Friday, March 13, 2026

ಸತ್ಯ | ನ್ಯಾಯ |ಧರ್ಮ

ಡಿಕೆಶಿ ಆಪ್ತ ಇಕ್ಬಾಲ್ ಹುಸೇನ್ ಹೊಸ ಕಿರಿಕ್..!

ರಾಮನಗರ : ಸಿಎಂ ಸಿದ್ದರಾಮಯ್ಯ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಆಪ್ತ, ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಮತ್ತೊಮ್ಮೆ ಅಸಮಧಾನ ಹೊರಹಾಕಿದ್ದಾರೆ. ಬಜೆಟ್ ನನಗೆ ಸಮಾಧಾನ ತಂದಿಲ್ಲ ಎಂದು ರಾಜ್ಯ ಬಜೆಟ್ ವಿರುದ್ಧ ಹರಿಹಾಯ್ದಿದ್ದಾರೆ.

ರಾಮನಗರದ ಮೊಟ್ಟೆದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ‘ಬಜೆಟ್ ನನಗೆ ಸಮಾಧಾನ ತಂದಿಲ್ಲ. ನನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಿಎಂಗೆ ಮನವಿ ಮಾಡಿದ್ದೆ. ಆದರೆ, ಅದಕ್ಕೆ ಸ್ಪಂದಿಸಿಲ್ಲ’ ಎಂದು ಕಿಡಿಕಾರಿದರು. ‘ಭಕ್ಷಿಕೆರೆ ಒಡೆದು ಪ್ರವಾಹದಿಂದ ಉಂಟಾದ ಸಮಸ್ಯೆ ಬಗ್ಗೆ ಫೋಟೋ ತೋರಿಸಿ ಮಾಹಿತಿ ಕೊಟ್ಟಿದ್ದೆ. ಹಿಂದೆ ಇದ್ದವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದಿದ್ದಾರೆ. ಆದರೆ, ಬಜೆಟ್​ನಲ್ಲಿ ಏನೂ ಕೊಟ್ಟಿಲ್ಲ’ ಎಂದು ಹೇಳಿದ್ದಾರೆ.

ರಾಮನಗರ ಕ್ಷೇತ್ರಕ್ಕೆ ರಸ್ತೆ, ಚರಂಡಿ ಹಾಗೂ ನೀರಾವರಿ ಬಗ್ಗೆ ನಾಲ್ಕೈದು ಬಾರಿ ಮನವಿ ಮಾಡಿದ್ದೆ. ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ಆದರೆ ಸಿಎಂ ಏನೂ ಮಾಡಲಿಲ್ಲ, ನನಗೆ ನೋವಾಗಿದೆ ಎಂದು ಇಕ್ಬಾಲ್ ಹುಸೇನ್ ಕಿಡಿ ಕಾರಿದ್ದಾರೆ. ‘ಸಿಎಂ ಸಿದ್ದರಾಮಯ್ಯ ಪಾರದರ್ಶಕವಾಗಿ ಅನುದಾನ ಕೊಡ್ತಾರೆ ಎನ್ನುವ ನಂಬಿಕೆ ಇತ್ತು. ಈಗ ಆ ನಂಬಿಕೆ ಹುಸಿಯಾಗಿದೆ ಎಂದಿದ್ದಾರೆ.

ಡಿಕೆಶಿಗೆ ಯುಗಾದಿ ಬಳಿಕ ಒಳ್ಳೆಯ ಸುದ್ದಿ
ಸಿಎಂ ಸಿದ್ದರಾಮಯ್ಯನವ್ರು ನಮಗೆ ಏನೂ ಕೊಡುತ್ತಿಲ್ಲ. ಅನಿವಾರ್ಯವಾಗಿ ನಾವು ಇನ್ನು ಡಿಸಿಎಂ ಹಿಂದೆಯೇ ಹೋಗಬೇಕು. ನಮ್ಮ ಕಷ್ಟ-ಸುಖವನ್ನ ಅವರ ಮೇಲೆಯೇ ಹಾಕಬೇಕು ಎಂದು ಇಕ್ಬಾಲ್ ಹುಸೇನ್ ಹೇಳಿದರು.
‘ಈ ಹಿಂದೆ ಡಿ ಕೆ ಶಿವಕುಮಾರ್ ಅವರಿಂದಲೇ ಅಭಿವೃದ್ಧಿ ಕೆಲಸ ಮಾಡಿಸಿಕೊಂಡಿದ್ದೆ. ಇದು ಅವರ ಜಿಲ್ಲೆ, ಮುಂದೆಯೂ ಅವರ ಮೇಲೆಯೇ ಭಾರ ಹಾಕಬೇಕಾಗುತ್ತೆ. ಕ್ಷೇತ್ರದ ಜವಾಬ್ದಾರಿ ಡಿಸಿಎಂ ಅವರ ಮೇಲೂ ಇದೆ’ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page