Wednesday, January 14, 2026

ಸತ್ಯ | ನ್ಯಾಯ |ಧರ್ಮ

ಗಾಜಾ ಮೇಲೆ ಇಸ್ರೇಲಿ ದಾಳಿ: 42 ಮಂದಿ ಸಾವು

ಗಾಜಾ: ಇಸ್ರೇಲ್ ಸೇನೆಯು ಗಾಜಾಪಟ್ಟಿಯಲ್ಲಿ ನಡೆಸಿದ ದಾಳಿಯಲ್ಲಿ 42 ಮಂದಿ ಮಡಿದಿರುವುದಾಗಿ ಅಲ್ಲಿನ ವೈದ್ಯಕೀಯ ಮೂಲಗಳು ಬಹಿರಂಗಪಡಿಸಿವೆ.

ದಾಳಿಯನ್ನು ತೀವ್ರಗೊಳಿಸಲು ಇಸ್ರೇಲಿ ಪಡೆಗಳು ಗಾಜಾದ ಉತ್ತರ ಮತ್ತು ದಕ್ಷಿಣ ಪ್ರದೇಶಗಳನ್ನು ತಲುಪಿವೆ ಎಂದು ವೈದ್ಯಕೀಯ ಮೂಲಗಳು ಬಹಿರಂಗಪಡಿಸಿವೆ.

ಏತನ್ಮಧ್ಯೆ, ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ 60 ದಿನಗಳ ಕದನ ವಿರಾಮ ಒಪ್ಪಂದ ಪೂರ್ಣಗೊಂಡ ಒಂದು ದಿನದ ನಂತರ, ಇಸ್ರೇಲಿ ಸೇನೆಯು ಲೆಬನಾನ್ ಮೇಲೆ ದಾಳಿ ಮಾಡಿತು. ಕದನ ವಿರಾಮ ಒಪ್ಪಂದವನ್ನು ಲೆಬನಾನ್ ಉಲ್ಲಂಘಿಸಿದ್ದರಿಂದ ಈ ದಾಳಿಗಳು ನಡೆದಿವೆ ಎಂದು ಇಸ್ರೇಲ್ ಹೇಳಿದೆ. ಆದರೆ, ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು ಲೆಬನಾನ್ ಸೇನೆ ಆರೋಪಿಸಿದೆ.

ಮತ್ತೊಂದೆಡೆ, ಅಂತರಾಷ್ಟ್ರೀಯ ಒಗ್ಗಟ್ಟಿನ ದಿನದ ಸಂದರ್ಭದಲ್ಲಿ (ಡಿಸೆಂಬರ್ 20), ಮಾಲ್ಡಿವ್ ಅಧ್ಯಕ್ಷ ಮುಯುಜು ಪ್ಯಾಲೆಸ್ಟೀನಿಯಾ‌ ಜನರಿಗೆ ನ್ಯಾಯ ನೀಡಬೇಕೆಂದು ಒತ್ತಾಯಿಸಿದರು. ಇಸ್ರೇಲ್ ಪ್ಯಾಲೆಸ್ತೀನ್ ಭೂಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಲು ಅಂತರರಾಷ್ಟ್ರೀಯ ಸಮುದಾಯವು ಒಗ್ಗೂಡಬೇಕೆಂದು ಮುಯಿಜು ಕರೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page