Tuesday, September 2, 2025

ಸತ್ಯ | ನ್ಯಾಯ |ಧರ್ಮ

ದೇಶದಲ್ಲಿ ಹೆಚ್ಚಾಯ್ತು ಮೆದುಳು ತಿನ್ನುವ ಅಮೀಬಾ ಖಾಯಿಲೆ ?

ಕೇರಳ : ಕೋಝಿಕ್ಕೋಡ್ (Kozhikode) ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಪರೂಪದ ಮತ್ತು ಮಾರಕವಾದ ಮೆದುಳಿನ ಸೋಂಕು ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್‌ಗೆ (Amoebic Meningoencephalitis) ಚಿಕಿತ್ಸೆ ಪಡೆಯುತ್ತಿದ್ದ ಮೂರು ತಿಂಗಳ ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇರಳದ (Kerala) ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂರಕ್ಕೇರಿದ ಸಾವಿನ ಸಂಖ್ಯೆ
ಕೇರಳದಲ್ಲಿ ಆಗಸ್ಟ್‌ ತಿಂಗಳಲ್ಲಿ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್‌ ಸಮಸ್ಯೆಗೆ ಇನ್ನೊಬ್ಬರು ಬಲಿಯಾಗಿದ್ದು, ಒಂದು ಒಂದು ತಿಂಗಳಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಕೋಝಿಕ್ಕೋಡ್ ಜಿಲ್ಲೆಯ ಓಮಸ್ಸೇರಿಯ ಅಬುಬಕರ್ ಸಿದ್ದಿಕ್ ಅವರ ಮಗ ಮೂರು  ತಿಂಗಳ ಮಗು, ಕಳೆದ ಒಂದು ತಿಂಗಳಿನಿಂದ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್‌ಗೆ ಕಾಯಿಲೆಯಿಂದ ಬಳಲುತ್ತಿದ್ದ. ಆದರೆ ಭಾನುವಾರ ಮಗುವಿನ ಸ್ಥಿತಿ ಹದೆಗೆಟ್ಟಿತ್ತು. ಇದರಿಂದಾಗಿ ಐಸಿಯುನಲ್ಲಿ ಮಗು ಸಾವನ್ನಪ್ಪಿದೆ.

ಮತ್ತೊಬ್ಬ ವ್ಯಕ್ತಿ ಮಲಪ್ಪುರಂ ಜಿಲ್ಲೆಯ ಕಪ್ಪಿಲ್‌ನ 52 ವರ್ಷದ ರಾಮ್ಲಾ ಎಂದು ಗುರುತಿಸಲಾಗಿದ್ದು, ಜುಲೈ 8 ರಂದು ರಾಮ್ಲಾ ಅವರಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಅವರನ್ನ ಮೊದಲು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆನಂತರ ಅವರ ಪರಿಸ್ಥಿತಿ ಹದಗೆಟ್ಟಿತ್ತು. ಹಾಗಾಗಿ ಅವರನ್ನ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಇದಕ್ಕೂ ಮೊದಲು, ಆಗಸ್ಟ್ 14 ರಂದು, ತಮರಸ್ಸೇರಿಯ ಒಂಬತ್ತು ವರ್ಷದ ಬಾಲಕಿ ಸಹ ಅದೇ ಸೋಂಕಿನಿಂದ ಸಾವನ್ನಪ್ಪಿದ್ದಳು.

 ಸದ್ಯ ಚಿಕಿತ್ಸೆ ಪಡೆಯುತ್ತಿರುವ 8 ಜನ

ಇನ್ನು ಆರೋಗ್ಯ ಅಧಿಕಾರಿಗಳ ಪ್ರಕಾರ, ಕೋಝಿಕ್ಕೋಡ್, ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳ ಸುಮಾರು 8 ರೋಗಿಗಳು ಸದ್ಯ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್‌ಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ, ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಸೋಂಕು ಪ್ರಾಥಮಿಕವಾಗಿ ಕಲುಷಿತ ನೀರಿನಲ್ಲಿ ಈಜುವುದರಿಂದ ಅಥವಾ ಸ್ನಾನ ಮಾಡುವುದರಿಂದ ಬರುತ್ತದೆ ಎನ್ನಲಾಗಿದೆ. ನೆಗ್ಗೇರಿಯಾ ಫೌಲೇರಿ ಹೆಸರಿನ ಅಪರೂಪದ ಹಾಗೂ ಅಪಾಯಕಾರಿ ಸೂಕ್ಷ್ಮಾಣು ಜೀವಿಯಿಂದ ಹರಡುವ ಅಮೀಬಾ ಸೋಂಕು ಕೇರಳದಲ್ಲಿ ಕಂಡು ಬಂದಿದೆ. ಕಲುಷಿತ ನೀರಿನಲ್ಲಿರುವ ಪರಾವಲಂಬಿಯಲ್ಲದ ಅಮೀಬಾ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಹರಡುತ್ತದೆ. ಮೂಗಿನ ಮೂಲಕ ನಮ್ಮ ಶರೀರ ಸೇರುವ ಸೂಕ್ಷ್ಮಾಣು ಜೀವಿ, ಮೆದುಳಿನ ಅಂಗಾಂಶಕ್ಕೆ ಭಾರೀ ಹಾನಿ ಉಂಟುಮಾಡುತ್ತದೆ. ಇದರಿಂದ ಸಾವು ಕೂಡ ಸಂಭವಿಸುತ್ತದೆ.  ಈ ವರ್ಷ ಕೇರಳದ ವಿವಿಧ ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಸುಮಾರು 42 ಪ್ರಕರಣಗಳು ಪತ್ತೆಯಾಗಿದೆ. ಹೀಗಾಗಿ ಜಿಲ್ಲಾದ್ಯಂತ ಕಟ್ಟೆಚ್ಚರವಹಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page