ಚಾರಣಕ್ಕೆ ಕುದುರೆಮುಖ ಈಗ ಮುಕ್ತ ? ಬುಕಿಂಗ್‌ ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಚಿಕ್ಕಮಗಳೂರು : ಕುದುವರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ ಪೀಕ್‌, ಕುದುರೆಮುಖ ಪೀಕ್‌, ನರಸಿಂಹಪರ್ವ, ಹಿಡ್ಲುಮನೆ ಫಾಲ್ಸ್‌ ಹಾಗೂ ಕೊಡಚಾದ್ರಿ ಟ್ರೆಕ್‌ಗಳನ್ನು ಮೇ 1 ರಿಂದ ಜಾರಿಗೆ ಬರುವಂತೆ ಚಾರಣಿಗರಿಗೆ, ವೀಕ್ಷಣೆ ಸಲುವಾಗಿ ಮುಕ್ತಗೊಳಿಸಲಾಗಿದೆ.

ಪ್ರವಾಸಿಗರು ಆನ್‌ಲೈನ್‌ aranyavihara.karnataka.gov.in ಮೂಲಕ ಕಾಯ್ದಿರಬಹುದು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಪ್ರಕಟಣೆ ತಿಳಿಸಿದೆ. ಅಂದಹಾಗೆ, ಕಾಡ್ಗಿಚ್ಚು, ಬೆಂಕಿಯ ಕಾರಣದಿಂದ ಚಾರಣಿಗರ ಕ್ಷೇಮಕ್ಕಾಗಿ ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಚಾರಣವನ್ನು ನಿರ್ಬಂಧಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು