Wednesday, August 14, 2024

ಸತ್ಯ | ನ್ಯಾಯ |ಧರ್ಮ

UP ನೇಮ್‌ ಪ್ಲೇಟ್‌ ವಿವಾದದ ವಿಚಾರಣೆ | ಅಲ್ಪಸಂಖ್ಯಾತರನ್ನು ಗುರುತಿಸಿ ಆರ್ಥಿಕ ಬಹಿಷ್ಕಾರ ಹಾಕಲಾಗುತ್ತಿದೆ ಎಂದ ಅರ್ಜಿದಾರರು

ಉತ್ತರ ಪ್ರದೇಶದ ಕನ್ವಾರ್ ಮಾರ್ಗದಲ್ಲಿ ‘ನೇಮ್‌ ಪ್ಲೇಟ್’ ಅಳವಡಿಸುವ ನಿರ್ಧಾರದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಲು ಆರಂಭಿಸಿದ್ದಾರೆ. ಇದು ಆತಂಕಕಾರಿ ಸ್ಥಿತಿಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸಮಾಜವನ್ನು ವಿಭಜಿಸುತ್ತಿದ್ದಾರೆ ಎಂದು ಅವರು ವಾದಿಸಿದ್ದಾರೆ.

ಅಲ್ಪಸಂಖ್ಯಾತರನ್ನು ಗುರುತಿಸಿ ಆರ್ಥಿಕ ಬಹಿಷ್ಕಾರ ಹಾಕಲಾಗುತ್ತಿದೆ

ಅರ್ಜಿದಾರರ ಪರ ವಕೀಲ ಸಿ ಯು ಸಿಂಗ್ ವಾದ ಮಂಡಿಸಿ, ಸರಕಾರದ ಆದೇಶ ಸಮಾಜವನ್ನು ಒಡೆಯುವಂತಿದೆ. ಇದೊಂದು ರೀತಿಯಲ್ಲಿ ಅಲ್ಪಸಂಖ್ಯಾತ ವ್ಯಾಪಾರಿಗಳನ್ನು ಗುರುತಿಸಿ ಆರ್ಥಿಕವಾಗಿ ಬಹಿಷ್ಕಾರ ಹಾಕಿದಂತೆ. ಈ ಪೈಕಿ ಯುಪಿ ಮತ್ತು ಉತ್ತರಾಖಂಡ್ ಈ ಕೆಲಸ ಮಾಡುತ್ತಿವೆ.

ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಜತೆಗೆ ಸರಕಾರದ ಈ ಆದೇಶವನ್ನು ರದ್ದುಗೊಳಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಸರ್ಕಾರೇತರ ಸಂಘಟನೆಯಾದ ‘ಅಸೋಸಿಯೇಷನ್ ​​ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್’ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದೆ. ಇದಲ್ಲದೇ ಉತ್ತರಾಖಂಡ ಸರ್ಕಾರವನ್ನೂ ಅರ್ಜಿಯಲ್ಲಿ ಪಕ್ಷವನ್ನಾಗಿ ಮಾಡಲಾಗಿದೆ. ಉತ್ತರ ಪ್ರದೇಶದ ರೀತಿಯಲ್ಲಿಯೇ ಉತ್ತರಾಖಂಡದ ಹರಿದ್ವಾರದ ಎಸ್‌ಎಸ್‌ಪಿ ಇಂತಹ ಸೂಚನೆಗಳನ್ನು ನೀಡಿದ್ದಾರೆ.

