Wednesday, August 14, 2024

ಸತ್ಯ | ನ್ಯಾಯ |ಧರ್ಮ

ಹಿಂಡೆನ್‌ಬರ್ಗ್ ವರದಿ: ಸೆಬಿಯ ಸಮಗ್ರತೆ ಸಂಪೂರ್ಣ ಧಕ್ಕೆ – ರಾಹುಲ್ ಗಾಂಧಿ

ಹೊಸದೆಹಲಿ: ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬಾಚ್ ಮತ್ತು ಅವರ ಪತಿ ಷೇರುಗಳನ್ನು ಖರೀದಿಸಿದ್ದಾರೆ ಎಂಬ ಹಿಂಡೆನ್‌ಬರ್ಗ್ ವರದಿಯ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸಿವೆ.

ಸಣ್ಣ ಚಿಲ್ಲರೆ ವ್ಯಾಪಾರಿಗಳ ಸಂಪತ್ತನ್ನು ಕಾಪಾಡುವ ಹೊಣೆಗಾರಿಕೆ ಹೊಂದಿರುವ ಸೆಬಿಯ ಸಮಗ್ರತೆಗೆ ಅದರ ಅಧ್ಯಕ್ಷರ ವಿರುದ್ಧದ ಆರೋಪಗಳಿಂದ ಗಂಭೀರ ಧಕ್ಕೆಯಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅವರು ಷೇರುಗಳನ್ನು ಖರೀದಿಸಿರುವುದು ಬಹಿರಂಗವಾಗಿದೆ, ಆದರೆ ಇನ್ನೂ ರಾಜೀನಾಮೆ ನೀಡದಿರುವುದು ಆಶ್ಚರ್ಯಕರವಾಗಿದೆ ಎಂದು ವೀಡಿಯೊ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹೊಸ ಆರೋಪಗಳು ಬೆಳಕಿಗೆ ಬಂದಿದೆ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಲಿದೆಯೇ? ಎಂದು ಕೇಳಿದರು. ಅದಾನಿ ಗ್ರೂಪ್‌ನ ಹಿಂಡೆನ್‌ಬರ್ಗ್ ವರದಿಯೊಂದಿಗೆ, ಲಕ್ಷಾಂತರ ಭಾರತೀಯರ ಉಳಿತಾಯವು ಅಪಾಯದಲ್ಲಿದೆ. ಆರೋಪಗಳು ನಿಜವೇ ಆಗಿದ್ದರೆ ವ್ಯಾಪಾರಿಗಳು ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ಕಳೆದುಕೊಂಡರೆ, ಪ್ರಧಾನ ಮಂತ್ರಿ, ಸೆಬಿ ಮುಖ್ಯಸ್ಥರು ಅಥವಾ ಅದಾನಿ ಇವರಲ್ಲಿ ಯಾರು ಹೊಣೆ? ಎಂದು ಕೇಳಿದರು. ಈ ವಿಚಾರದಲ್ಲಿ ಪ್ರಧಾನಿ ಜೆಪಿಸಿ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದು ಏಕೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

ಸಣ್ಣ ಮತ್ತು ಮಧ್ಯಮ ವರ್ಗದ ಹೂಡಿಕೆದಾರರಿಗೆ ಷೇರುಪೇಟೆಯಲ್ಲಿ ಭದ್ರತೆ ನೀಡಬೇಕಾದರೆ ಜೆಪಿಸಿ ತನಿಖೆ ಅಗತ್ಯ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಭಾರತೀಯ ಸಂವಿಧಾನದ ಮೌಲ್ಯಗಳನ್ನು ಬದಿಗಿಟ್ಟು ಪ್ರಧಾನಿ ತಮ್ಮ ಸ್ನೇಹಿತರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ತಮ್ಮ ಕಾರ್ಪೊರೇಟ್ ಮಿತ್ರರ ಭ್ರಷ್ಟ ನೀತಿಗಳನ್ನು ರಕ್ಷಿಸಲು ಬಿಜೆಪಿ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಅವರೂ ಜೆಪಿಸಿ ತನಿಖೆಗೆ ಆಗ್ರಹಿಸಿದರು. ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಅಖಿಲೇಶ್ ಯಾದವ್ ಜೆಪಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page