ಸೂಪರ್ ಸ್ಟಾರ್ ಕಂಗನಾ ರಣಾವತ್ ಮುಂಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಇನ್ನು ಈ ವಿಷಯ ತಿಳಿದ ಬಳಿಕ ಕಂಗನಾ ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಅಭಿಮಾನಿಗಳ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಕಂಗನಾ ಬಿಜೆಪಿ ಟಿಕೆಟ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲಿದ್ದಾರೆ ಎಂದು ಆಕೆಯ ತಂದೆ ಅಮರ್‌ದೀಪ್ ರನೌತ್ ಹೇಳಿದ್ದಾರೆ ಎನ್ನಲಾಗಿದೆ.
ಕಂಗನಾ ರಣಾವತ್ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ‘ಕುಲ್ಲು’ ನಿವಾಸದಲ್ಲಿ ಇತ್ತೀಚೆಗೆ ನಡೆದ ಸಭೆಯ ನಂತರ ಈ ವಿಷಯ ಬಹಿರಂಗವಾಗಿದ್ದು, ಈ ಬಾರಿ ಕಂಗಾನ ನಿಜವಾಗಿಯೂ ರಾಜಕೀಯಕ್ಕೆ ಎಂಟ್ರಿ ಕೊಡ್ತಾರ, ಈ ಬಾರಿ ಅವರಿಗೆ ಆಸನ ದೊರೆಯುವುದಾ ಎಂಬ ಕುತೂಹಲ ಮುಂದುವರಿದಿದೆ.