Sunday, June 16, 2024

ಸತ್ಯ | ನ್ಯಾಯ |ಧರ್ಮ

ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಬೇಕು: ಇಬ್ರಾಹಿಂ ರೈಸಿ

ಇಸ್ರೇಲ್: ಪ್ಯಾಲೆಸ್ತೀನ್‌ನಲ್ಲಿ ವಿಧ್ವಂಸಕ ಹಿಂಸಾಚಾರವನ್ನು ರೂಪಿಸುತ್ತಿರುವ ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುವಂತೆ ಮುಸ್ಲಿಂ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿದ್ದಾರೆ.

ಸೌದಿ ಅರೇಬಿಯಾ ರಾಜಧಾನಿ ರಿಯಾದ್ ನಲ್ಲಿ ನಡೆದ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ‘‘ಗಾಜಾದಲ್ಲಿ ನರಮೇಧ ಮತ್ತು ಆಕ್ರಮಣ ನಡೆಸುತ್ತಿರುವ ಇಸ್ರೇಲಿ ಸೇನೆಯನ್ನು ಇಸ್ಲಾಮಿಕ್ ರಾಷ್ಟ್ರಗಳು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಬೇಕು. ಇದಲ್ಲದೆ, ಯಹೂದಿಗಳೊಂದಿಗಿನ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಕೊನೆಗೊಳಿಸಬೇಕು. ಅವರೊಂದಿಗೆ ವ್ಯಾಪಾರ ಚಟುವಟಿಕೆಗಳನ್ನು ರದ್ದುಗೊಳಿಸಬೇಕು” ಎಂದು ಇಬ್ರಾಹಿಂ ಕರೆ ನೀಡಿದರು.

ಅಮೆರಿಕಾ ಇಸ್ರೇಲ್‌ ದೇಶಕ್ಕೆ ಮಿಲಿಟರಿ ಮತ್ತು ಆರ್ಥಿಕ ನೆರವು ನೀಡುತ್ತಿದೆ ಎಂದು ದೂಷಿಸಿದರು. ಯಹೂದಿಗಳು ಬಳಸುವ ಯುದ್ಧ ಸಾಮಗ್ರಿಗಳು ಮತ್ತು ಇಂಧನವು ಸಂಪೂರ್ಣವಾಗಿ ಅಮೆರಿಕಾದಿಂದ ಬರುತ್ತಿವೆ, ಗಾಜಾದ ವಿನಾಶಕ್ಕೆ ಅಮೆರಿಕವೇ ಕಾರಣ ಎಂದು ಇರಾನ್ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು