Thursday, June 27, 2024

ಸತ್ಯ | ನ್ಯಾಯ |ಧರ್ಮ

ಸಿಂಧೂ, ಬೌದ್ಧ, ಬಸವಣ್ಣ ಕಾಲದಲ್ಲೂ ಪ್ರಜಾಪ್ರಭುತ್ವ ಇತ್ತು – ಸಿ ಎಮ್‌ ಸಿದ್ಧರಾಮಯ್ಯ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗ ನಡೆದ ಕಾರ್ಯಕ್ರಮದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಸಮಾಜ ಕಲ್ಯಾಣ ಇಲಾಖೆ ವಿಧಾನಸೌಧದಲ್ಲಿ ಆಯೋಜಿಸಿದ್ದ ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಬೃಹತ್ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿದರು.ಉ

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು ” ಸಂವಿಧಾನವು ಅತ್ಯಂತ ಪವಿತ್ರವಾದುದು. ಮಕ್ಕಳು, ಯುವಕರು ದೇಶ, ರಾಜ್ಯದ ಭವಿಷ್ಯ. ಯುವ ಸಮುದಾಯಕ್ಕೆ ಸಂವಿಧಾನದ ಅಶಯ ತಿಳಿಸಬೇಕು. ಜಗತ್ತಿನ ಅನೇಕ ರಾಷ್ಟ್ರ ಪ್ರಜಾಪ್ರಭುತ್ವ ಒಪ್ಪಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿ ಸದೃಢವಾಗಿದೆ. ಪ್ರಾಚೀನ ಕಾಲದಲ್ಲೂ ಭಾರತ ಪ್ರಜಾಪ್ರಭುತ್ವ ಅನುಸರಿಸಿತ್ತು.” ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, “

ಸಿಂಧೂ, ಬೌದ್ಧ, ಬಸವಣ್ಣ ಕಾಲದಲ್ಲೂ ಪ್ರಜಾಪ್ರಭುತ್ವ ಇತ್ತು. ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪ ರಚಿಸಲಾಗಿತ್ತು. ಅನುಭವ ಮಂಟಪ ಸಮಾಜದ ಅಂಕುಡೊಂಕು ತಿದ್ದಿತ್ತು. ಸಂವಿಧಾನ ಬರುವ ಮುನ್ನ ನಮ್ಮಲ್ಲಿ ಪ್ರಜಾಪ್ರಭುತ್ವ ಇತ್ತು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಣತಂತ್ರ.. ಜನತಂತ್ರ ಎನ್ನಲಾಗ್ತಿತ್ತು. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂತು. ಡಾ. ಬಿ.ಆರ್ ಅಂಬೇಡ್ಕರ್ ಅವ್ರು ಐತಿಹಾಸಿಕ ಭಾಷಣ ಮಾಡಿದ್ದರು. ಸಂವಿಧಾನ ಪೀಠಿಕೆ, ಉದ್ದೇಶ, ರಾಷ್ಟ್ರ ಕಲ್ಪನೆಯನ್ನು ತಿಳಿಸಿದ್ದರು.” ಎಂದು ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು “ವಿಶ್ವದೆಲ್ಲೆಡೆ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದಾರೆ. ನಾವು ಈ ದಿನ ದೊಡ್ಡ ಸಂಕಲ್ಪ ಮಾಡಿದ್ದೇವೆ. ಯುವಕರ ಸಬಲೀಕರಣ ಆಗಬೇಕೆಂಬ ಸಂಕಲ್ಪ ಮಾಡಿದ್ದೇವೆ. ನಮ್ಮ ಪಕ್ಷದ ಕಾರ್ಯಕ್ರಮದಲ್ಲೂ ಪೀಠಿಕೆಯನ್ನು ಓದಿದ್ವಿ” ಎಂದರು.

ಸಂವಿಧಾನದ ಆಶಯಗಳನ್ನು ನಾವು ಉಳಿಸಬೇಕಿದೆ. ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ ನಡೀತಿದೆ. ಇದೊಂದು ಐತಿಹಾಸಿಕ, ಪವಿತ್ರ ಕಾರ್ಯಕ್ರಮ. ಯುವ ಸಬಲೀಕರಣದ ಸಂಕಲ್ಪವನ್ನ ನಾವು ಮಾಡಿದ್ದೇವೆ. ಸಂವಿಧಾನ ಪೀಠಿಕೆಯನ್ನು ಸರ್ವರಿಗೂ ತಿಳಿಸಬೇಕು. ಯುವಕರು, ಮಕ್ಕಳ ಪಾತ್ರದ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

“ಶಿಕ್ಷಣದ ಮೂಲಕವೇ ಸಂವಿಧಾನ ಆಶಯ ತಲುಪಿಸಬೇಕು. ಡಾ. ಬಿ.ಆರ್‌. ಅಂಬೇಡ್ಕರ್‌ ಅವರಿಗೆ ನಾವು ಚಿರಋಣಿ. ಎಲ್ಲಾ ಧರ್ಮ ಗ್ರಂಥಗಳಿಗಿಂತಲೂ ಸಂವಿಧಾನ ಶ್ರೇಷ್ಠ. ಸಂವಿಧಾನವೂ ಜೀವನದ ಯಂತ್ರ & ಸ್ಪೂರ್ತಿ ಇದ್ದಂತೆ. ಎಲ್ಲಾ ವರ್ಗದ ಜನರನ್ನೂ ಒಟ್ಟಾಗಿ ಕರೆದೊಯ್ಯಬೇಕು. ಭಾರತದ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಿದೆ” ಎಂದು ಉಪ ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪನವರು ಮಾತನಾಡುತ್ತಾ “ಇದೊಂದು ಐತಿಹಾಸಿಕ ದಿನವಾಗಿದೆ. ಸಿಎಂ ಸಿದ್ದರಾಮಯ್ಯ ಒಬ್ಬ ದಕ್ಷ ಸಿಎಂ. ಡಿಕೆಶಿ ಹೋರಾಟಗಾರ ಎಂದು ಬಣ್ಣಿಸಿದ ಮಹದೇವಪ್ಪ. ಕರ್ನಾಟಕ ರಾಜ್ಯ ಹೊಸ ಇತಿಹಾಸ ಬರೆದಿದೆ. ವಿಶ್ವದ್ಯಂತ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ. 2007 ರಲ್ಲಿ ವಿಶ್ವಸಂಸ್ಥೆ ಈ ನಿರ್ಣಯವನ್ನು ಅಂಗೀಕರಿಸಿತ್ತು. 2008 ರಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ. ಪ್ರಜಾಪ್ರಭುತ್ವದ ಹಿರಿಯಣ್ಣನಾಗಿ ಭಾರತ ಕೆಲಸ ಮಾಡ್ತಿದೆ” ಎಂದರು.

ಉಳಿದಂತೆ ಕಾರ್ಯಕ್ರಮದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಗೃಹ ಸಚಿವ ಜಿ.ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹಾಗೂ ಸಚಿವರುಗಳಾದ ಮಂಕಾಳ ವೈದ್ಯ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ವಿಧಾನಪರಿಷತ್ ಸಭಾಪತಿ ಹೊರಟ್ಟಿ,ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜು, ವಿಧಾನ ಪರಿಷತ್ ಸದಸ್ಯರಾದ ಸುದಾಮ್ ದಾಸ್ ಸೇರಿ 10 ಕ್ಕೂ ಹೆಚ್ಚು ಶಾಸಕರು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು