಾಯಪಟ್ಟಣದಲ್ಲಿ ಹೆಚ್ಚು ತೆಂಗು ಬೆಳೆಗಾರರು ಇದ್ದು, ಕಾಟಚಾರಕ್ಕೆ ನಮಗೆ ಮಾಹಿತಿ ನೀಡಬೇಡಿ. ಒಂದು ತೆಂಗಿನ ಮರದಲ್ಲಿ ಹತ್ತು ಕಾಯಿ ಸಿಗುತ್ತಿಲ್ಲ. ಹೊಂಬಾಳೆ ಒಳಗೆ ಕಪ್ಪಾಗಿ ಹೋಗುತ್ತಿದೆ. ಇಂತಹ ರೋಗ ಜೀವನದಲ್ಲಿ ಬಂದಿರಲಿಲ್ಲ. ನೀವು ಸುಮ್ಮನೆ ಗೌಫ್ಯವಾಗಿ ಕೂರಬೇಡಿ. ಸಂಶೋಧನೆ ಮಾಡಿ ಈ ರೋಗ ನಿಲ್ಲಿಸಲು ಕ್ರಮಕೈಗೊಳ್ಳಿ ಎಂದು ತೋಟಗಾರಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


ಈ ಸಭೆಗೆ ಯಾವ ಇಲಾಖೆಯ ಅಧಿಕಾರಿಗಳು ಬಂದಿರುವುದಿಲ್ಲ ಮೊದಲು ಹಾಜರಾತಿ ಹಾಕಿ ಎಂದು ಸಭೆ ಆರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ವಿಧಾನ ಪರಿಷತ್ತು ಸದಸ್ಯ ವಿವೇಕಾನಂದ್, ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ, ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಎಡಿಸಿ ಕೆ.ಟಿ. ಶಾಂತಲಾ, ಜಿಪಂ ಆಡಳಿತಾಧಿಕಾರಿ ನವೀನ್ ರಾಜಸಿಂಗ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣೀಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಕಾರಿ ಮೊಹಮ್ಮದ್ ಸುಜೀತಾ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page