Friday, August 22, 2025

ಸತ್ಯ | ನ್ಯಾಯ |ಧರ್ಮ

ಮೋದಿ ಸಿಟ್ಟಾದರೂ ಪರವಾಗಿಲ್ಲ, ವಾಕ್‌ ಸ್ವಾತಂತ್ರ್ಯಕ್ಕೆ ನಮ್ಮ ಬೆಂಬಲ: ಕೆನಡಾ ಪ್ರಧಾನಿ

ಟೊರಂಟೊ: ನಮ್ಮ ಕೆನಡಾ ಸರ್ಕಾರ ನಾಗರಿಕರ ವಾಕ್‍ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ನಮ್ಮ ಈ ನಿಲುವು ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರವನ್ನು ಕೆರಳಿಸಿದರೂ ಈ ನಿರ್ಧಾರ ಅಚಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ.

ಕೆನಡಾದ ಆಂತರಿಕ ವ್ಯವಹಾರಗಳಲ್ಲಿ ಭಾರತದ ಹಸ್ತಕ್ಷೇಪದ ವರದಿಯ ಬಗ್ಗೆ ಪತ್ರಕರ್ತರೊಂದಿಗೆ ಪ್ರತಿಕ್ರಿಯಿಸಿದ ಅವರು `ಕೆನಡಾದ ಈ ಹಿಂದಿನ ಕನ್ಸರ್ವೇಟಿವ್ ಸರಕಾರವು ಪ್ರಸ್ತುತ ಭಾರತ ಸರಕಾರದೊಂದಿಗೆ ಅತ್ಯಂತ ಸ್ನೇಹಶೀಲ ಸಂಬಂಧಕ್ಕೆ ಹೆಸರಾಗಿತ್ತು. ಆದರೆ ನಮ್ಮ ಸರಕಾರವು ಕೆನಡಾದಲ್ಲಿನ ಅಲ್ಪಸಂಖ್ಯಾತರನ್ನು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಯಾವತ್ತೂ ಬದ್ಧವಾಗಿದೆ. ಈ ವಿಚಾರದಲ್ಲಿ ಇದು ಭಾರತವನ್ನು ಕೆರಳಿಸಿದರೂ ಸಹ ಈ ನಮ್ಮ ನಿಲುವು ಸ್ಥಿರವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಕೆನಡಾದ ಫೆಡರಲ್ ಚುನಾವಣಾ ಪ್ರಕ್ರಿಯೆಯಲ್ಲಿ ವಿದೇಶಿ ಹಸ್ತಕ್ಷೇಪ ಆರೋಪದ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ವಿಚಾರಣೆಯ ಸಂದರ್ಭ ಟ್ರೂಡೊ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆನಡಾದ ನೆಲದಲ್ಲಿ ಖಾಲಿಸ್ತಾನ್ ಪರ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಪ್ರಕರಣದಲ್ಲೂ ನಾವು ಕೆನಡಿಯನ್ನರ ಪರ ನಿಂತಿದ್ದೇವೆ. ಇದು ಕೆನಡಾ ಪ್ರಜೆಗಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ನಮ್ಮ ಸರಕಾರದೆ ಬದ್ಧತೆಯನ್ನು ತೋರಿಸಿದೆ’ ಎಂದು ಟ್ರೂಡೊ ಹೇಳಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page