Thursday, September 12, 2024

ಸತ್ಯ | ನ್ಯಾಯ |ಧರ್ಮ

ಸೆ.15 ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ; ದಾಖಲೆ ಬರೆಯಲಿರುವ ಬೃಹತ್ ಮಾನವ ಸರಪಳಿ

ಇದೇ ಸೆಪ್ಟೆಂಬರ್ 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೀದರ್ ನಿಂದ ಚಾಮರಾಜನಗರದ ವರೆಗೆ ಬೃಹತ್ ಮಾನವ ಸರಪಳಿಯನ್ನು ರಾಜ್ಯ ಸರ್ಕಾರ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 25 ಲಕ್ಷ ಜನರು ಪರಸ್ಪರ ಕೈ ಹಿಡಿದು ಭಾಗವಹಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

2007 ರಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನವು ಘೋಷಣೆಯಾಗಿದ್ದು ಜಗತ್ತಿನಾದ್ಯಂತ ಇದನ್ನು ಆಚರಿಸಲಾಗುತ್ತಿದೆ. ಈ ದಿನವು ವಿಶ್ವ ಮಟ್ಟದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಸರಿಸುವ ವೇದಿಕೆಯಾಗಿದೆ.

ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಾರುವ ಮಾನವ ಸರಪಳಿಯು ಜಗತ್ತಿನ ಅತಿ ಉದ್ದದ ಸುಮಾರು 2500 ಕಿಲೋಮೀಟರ್ ಮಾನವ ಸರಪಳಿಯಲ್ಲಿ ಒಂದಾಗಿರಲಿದೆ. ಇದರಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿ ಕಿಲೋಮೀಟರ್ ಗೆ 1000 ಜನರು ಇರಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಜನ ಸಾಮಾನ್ಯರೊಂದಿಗೆ ಸೇರಿ ಇಂತಹದ್ದೊಂದು ಮಹತ್ತರ ಕೆಲಸವನ್ನು ಮಾಡುವ ನೇತೃತ್ವವನ್ನು ಕರ್ನಾಟಕ ರಾಜ್ಯ ಸರ್ಕಾರ ವಹಿಸಿಕೊಂಡಿದೆ. ಇದು ಬೀದರ್ ನಿಂದ ಚಾಮರಾಜನಗರದವರೆಗೆ ಒಟ್ಟು 31 ಜಿಲ್ಲೆಗಳನ್ನು ಒಳಗೊಳ್ಳಲಿದೆ.

ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜನರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂದೇಶವನ್ನು ಬಿತ್ತರಿಸುವುದು ಮಾತ್ರವಲ್ಲದೇ, ಸರ್ಕಾರದ ಬಗೆಗಿನ ಜನರ ಭಾವನೆಯನ್ನು ಸಂಗ್ರಹಿಸಿ ಬಿತ್ತರಿಸಲಾಗುತ್ತದೆ.

ಮಾನವ ಸರಪಳಿಯ ಜೊತೆಗೆ 10 ಲಕ್ಷ ಸಸಿ ನೆಡುವ ಕಾರ್ಯಕ್ರಮ
ಈ ದಿನದಂದು ಮಾನವ ಸರಪಳಿಯ ಜೊತೆಗೆ ರಾಜ್ಯಾದ್ಯಂತ ಹತ್ತು ಲಕ್ಷ ಸಸಿಗಳನ್ನೂ ನೆಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಮಾನ್ಯ ಡಾ ಹೆಚ್ ಸಿ ಮಹದೇವಪ್ಪನವರು ಈ ಬೃಹತ್ ಆಶಯದ ರುವಾರಿಗಳಾಗಿದ್ದು ಸರ್ಕಾರದ ಇತರೆ ಇಲಾಖೆಗಳು ಪ್ರಜಾಪ್ರಭುತ್ವದ ಆಶಯದ ರಥವನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸ ಮಾಡಲಿವೆ.

2024 ರ ಪ್ರಜಾಪ್ರಭುತ್ವ ದಿನದ ಮುಖ್ಯಾಂಶಗಳು
ಇದು ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಪ್ರದರ್ಶಿಸುವುದಲ್ಲ, ಆದರೆ ನಮ್ಮ ಪರಿಸರವನ್ನು ರಕ್ಷಿಸುವಂತಹ ನಮ್ಮ ಮೂಲಭೂತ ಕರ್ತವ್ಯಗಳನ್ನು ನೆನಪಿಸುತ್ತದೆ.

ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಒತ್ತಿಹೇಳುವ ಪ್ರಜಾಪ್ರಭುತ್ವದ ಬ್ಯಾನರ್ ಮತ್ತು ಭಿತ್ತಿಪತ್ರ ಗಳನ್ನು ಪ್ರದರ್ಶಿಸುತ್ತಾರೆ. ಈ ಸಂದರ್ಭದಲ್ಲಿ ಮಾನವ ಸರಪಳಿಯಲ್ಲಿ ಭಾಗವಹಿಸುವವರಿಂದ ರಾಜ್ಯಾದ್ಯಂತ 10 ಲಕ್ಷ ಸಸಿಗಳನ್ನು ನೆಡಲು ಆಯೋಜಿಸಲಾಗಿದೆ. ಆ ಮೂಲಕ ನಮ್ಮ ಪರಿಸರವನ್ನು ರಕ್ಷಿಸುವಂತಹ ಕಾಳಜಿಯನ್ನೂ ನೆನಪಿಸುತ್ತಾರೆ.

ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ವಿಶಿಷ್ಟ ಸನ್ನಿವೇಶದ ಭಾಗವಾಗುತ್ತಾರೆ. ವಿಧಾನಸೌಧದ ಮುಂದೆ ಭಾರತದ ಸಂವಿದಾನದ ಪೀಠಿಕೆಯ ಪ್ರತಿಯನ್ನು ಸ್ಥಳದಲ್ಲೇ ಮುದ್ರಿಸಲು ಅವರಿಗೆ ಒಂದು ಅನನ್ಯ ಅವಕಾಶವಿದೆ.

ಮಾನವ ಸರಪಳಿಯ ಮಾರ್ಗ ನಕ್ಷೆಯನ್ನು QR ಕೋಡ್‌ನೊಂದಿಗೆ ಪ್ರಕಟಿಸಲಾಗುತ್ತದೆ. ಇದರಿಂದ ಯಾರಾದರೂ ಮಾನವ ಸರಪಳಿಯಲ್ಲಿ ಸೇರಬಹುದು. ಬೆಳಗ್ಗೆ 9:30 ಗಂಟೆಗೆ ಮಾನವ ಸರಪಳಿ ರಚಿಸಲಾಗುವುದು. ಬೆಳಗ್ಗೆ 10:00ಕ್ಕೆ ಮಾನವ ಸರಪಳಿ ಬಿಡುವ ಮುನ್ನ ಸಂವಿಧಾನ ಪೀಠಿಕೆ ವಾಚನ ನಡೆಯಲಿದೆ. ಬೆಳಗ್ಗೆ 10:00 ರಿಂದ 10:30 ರ ವರೆಗೆ ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಲಿದೆ.

ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕರ್ನಾಟಕ ಸರ್ಕಾರದಿಂದ ಪ್ರಶಂಸಾ ಪತ್ರಕ್ಕೆ ಅರ್ಹರಾಗಿರುತ್ತಾರೆ. ಭಾಗವಹಿಸುವವರ ಛಾಯಾಚಿತ್ರವನ್ನು ಪ್ರಮಾಣಪತ್ರದಲ್ಲಿ ಮುದ್ರಿಸಲು ಅವಕಾಶ ಹೊಂದಿರಲಿದೆ, ಇದು ಭಾಗವಹಿಸುವವರಿಗೆ ಜೀವಮಾನದ ಸ್ಮರಣೆಯಾಗಲಿದೆ. ಒಂದು ಫೋಟೋ ಫ್ರೇಮ್‌ನಲ್ಲಿ, 5 ಸದಸ್ಯರವರೆಗೆ ಅವಕಾಶವಿದ್ದು, ಕುಟುಂಬಗಳು ಒಟ್ಟಿಗೆ ನಿಲ್ಲಲು, ಚಿತ್ರವನ್ನು ತೆಗೆದುಕೊಳ್ಳಲು, ಅದನ್ನು ಅಪ್‌ಲೋಡ್ ಮಾಡಲು ಮತ್ತು ಪ್ರಮಾಣಪತ್ರದಲ್ಲಿ ಮುದ್ರಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಅಮೂಲ್ಯವಾದ ಸ್ಮರಣಿಕೆಯಾಗುವುದು.

2023 ರ ಪ್ರಜಾಪ್ರಬುತ್ವ ದಿನದ ಮೆಲುಕು

2023 ಸುಮಾರು 20 ಹೊರ ದೇಶಗಳು, ಭಾರತದ 507 ಜಿಲ್ಲೆಗಳು ಮತ್ತು ರಾಜ್ಯದ 31 ಜಿಲ್ಲೆಗಳಲ್ಲಿ ವಾಸಿಸುವ ಭಾರತೀಯರು ನೇರವಾಗಿ ಮತ್ತು ಆನ್ ಲೈನ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 2 ಕೋಟಿ 31 ಲಕ್ಷಕ್ಕೂ ಹೆಚ್ಚು ಜನರು ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಗೆ ಈ ದಾಖಲೆ ಸೇರ್ಪಡೆಯಾಯಿತು.

ಈ ಮಹತ್ವದ ಕಾರ್ಯಕ್ರಮದಲ್ಲಿ ಸುಮಾರು 10000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಜೊತೆಗೆ NGO ಮತ್ತು ಸಂಘ ಸಂಸ್ಥೆಗಳೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page