ಮಾರ್ಜಯೂನ್ (ಲೆಬನಾನ್): ಲೆಬನಾನ್ ನಲ್ಲಿ ಇಸ್ರೇಲ್ ಸೇನೆ ಸೋಮವಾರ ನಡೆಸಿದ ಭೀಕರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 492ಕ್ಕೆ ತಲುಪಿದೆ. ಇವರಲ್ಲಿ 90ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಮಕ್ಕಳ ಸಂಖ್ಯೆ ಒಟ್ಟು 35.
1645 ಜನರು ಗಾಯಗೊಂಡಿದ್ದಾರೆ. ಇದರಿಂದ ದಾಳಿಯ ಪ್ರಮಾಣವನ್ನು ಸುಲಭವಾಗಿ ಅಂದಾಜು ಮಾಡಬಹುದು. ಇದು 2006ರಲ್ಲಿ ಇಸ್ರೇಲ್-ಹೆಜ್ಬುಲ್ಲಾ ಯುದ್ಧದ ನಂತರದ ದೊಡ್ಡ ದಾಳಿ. ಇಸ್ರೇಲಿ ಸೇನೆಯು ಹಿಜ್ಬುಲ್ಲಾ ವಿರುದ್ಧದ ತನ್ನ ಬೃಹತ್ ವೈಮಾನಿಕ ದಾಳಿಯ ಭಾಗವಾಗಿ ದಕ್ಷಿಣ ಮತ್ತು ಪೂರ್ವ ಲೆಬನಾನ್ ನಿವಾಸಿಗಳನ್ನು ಸ್ಥಳಾಂತರಿಸುವಂತೆ ಎಚ್ಚರಿಸಿದೆ.
ಸಾವಿರಾರು ಲೆಬನಾನಿನ ನಾಗರಿಕರು ದಕ್ಷಿಣದಿಂದ ಪಲಾಯನ ಮಾಡಲು ಪ್ರಾರಂಭಿಸಿದ್ದು ಮತ್ತು ದಕ್ಷಿಣದ ಬಂದರು ನಗರವಾದ ಸಿಡಾನ್ ಮೂಲಕ ಹಾದುಹೋಗುವ ಮುಖ್ಯ ಹೆದ್ದಾರಿಯು ಬೈರುತ್ ಕಡೆಗೆ ಹೋಗುವ ಕಾರುಗಳಿಂದ ತುಂಬಿಹೋಗಿದೆ. ಇದು 2006ರ ನಂತರದ ಅತಿದೊಡ್ಡ ವಲಸೆಯಾಗಿದೆ.
ದಾಳಿಯಲ್ಲಿ 35 ಮಕ್ಕಳು ಮತ್ತು 58 ಮಹಿಳೆಯರು ಸೇರಿದಂತೆ 492 ಜನರು ಸಾವನ್ನಪ್ಪಿದ್ದಾರೆ ಮತ್ತು 1,645 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.