Thursday, March 27, 2025

ಸತ್ಯ | ನ್ಯಾಯ |ಧರ್ಮ

ವೃದ್ಧಾಶ್ರಮ ಹೆಚ್ಚಳವಾಗುವುದು ಉತ್ತಮವಲ್ಲ ಡಾ. ಬಿ. ಪೂರ್ಣಿಮಾ ಬೇಸರ

ಹಾಸನ: ನಮ್ಮ ಸಮಾಜದಲ್ಲಿ ದಿನೆ ದಿನೆ ವೃದ್ಧಾಶ್ರಮಗಳ ಹೆಚ್ಚಳವಾಗುತ್ತಿರುವುದು ಆರೋಗ್ಯಕರವಲ್ಲ ಎಂದು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ ವಿಭಾಗದ ಮುಖ್ಯಸ್ಥೆ ಡಾ. ಬಿ. ಪೂರ್ಣಿಮಾ ಬೇಸರವ್ಯಕ್ತಪಡಿಸಿದರು. ನಗರದ ಸಮೀಪ ಇರುವ ಕಾಮಧೇನು ವೃದ್ಧಾಶ್ರಮದ ಹಿರಿಯ ಜೀವಗಳೊಂದಿಗೆ ಕಾಲೇಜಿನ ಸಮಾಜಶಾಸ್ತç ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ತಂದೆ-ತಾಯಿ ಕಷ್ಟಪಟ್ಟು ಕೂಲಿ ಮಾಡಿ ಓದಿಸುತ್ತಾರೆ. ಆದರೆ ವಿದ್ಯಾವಂತರಾಗಿ ಬೆಳೆದ ಮೇಲೆ ತಮಗೆ ಜೀವನ ರೂಪಿಸಿಕೊಟ್ಟ ತಂದೆ ತಾಯಿಯನ್ನು ಮನೆಯಿಂದ ಹೊರಗೆ ಹಾಕಿ ವೃದ್ಧಾಶ್ರಮಕ್ಕೆ ಸೇರಿಸುವುದರಲ್ಲಿ ಅರ್ಥವಿಲ್ಲ. ಹೆತ್ತವರ ಋಣ ತೀರಿಸುವುದು ಅಸಾಧ್ಯ ಎಂದರು. ಜನ ನೀಡಿದ ತಂದೆ ತಾಯಿಗೆ ವೃದ್ಧಾಪ್ಯದಲ್ಲಿ ಅನ್ನ, ಬಟ್ಟೆ, ಆರೋಗ್ಯ, ಪ್ರೀತಿ ನೀಡದೆ ಇದ್ದರೆ ಯಾವ ದೇವಸ್ಥಾನಗಳಿಗೆ ಹೋಗಿ ಹೋಮ, ಹವನ ಮಾಡಿಸಿದರು ಪ್ರಯೋಜನವಿಲ್ಲ. ಜೀವನ ಸಾರ್ಥಕವಾಗಬೇಕಾದರೆ ಹೆತ್ತ ತಂದೆ-ತಾಯಿಯನ್ನು ಇಳಿವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಳ್ಳಿ ಎಂದು ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page