Monday, July 28, 2025

ಸತ್ಯ | ನ್ಯಾಯ |ಧರ್ಮ

ವೈರಲ್ ಆಯ್ತು ಇಟಲಿ ಪ್ರಧಾನಿ ಡೀಪ್ ಫೇಕ್ ಅಶ್ಲೀಲ ವಿಡಿಯೋ, ದೊಡ್ಡ ಮೊತ್ತದ ಪರಿಹಾರಕ್ಕೆ ಮೊರೆ

ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರ ಡೀಪ್ ಫೇಕ್ ವೀಡಿಯೊ ವೈರಲ್ ಆಗಿದ್ದು, ಪೋರ್ನ್ ಸೈಟ್ ಗಳಲ್ಲಿ ಹೆಚ್ಚು ಹರಿದಾಡುತ್ತಿದೆ. ಈ ಬಗ್ಗೆ ವರದಿಯಾಗಿದ್ದು, ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರು 100,000 ಯುರೋಗಳಷ್ಟು ಪರಿಹಾರವನ್ನು ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರು ಪುರುಷರು ಜಿಯೋರ್ಜಿಯಾ ಮೆಲೋನಿ ಅವರ ಮುಖವನ್ನು ಇನ್ನೊಬ್ಬ ವ್ಯಕ್ತಿಯ ದೇಹದ ಮೇಲೆ ಹೇರುವ ಮೂಲಕ ಅಶ್ಲೀಲ ವೀಡಿಯೊಗಳನ್ನು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ವೀಡಿಯೊಗಳನ್ನು ಅಪ್ಲೋಡ್ ಮಾಡಲು ಬಳಸಿದ ಸ್ಮಾರ್ಟ್ ಫೋನ್ ಮತ್ತು ಡೀಪ್ಫೇಕ್ ವೀಡಿಯೊಗಳನ್ನು ಟ್ರ್ಯಾಕ್ ಮಾಡುವ ಮೂಲಕ ಪೊಲೀಸರು ಶಂಕಿತರನ್ನು ಪತ್ತೆಹಚ್ಚಿದ್ದಾರೆ ಎಂದು ವರದಿ ತಿಳಿಸಿದೆ.

ಇಟಾಲಿ ಪ್ರಧಾನಿ ಜುಲೈನಲ್ಲಿ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿಯಲಿದ್ದಾರೆ ಮತ್ತು ವೀಡಿಯೊಗಳನ್ನು ಯುನೈಟೆಡ್ ಸ್ಟೇಟ್ಸ್ ನ ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಈಗಾಗಲೇ ಹಲವಾರು ತಿಂಗಳುಗಳಲ್ಲಿ “ಲಕ್ಷಾಂತರ ಬಾರಿ” ಈ ವಿಡಿಯೋ ವೀಕ್ಷಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page