Friday, June 14, 2024

ಸತ್ಯ | ನ್ಯಾಯ |ಧರ್ಮ

ವರ್ಣ ಮತ್ತು ಜಾತಿ ವ್ಯವಸ್ಥೆ ತೊಲಗಬೇಕು: ಮೋಹನ್‌ ಭಾಗವತ್

ಸಮಾಜದಲ್ಲಿ ತಾರತಮ್ಯ ಹುಟ್ಟಿಸುವ ಎಲ್ಲವನ್ನೂ ತೊಡೆದು ಹಾಕಬೇಕಿದೆಯೆಂದು RSS ಮುಖ್ಯಸ್ಥ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅಕ್ಟೋಬರ್ 7ರಂದು ನಾಗ್ಪುರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಗೆ ಈಗ ಯಾವುದೇ ಪ್ರಸ್ತುತತೆ ಇಲ್ಲ, ಹೀಗಾಗಿ ವರ್ಣ ಮತ್ತು ಜಾತಿಯಂತಹ ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಹೇಳಿದರು.

ವರ್ಣ ಮತ್ತು ಜಾತಿ ವ್ಯವಸ್ಥೆಯು ಮೂಲತಃ ತಾರತಮ್ಯವನ್ನು ಹೊಂದಿರಲಿಲ್ಲ ಮತ್ತು ಅದು ತನ್ನದೇ ಆದ ಉಪಯೋಗಗಳನ್ನು ಹೊಂದಿತ್ತು ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಭಾಗವತ್, ಇಂದು ಯಾರಾದರೂ ಈ ಸಂಸ್ಥೆಗಳ ಬಗ್ಗೆ ಕೇಳಿದಲ್ಲಿ, ನನ್ನ ಉತ್ತರವು “ಈ ಪದ್ಧತಿ ಹಿಂದಿನದು, ಅದನ್ನು ಮರೆತುಬಿಡೋಣ ಎಂದಾಗಿರುತ್ತದೆ,” ