Wednesday, April 2, 2025

ಸತ್ಯ | ನ್ಯಾಯ |ಧರ್ಮ

ISSF ವಿಶ್ವ ಚಾಂಪಿಯನ್‌ಶಿಪ್: ಭಾರತದ ಕಿರಿಯ ಮಹಿಳಾ ತಂಡಕ್ಕೆ ಚಿನ್ನ

ಈಜಿಪ್ಟ್‌: ಮಂಗಳವಾರ ಈಜಿಪ್ಟ್‌ನ ಕೈರೋದಲ್ಲಿ ನಡೆದ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ISSF) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ, ಭಾರತದ ಕಿರಿಯ ಮಹಿಳಾ ತಂಡವು ಚೀನಾ ತಂಡವನ್ನು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೋಲಿಸುವುದರ ಮೂಲಕ ಮೂರು ಚಿನ್ನದ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ISSF ರೈಫಲ್/ಪಿಸ್ತೂಲ್ ವರ್ಲ್ಡ್ ಚಾಂಪಿಯನ್‌ಶಿಪ್ 2022 ರ ಅಂತಿಮ ಪಂದ್ಯದಲ್ಲಿ, ಭಾರತದ ಕಿರಿಯ ಮಹಿಳಾ ತಂಡವು ಚೀನಾದ ಝಾವೊ ನಾನ್, ವಾಂಗ್ ಸಿಯು ಮತ್ತು ಶೆನ್‌ಯಿಯಾವೊ ಅವರನ್ನು 16-6 ಅಂಕಗಳಿಂದ ಸೋಲಿಸಿ ಅಗ್ರ ಸ್ಥಾನ ಪಡೆದಿದೆ.

ಈ ಮೂಲಕ ಭಾರತವು ಪ್ರಸ್ತುತ ISSF ರೈಫಲ್/ಪಿಸ್ತೂಲ್ ವಿಶ್ವ ಚಾಂಪಿಯನ್‌ಶಿಪ್ 2022 ರ ಪದಕಗಳ ಪಟ್ಟಿಯಲ್ಲಿ ಆರು ಚಿನ್ನ, ಮೂರು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ ಒಟ್ಟು 15 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 17 ಚಿನ್ನ ಸೇರಿದಂತೆ 32 ಪದಕಗಳನ್ನು ಪಡೆದುಕೊಂಡು ಚೀನಾ ಅಗ್ರಸ್ಥಾನದಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page