Thursday, July 3, 2025

ಸತ್ಯ | ನ್ಯಾಯ |ಧರ್ಮ

ಜು.3 ರಿಂದ 5 ದಿನಗಳ ಕಾಲ ಹಲಸು-ಮಾವು ಮಾರಾಟ ಮೇಳ – ನವೀನ್

ಹಾಸನ : ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶ್ರೀ ಬಾಲಾಜಿ ಇವೆಂಟ್ಸ್ ಸಂಯುಕ್ತಾಶ್ರಯದಲ್ಲಿ ಕರಕುಶಲ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಮೇಳ ಹಾಗೂ ಹಲಸು ಮತ್ತು ಮಾವು ಮೇಳವನ್ನು ಜುಲೈ 3 ರಿಂದ ಐದು ದಿನಗಳ ಕಾಲ ಏರ್ಪಡಿಸಲಾಗಿದೆ ಎಂದು ಇವೆಂಟ್ಸ್ ಮ್ಯಾನೆಜರ್ ನವೀನ್ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹಾಸನ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕರಕುಶಲ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಮೇಳ ಹಾಗೂ ಹಲಸು ಮತ್ತು ಮಾವು ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಗುರುವಾರ ಸಂಜೆ 4 ಗಂಟೆಗೆ ಉದ್ಘಾಟನೆ ಆಗಲಿದ್ದು, ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಮಹಾಪೌರರಾದ ಎಂ. ಚಂದ್ರೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡುವರು. ಈ ವಸ್ತು ಪ್ರದರ್ಶನದಲ್ಲಿ ಹಲವು ರೀತಿಯ ಮಾವು, ಹಲಸಿನಹಣ್ಣು ಹಾಗೂ ಕರಕುಶಲ ಮತ್ತು ಗೃಹೋಪಯೋಗಿ ವಸ್ತುಗಳು ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ದೊರೆಯುತ್ತವೆ ಹಾಗೂ ಅನೇಕ ಬಗೆಯ ತಿನಿಸುಗಳು ಸಹ ಲಭ್ಯವಾಗುತ್ತವೆ ಎಂದರು. ವಿವಿಧ ಜಾತಿಯ ಗಿಡಗಳ ಮಾರಾಟ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು. ಮುಖ್ಯವಾಗಿ ಹಲಸಿನ ಜಿಲೇಬಿಯೂ ಕೂಡ ಇಲ್ಲಿ ದೊರೆಯುತ್ತದೆ. ಮಕ್ಕಳಿಗಾಗಿ ವಿವಿಧ ರೀತಿಯ ಆಟೋಟಗಳು ಹಾಗೂ ಗೇಮ್ಸ್ ಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.


ಪತ್ರಕರ್ತ ಮಂಜು ಬನವಾಸೆ ಮತ್ತು ಹೆತ್ತೂರು ನಾಗರಾಜು ಮಾತನಾಡಿ, ಹಲಸಿನ ವಿವಿಧ ತಿನುಸುಗಳು ಇಲ್ಲಿ ಸಿಗುತ್ತದೆ. ನಮ್ಮ ಹಲಸಿನ ತಳಿ ಹೊರ ರಾಜ್ಯದಲ್ಲಿ ಬೇಡಿಕೆಯಿದೆ. ಇನ್ನು ನಾನಾ ರೀತಿಯ ಮಾವಿನ ಹಣ್ಣನ್ನು ಇಡಲಾಗುತ್ತದೆ. ಗುರುವಾರ ಸಂಜೆ 4 ಗಂಟೆಗೆ ಈ ಹಲಸು ಮತ್ತು ಮಾವು ಪ್ರ ಮೇಳ ಉದ್ಗಾಟನೆ ಆಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೆತ್ತೂರು ನಾಗರಾಜ್, ಮಂಜು ಬನವಾಸೆ, ಅಭಿಷೇಕ್, ಪ್ರೇಮ್ ಹಾಗೂ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page