Wednesday, January 28, 2026

ಸತ್ಯ | ನ್ಯಾಯ |ಧರ್ಮ

ಅಂತರರಾಷ್ಟ್ರೀಯ ಕುಸ್ತಿಪಟು, ಹಾಲಿವುಡ್ ನಟ ಹಲ್ಕ್ ಹೋಗನ್ ನಿಧನ

ಕುಸ್ತಿಪಟು ಹಾಗೂ ಹಾಲಿವುಡ್ ನಟ ಹಲ್ಕ್ ಹೋಗನ್ ತಮ್ಮ 71 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮನರಂಜನಾ ಜಗತ್ತಿನ ಅತಿ ದೊಡ್ಡ ವೇದಿಕೆಯಾಗಿರುವ WWE ಸಂಸ್ಥೆಯಲ್ಲಿ ಸುಮಾರು 4 ದಶಕಗಳ ಕಾಲ ತಮ್ಮದೇ ಆದ ಅಸ್ಮಿತೆ ಉಳಿಸಿಕೊಂಡಿದ್ದ ದಂತಕತೆ ಹೃದಯಾಘಾತಕ್ಕೆ ತುತ್ತಾಗಿ ನಿಧನ ಹೊಂದಿದ್ದಾರೆ.

ಆಗಸ್ಟ್ 11, 1953 ರಂದು ಜಾರ್ಜಿಯಾದ ಆಗಸ್ಟಾದಲ್ಲಿ ಜನಿಸಿದ ಹಲ್ಕ್ ವೃತ್ತಿಪರ ಕುಸ್ತಿಯ ಇತಿಹಾಸದಲ್ಲಿ ಅತ್ಯಂತ ದೊಡ್ಡ ಐಕಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಕುಸ್ತಿಯ ಸುವರ್ಣ ಯುಗದ ಮುಖವೆಂದು ಆಗಾಗ್ಗೆ ಪ್ರಶಂಸಿಸಲ್ಪಡುತ್ತಿದ್ದ ಹೊಗನ್ ಅವರ ಪ್ರಭಾವವು ಕುಸ್ತಿಯನ್ನೂ ಮೀರಿದಂತೆ ಜಾಗತಿಕ ಸೂಪರ್ ಸ್ಟಾರ್ ಎಂಬಂತೆ ಬಿಂಬಿಸಲ್ಪಟ್ಟಿದೆ.

ಅವರ ಕುಸ್ತಿ ವೃತ್ತಿಜೀವನವು 1979 ರಲ್ಲಿ ಪ್ರಾರಂಭವಾಯಿತು, ಆದರೆ 1980 ರ ದಶಕದಲ್ಲಿ ಹೊಗನ್ ಮನೆಮಾತಾದರು, ಅನೇಕ ರೆಸಲ್‌ಮೇನಿಯಾ ಈವೆಂಟ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page