ಎನ್‌ಜಿಒ ಹೊರತುಪಡಿಸಿ, ಪ್ರೊಫೆಸರ್ ಅಪೂರ್ವಾನಂದ್ ಮತ್ತು ಆಕಾರ್ ಪಟೇಲ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ಕಾಂವಡ್ ಯಾತ್ರಾ ಮಾರ್ಗಗಳಲ್ಲಿ ವ್ಯಾಪಾರಿಗಳ ಹೆಸರನ್ನು ಬರೆಸುವ ಯುಪಿ ಮತ್ತು ಉತ್ತರಾಖಂಡ ಸರ್ಕಾರಗಳ ನಿರ್ಧಾರವನ್ನು ಪ್ರಶ್ನಿಸಲಾಗಿದೆ. ಯುಪಿ ಮತ್ತು ಉತ್ತರಾಖಂಡ ಸರ್ಕಾರಗಳ ಆದೇಶದ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಕನ್ವರ್ ಯಾತ್ರೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಗುರುವಾರ ಮಹತ್ವದ ಆದೇಶವನ್ನು ಹೊರಡಿಸಿತ್ತು. ಕಾಂವಡಿ ಮಾರ್ಗದ ಎಲ್ಲ ಅಂಗಡಿಗಳಿಗೂ ನಾಮಫಲಕ ಅಳವಡಿಸಲು ಯೋಗಿ ಸರ್ಕಾರ ಆದೇಶಿಸಿತ್ತು. ಕನ್ವಾರ ಮಾರ್ಗದ ಆಹಾರ ಮಳಿಗೆಗಳಲ್ಲಿ ‘ನೇಮ್‌ ಪ್ಲೇಟ್’ ಅಳವಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶದಂತೆ ಅಂಗಡಿಗಳ ಮೇಲೆ ಮಾಲೀಕರ ಹೆಸರು ಮತ್ತು ವಿಳಾಸವನ್ನು ಬರೆಯುವುದು ಕಡ್ಡಾಯ.

ಮೊದಲಿಗೆ ಈ ಸುಗ್ರೀವಾಜ್ಞೆಯನ್ನು ಮೊದಲು ಮುಜಾಫರ್‌ ನಗರವನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಲಾಗಿತ್ತು, ಆದರೆ ಗುರುವಾರ, ಸಿಎಂ ಯೋಗಿ ಇದನ್ನು ಇಡೀ ರಾಜ್ಯವ್ಯಾಪಿ ಜಾರಿಗೆ ತಂದರು. ಇದಾದ ಬಳಿಕ ಈ ವಿಚಾರವಾಗಿ ವಾದ-ವಿವಾದಗಳು ನಡೆದಿದೆ.

ಪ್ರತಿಪಕ್ಷಗಳ ಜೊತೆಗೆ ಮಿತ್ರಪಕ್ಷಗಳಿಂದಲೂ ನಿರ್ಧಾರಕ್ಕೆ ವಿರೋಧ

ಈ ನಿರ್ಧಾರದ ಬಗ್ಗೆ ವಿರೋಧ ಪಕ್ಷದ ಜೊತೆಗೆ ಸರ್ಕಾರದ ಮಿತ್ರಪಕ್ಷಗಳೂ ಪ್ರಶ್ನೆಗಳನ್ನು ಎತ್ತಿದ್ದವು. ಯೋಗಿ ಸರ್ಕಾರದ ಈ ನಿರ್ಧಾರಕ್ಕೆ ಜೆಡಿಯು, ಆರ್‌ಎಲ್‌ಡಿ ವಿರೋಧ ವ್ಯಕ್ತಪಡಿಸಿವೆ. ಸರ್ಕಾರ ಯೋಚಿಸಿ ಈ ನಿರ್ಧಾರ ಕೈಗೊಂಡಿಲ್ಲ ಎಂದು ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಹೇಳಿದ್ದಾರೆ. ಅದೇ ವೇಳೆ, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು ಜೆಡಿಯು ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ವಾರ್ ಮಾರ್ಗದ ನಾಮಫಲಕ ಆದೇಶ ಉಳಿಯುತ್ತದೆಯೇ ಅಥವಾ ತೆರವುಗೊಳ್ಳಲಿದೆಯೇ ಎನ್ನುವ ಕುತೂಹಲದೊಂದಿಗೆ ಸುಪ್ರೀಂ ಕೋರ್ಟ್ ವಿಚಾರಣೆಯತ್ತ ಎಲ್ಲರ ಕಣ್ಣು ನೆಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page