Tuesday, November 11, 2025

ಸತ್ಯ | ನ್ಯಾಯ |ಧರ್ಮ

ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜೆ.ಆರ್.ಕೆಂಚೇಗೌಡ ಆಯ್ಕೆ

ಹಾಸನ : ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಜೆ.ಆರ್. ಕೆಂಚೇಗೌಡ ಅವರ ನೇತೃತ್ವದ ತಂಡವು ಗೆಲುವು ಸಾಧಿಸಿದ್ದು, ಜೆ.ಆರ್.ಕೆ. ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಜೆ.ಆರ್. ಕೆಂಚೇಗೌಡರು 201 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ಉಪಾಧ್ಯಕ್ಷರಾಗಿ ಎನ್. ನಂಜುಂಡೇಗೌಡ (225 ಮತ) ಮತ್ತು ಜಿ. ಪ್ರಕಾಶ್ (221 ಮತ) ಮತ್ತು ಮೋಹನ್ ಕುಮಾರ್ (114 ಮತ) ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಜಿ. ಸುರೇಶ್ (170 ಮತ) ಗೆಲುವು ಸಾಧಿಸಿದ್ದಾರೆ. ಕಾರ್ಯದರ್ಶಿಗಳಾಗಿ ಬೊಮ್ಮೇಗೌಡ (210 ಮತ), ಸುವರ್ಣ ಹರೀಶ್ (178 ಮತ) ಮತ್ತು ಖುಶ್ವಂತ್ (188 ಮತ) ಆಯ್ಕೆಯಾಗಿದ್ದಾರೆ.ಖಜಾಂಚಿಯಾಗಿ ಟಿವಿ5 ಚಾನೆಲ್‌ನ ವರದಿಗಾರ ಪ್ರಕಾಶ್ (189 ಮತ), ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಪಿಎಸ್ ಪ್ರಮೋದ್ (175 ಮತ) ಆಯ್ಕೆಯಾಗಿದ್ದಾರೆ.

ಜಿಲ್ಲಾ ಕಾರ್ಯಕಾರಿ ಸಮಿತಿಗೆ ಇಬ್ಬೀಡು ಕೃಷ್ಣಮೂರ್ತಿ, ಜಗದೀಶ್ ಸಿ.ಆರ್., ನವೀನ್ ಸಿ.ಆರ್., ನಾಗರಾಜ್ ಹೆಚ್.ಎ., ಪ್ರತಾಪ್ ಹೆಚ್.ಜಿ., ಪ್ರಸನ್ನಕುಮಾರ್ (ಚಲಂ), ಮಲ್ಲೇಶ್ ಬೇಲೂರು, ರಾಘವೇಂದ್ರ ಹೆಚ್.ವಿ., ವಿರೂಪಾಕ್ಷ ಪಿ.ಬಿ., ವಿಶ್ವನಾಥ್ ಎನ್.ಆರ್., ಶರಣ್ ಜಿ., ಶರತ್ ಹೆಚ್.ಆರ್., ಸುರೇಶ್ ಕುಮಾರ್ ಹೆಚ್.ವಿ., ಸ್ವಾಗತ್ ಎಂ.ಎನ್. ಹಾಗೂ ಸ್ವರೂಪ್ ಎಂ.ಜಿ. ಆಯ್ಕೆಯಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page