Monday, July 14, 2025

ಸತ್ಯ | ನ್ಯಾಯ |ಧರ್ಮ

ಬಾಂಗ್ಲಾ ವಿರುದ್ಧ ಇಶಾನ್ ಕಿಶನ್ 210 ರನ್

ಚಿತ್ತಗಾಂಗ್ : ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸರಣಿಯ ಮೂರನೇ ಪಂದ್ಯ ಇಂದು ನಡೆಯುತ್ತಿದ್ದು ಇಶಾನ್ ಕಿಶನ್ 126 ಎಸೆತಗಳಲ್ಲಿ 200 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶದ ಆಟಗಾರರಿಗೆ ತಮ್ಮ ಅದ್ಭುತ ಆಟ ಪ್ರದರ್ಶಿಸುವುದರೊಂದಿಗೆ ದ್ವಿತೀಯ ಸೆಂಚೂರಿ ಬಾರಿಸುವುದರೊಂದಿಗೆ ಬಾಂಗ್ಲಾ ಬೌಲರ್ ‌ಗಳ ಬೆವರಿಳಿಸಿದರು.

ಒಟ್ಟಾರೆ 131 ಎಸೆತಗಳಲ್ಲಿ 210 ರನ್ ಸಿಡಿಸಿ ಲಾಂಗ್ ಆನ್ ನಲ್ಲಿ ಟಸ್ಕನ್ ಅಹ್ಮದ್ ಅವರಿಗೆ ವಿಕೆಟ್ ಒಪ್ಪಿಸಿ ಅಂಕಣದಿಂದ ಹೊರ ನಡೆದರು.

ವಿರಾಟ್ ಕೊಹ್ಲಿ ಮತ್ತು ಇಶಾನ್ ಕಿಶನ್ ಇಬ್ಬರ ಜೊತೆಯಾಟದೊಂದಿಗೆ 290 ರನ್ ಗಳಿಸಿದ್ದಾರೆ.

ದ್ವಿಶತಕ ಬಾರಿಸಿರುವ ವೀರೇಂದ್ರ ಸೆಹ್ವಾಗ್ , ಸಚಿನ್ ತೆಂಡೂಲ್ಕರ್ , ರೋಹಿತ್ ಶರ್ಮಾ ಸಾಲಿಗೆ ಈಗ ಇಶಾನ್ ಕಿಶನ್ ಸೇರಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page