Monday, January 6, 2025

ಸತ್ಯ | ನ್ಯಾಯ |ಧರ್ಮ

ಐರ್ಲೆಂಡ್ ಜೊತೆ ಏಕದಿನ ಸರಣಿ | ಹರ್ಮನ್ ಗೆ ವಿಶ್ರಾಂತಿ, ಭಾರತ ತಂಡದ ನಾಯಕಿಯಾಗಿ ಸ್ಮೃತಿ ಮಂಧಾನ

ಭಾರತ ಮಹಿಳಾ ತಂಡ ತವರಿನಲ್ಲಿ ಐರ್ಲೆಂಡ್ ವಿರುದ್ಧ (IND w Vs IRE w) ಮೂರು ಏಕದಿನ ಸರಣಿಯನ್ನು ಆಡಲಿದೆ. ಈ ಪಂದ್ಯಗಳು ರಾಜ್‌ಕೋಟ್‌ನ ನಿರಂಜನ್ ಶಾ ಮೈದಾನದಲ್ಲಿ ನಡೆಯಲಿದೆ.

ಈ ವೇಳೆ ಮಹಿಳಾ ತಂಡದ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದೆ. ನಿಯಮಿತ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ವೇಗದ ಬೌಲರ್ ರೇಣುಕಾಸಿಂಗ್ ಅವರಿಗೆ ಆಡಳಿತ ಮಂಡಳಿ ವಿಶ್ರಾಂತಿ ನೀಡಿದೆ. ಇದರೊಂದಿಗೆ ತಂಡದ ಸಾರಥ್ಯವನ್ನು ಸ್ಮೃತಿ ಮಂಧಾನಾಗೆ ವಹಿಸಲಾಗಿದೆ. ದೀಪ್ತಿ ಶರ್ಮಾ ಅವರನ್ನು ಉಪನಾಯಕಿಯಾಗಿ ನೇಮಿಸಲಾಗಿದೆ. ಆಯ್ಕೆ ಸಮಿತಿ 15 ಮಂದಿಯ ತಂಡವನ್ನು ಪ್ರಕಟಿಸಿದೆ. ಐರ್ಲೆಂಡ್ ಈಗಾಗಲೇ ತಂಡವನ್ನು ಪ್ರಕಟಿಸಿದೆ.

ತಂಡಗಳು:

ಭಾರತ: ಸ್ಮೃತಿ ಮಂಧಾನ (ನಾಯಕಿ), ದೀಪ್ತಿ ಶರ್ಮಾ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ಉಮಾ ಛೆಟ್ರಿ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಾಬ್ನಿಸ್, ರಾಘ್ವಿ ಬಿಸ್ಟ್, ಪ್ರಿಯಾ ಮಿಶ್ರಾ, ತನುಜಾ, ತನುಜಾ ಸಾಧು, ಸೈಮಾ ಠಾಕೂರ್, ಸಯಾಲಿ ಸತ್ಘರೆ

ಐರ್ಲೆಂಡ್: ಗ್ಯಾಬಿ ಲೆವಿಸ್ (ಕ್ಯಾಪ್ಟನ್), ಅವಾ ಕ್ಯಾನಿಂಗ್, ಕ್ರಿಸ್ಟಿನಾ ಕೌಲ್ಟರ್-ರೈಲಿ, ಅಲಾನಾ ಡಾಲ್ಜೆಲ್, ಜಾರ್ಜಿನಾ ಡೆಂಪ್ಸೆ, ಸಾರಾ ಫೋರ್ಬ್ಸ್, ಜೊವಾನ್ನಾ ಲಾಘರಾನ್, ನೈಮಿ ಮ್ಯಾಗೈರ್, ಲೀ ಪಾಲ್, ಓರ್ಲಾ ಪ್ರೆಂಡರ್‌ಗಾಸ್ಟ್, ಉನಾ ರೇಮಂಡ್, ಫ್ರೇಯಾ ಸರ್ಜೆಟ್, ರೆಬೆಕಾ ಸ್ಟಾಕ್‌ಲ್

ಪಂದ್ಯಗಳ ವಿವರ:

ಮೊದಲ ODI: ಜನವರಿ 10, 11 am

ಎರಡನೇ ODI: ಜನವರಿ 12, 11 am

ಮೂರನೇ ODI: ಜನವರಿ 15, 11 am

Related Articles

ಇತ್ತೀಚಿನ ಸುದ್ದಿಗಳು

You cannot copy content of this page