ಅಮೆರಿಕ, ಇಸ್ರೇಲ್ ದಾಳಿಗೆ ನಲುಗಿದ ಇರಾನ್ – 200 ಕ್ಕೂ ಹೆಚ್ಚು ಸಾ*ವು

ಟೆಹರಾನ್ : ಮಧ್ಯಪ್ರಾಚ್ಯ (Middle east ) ರಾಷ್ಟ್ರಗಳಲ್ಲಿ ಯುದ್ಧದ (War ) ಭೀತಿ ಆವರಿಸಿದ್ದು, ಇರಾನ್ ಮೇಲೆ ಅಮೇರಿಕ (America ) ಗದಾಪ್ರಹಾರ ಮುಂದುವರಿಸಿದೆ.

ಪರಮಾಣು ಒಪ್ಪಂದದ ಮಾತುಕತೆಗೆ ಸ್ಪಂದಿಸದ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿದೆ. ಇಸ್ರೇಲ್ ರಾಜಧಾನಿ ಮತ್ತು ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ವಾಯನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ದಾಳಿ ನಡೆಸಿದೆ.

ಇರಾನ್‌ನ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಫೋಟದ ಸದ್ದು ಮೊಳಗಿದ್ದು, ಆಕಾಶದಲ್ಲಿ ದಟ್ಟವಾದ ಹೊಗೆ ಆವರಿಸಿದೆ. ಜನರು ಪ್ರಾಣಭಯದಿಂದ ಸುರಕ್ಷಿತ ಸ್ಥಳಗಳತ್ತ ಓಡುತ್ತಿರುವುದು ಕಂಡುಬಂದಿದೆ. ಈ ದಾಳಿಯಲ್ಲಿ ಕೇವಲ ಸೇನಾ ನೆಲೆಗಳು ಮಾತ್ರವಲ್ಲದೆನಾಗರಿಕ ಪ್ರದೇಶಗಳಿಗೂ ಹಾನಿಯಾಗಿದೆ. .

ಇರಾನ್‌ನ 30ಕ್ಕೂ ಹೆಚ್ಚು ನಗರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ರಾಜಧಾನಿ ಟೆಹರಾನ್‌ನ ಜಮ್ಮೂರಿ, ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಉತ್ತರ ಭಾಗದ ಸೈಯದ್ ಖಂದಾನ್ ಪ್ರದೇಶ, ಅಣುಶಕ್ತಿ ಸಂಶೋಧನಾ ಕೇಂದ್ರವಿರುವ ಇಸ್ಪೃಹಾನ್ ಮತ್ತು ನಟಾಂಜ್, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಮುಖ ನೆಲೆಗಳು ಬಂದರು ನಗರಿ ಬುಶೆಹರ್ ಸೇರಿದಂತೆ ಪ್ರಮುಖ ನಗರ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ.

ಇನ್ನು, ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಅನ್ನು ಗುರಿಯಾಗಿಸಿಕೊಂಡು ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲದೇ ‘ಆಪರೇಷನ್ ಟ್ರ ಪ್ರಾಮಿಸ್ 4’ ಹೆಸರಿನಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಮೂಲಸೌಕರ್ಯ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ದಾಳಿ ನಡೆಸಿದೆ.

Related Articles

ಇತ್ತೀಚಿನ ಸುದ್ದಿಗಳು