Saturday, July 26, 2025

ಸತ್ಯ | ನ್ಯಾಯ |ಧರ್ಮ

ಬಿಟ್ ಕಾಯಿನ್ ತನಿಖೆ ; ನಳಿನ್ ಕುಮಾರ್ ಕಟೀಲ್ ಕೂತಲ್ಲೇ ಬೆವರಿದ್ದೇಕೆ : ಕಾಂಗ್ರೆಸ್ ವ್ಯಂಗ್ಯ

ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ನಡೆದ ಹಗರಣಗಳ ತನಿಖೆ ನಡೆಸುವ ಬಗ್ಗೆ ಕಾಂಗ್ರೆಸ್ ಸರ್ಕಾರ ಹೇಳಿಕೆ ನೀಡಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುವ ಬಗ್ಗೆ ಹೇಳಿಕೆ ನೀಡುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೂತಲ್ಲೇ ಬೆವರಿದ್ದು ಯಾಕೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ‌.

ಬಿಜೆಪಿ ಆಡಳಿತದ ಅವಧಿಯಲ್ಲಿ ಬಿಟ್ ಕಾಯಿನ್ ಹಗರಣ ದೊಡ್ಡ ಸುದ್ದಿ ಮಾಡಿತ್ತು. ಮಾಧ್ಯಮಗಳು ಸಹ ಒಂದರ ಹಿಂದೆ ಒಂದರಂತೆ ಸುದ್ದಿ ಮಾಡಿದ್ದೇ ಮಾಡಿದ್ದು. ಆದರೆ ತನಿಖೆ ಯಾವ ಹಂತಕ್ಕೆ ಬಂದು ನಿಂತಿತ್ತು ಎಂಬುದು ಸದ್ದೇ ಇಲ್ಲದಂತೆ ಮರೆಮಾಚಿತ್ತು. ಒಂದು ಹಂತದಲ್ಲಿ ಬಿಜೆಪಿ ಪಕ್ಷವೇ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದೆ ಎಂಬ ಮಾತುಗಳು ಕೇಳಿ ಬಂದವು.

ಇನ್ನೊಂದು ಕಡೆ ಬಿಜೆಪಿಯ ಘಟಾನುಘಟಿ ನಾಯಕರ ಹೆಸರುಗಳು ಈ ಹಗರಣದ ಹಿಂದೆ ಕೇಳಿ ಬಂದಿತ್ತು. ಅದರಲ್ಲಿ ಮುಖ್ಯವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರೇ ಹೆಚ್ಚು ಕೇಳಿ ಬಂದಿತ್ತು. ನಂತರ ಸದ್ದೇ ಇಲ್ಲದೇ ಪ್ರಕರಣದ ತನಿಖೆ ಮೂಲೆಗುಂಪಾಗಿತ್ತು.

ಈ ಹಿಂದೆಯೇ ಬಿಟ್ ಕಾಯಿನ್ ಹಗರಣದಲ್ಲಿ ನಳಿನ್ ಕುಮಾರ್ ಕಟೀಲ್ ಹೆಸರು ಪ್ರಸ್ತಾಪಿಸಿ ಕಾಂಗ್ರೆಸ್ ವಕ್ತಾರ ಕೆ.ಲಕ್ಷ್ಮಣ್ ಆರೋಪಿಸಿದ್ದರು. ಎರಡು ವರ್ಷಗಳ ಹಿಂದೆ ಪ್ರಕರಣದ ತನಿಖೆ ಹಾದಿ ತಪ್ಪಿದಾಗಲೂ ಕೆ.ಲಕ್ಷ್ಮಣ್ ಆರೋಪಿಸಿದ್ದರು. ಅದಕ್ಕೆ ಸರಿಯಾಗಿ ಸಿಐಡಿ ತಂಡ ಪ್ರಕರಣವನ್ನು ಅರ್ಧಕ್ಕೆ ಸ್ಥಗಿತಗೊಳಿಸಿತ್ತು.

ಸಧ್ಯ ಬಿಟ್ ಕಾಯಿನ್ ಹಗರಣ ಈಗ ಮತ್ತೆ ಸುದ್ದಿಯಲ್ಲಿದ್ದು, ಕಾಂಗ್ರೆಸ್ ಸರ್ಕಾರ ಅದರ ಸಮಗ್ರ ತನಿಖೆ ಮಾಡಿಸಲು ಮುಂದಾಗಿದೆ. ಈ ಒಂದು ವಿಚಾರವನ್ನು ಇಟ್ಟು ಕಾಂಗ್ರೆಸ್ ಪಕ್ಷ ‘ನಮ್ಮ ಸರ್ಕಾರ ಬಿಟ್ ಕಾಯಿನಾ ಹಗರಣದ ಬುಡ ಬೇರುಗಳನ್ನು ಜಾಲಾಡಲಿದೆ, ಅಂದಹಾಗೆ ನಳಿನ್ ಕುಮಾರ್ ಕಟೀಲರು ಕೂತಲ್ಲೇ ಬೆವರುತ್ತಿದ್ದಾರಂತೆ.. ಏಕಿರಬಹುದು ಎಂದು ವ್ಯಂಗ್ಯ ಮಾಡಿದೆ


https://twitter.com/INCKarnataka/status/1673982651517259776?t=H4puuz_VowvZWP3LBLKOmA&s=19

Related Articles

ಇತ್ತೀಚಿನ ಸುದ್ದಿಗಳು

You cannot copy content of this page