Monday, September 1, 2025

ಸತ್ಯ | ನ್ಯಾಯ |ಧರ್ಮ

ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಹಲವು ಮನೆಗಳ ನಾಶ, ಅರಣ್ಯಕ್ಕೆ ಬೆಂಕಿ

ಬ್ಲೂಫೋರ್ಡ್ ರಿಡ್ಜ್: ಇಸ್ರೇಲ್ ರಕ್ಷಣಾ ಪಡೆಗಳು (IDF) ಭಾನುವಾರ ದಕ್ಷಿಣ ಲೆಬನಾನ್‌ನ ಬ್ಯೂಫೋರ್ಡ್ ರಿಡ್ಜ್ ಪ್ರದೇಶದ ಮೇಲೆ ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯಿಂದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಮನೆಗಳು ನಾಶವಾಗಿವೆ ಎಂದು ಲೆಬನಾನ್ ಮಾಧ್ಯಮ ಮೂಲಗಳು ತಿಳಿಸಿವೆ.

ಇಸ್ರೇಲ್, ಹಿಜ್ಬುಲ್ಲಾ ಮಿಲಿಟರಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದೆ. ಆದರೆ, ಲೆಬನಾನ್ ಇದನ್ನು ದೃಢಪಡಿಸಿಲ್ಲ. ನವೆಂಬರ್ 2024ರಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಇಸ್ರೇಲ್ ಅದನ್ನು ಉಲ್ಲಂಘಿಸುತ್ತಿದೆ ಮತ್ತು ಹಿಜ್ಬುಲ್ಲಾ ಚಟುವಟಿಕೆಗಳ ಹೆಸರಿನಲ್ಲಿ ತಮ್ಮ ಪ್ರದೇಶದ ಮೇಲೆ ದಾಳಿ ಮಾಡುತ್ತಿದೆ ಎಂದು ಲೆಬನಾನ್ ಟೀಕಿಸಿದೆ.

ದಾಳಿ ನಡೆದ ಪ್ರದೇಶದಲ್ಲಿ ಹಿಜ್ಬುಲ್ಲಾದ ಮಿಲಿಟರಿ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಲೆಬನಾನ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರತಿನಿಧಿಗಳು ಮತ್ತು ಸ್ವತಂತ್ರ ಸಂಸ್ಥೆಗಳು ಹೇಳಿವೆ.

ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಸಿನ್ವರ್ ಸಾವು ದೃಢ

ಗಾಜಾ: ತಮ್ಮ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಸಿನ್ವರ್ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಭಾನುವಾರ ದೃಢಪಡಿಸಿದೆ. ವೈಮಾನಿಕ ದಾಳಿಯಲ್ಲಿ ಹಮಾಸ್ ಮುಖ್ಯಸ್ಥರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಘೋಷಿಸಿದ ಮೂರು ತಿಂಗಳ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಶನಿವಾರ ಹಮಾಸ್ ಬಿಡುಗಡೆ ಮಾಡಿದ ಇತರ ರಾಜಕೀಯ ಮತ್ತು ಮಿಲಿಟರಿ ನಾಯಕರ ಭಾವಚಿತ್ರಗಳಲ್ಲಿ, “ಹುತಾತ್ಮರಾದ ಮಿಲಿಟರಿ ಕೌನ್ಸಿಲ್” ಎಂದು ಬಣ್ಣಿಸಿರುವ ಮೊಹಮ್ಮದ್ ಸಿನ್ವರ್ ಅವರ ಭಾವಚಿತ್ರವೂ ಇತ್ತು.

ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಎಂದು ಹೇಳಲಾದ ಯಹ್ಯಾ ಸಿನ್ವರ್ ಅವರ ಸಹೋದರರೇ ಈ ಮೊಹಮ್ಮದ್ ಸಿನ್ವರ್. ಕಮಾಂಡರ್ ಮೊಹಮ್ಮದ್ ದೀಫ್ ಅವರ ಮರಣದ ನಂತರ ಸಿನ್ವರ್ ಅಲ್-ಕಸ್ಸಾಮ್ ಬ್ರಿಗೇಡ್ಸ್‌ನ ಮಿಲಿಟರಿ ಮಂಡಳಿಯನ್ನು ಮುನ್ನಡೆಸುತ್ತಿದ್ದರು ಎಂದು ಹೇಳಲಾಗಿದೆ.

ಈ ವರ್ಷದ ಜೂನ್‌ನಲ್ಲಿ, ಮಧ್ಯ ಗಾಜಾದ ಖಾನ್ ಯೂನಿಸ್‌ನಲ್ಲಿರುವ ಯುರೋಪಿಯನ್ ಆಸ್ಪತ್ರೆಯ ಕೆಳಗಿರುವ ಸುರಂಗದಲ್ಲಿ ಮೊಹಮ್ಮದ್ ಸಿನ್ವರ್ ಅವರ ಮೃತದೇಹವನ್ನು ಪತ್ತೆಹಚ್ಚಲಾಗಿದೆ ಎಂದು ಇಸ್ರೇಲ್ ಸೇನೆ ಘೋಷಿಸಿದೆ.

ಮೇ 13ರಂದು ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ. ಇಸ್ರೇಲ್ ದಾಳಿಗಳಲ್ಲಿ ಇಲ್ಲಿಯವರೆಗೆ ಸುಮಾರು 63,371 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಘೋಷಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page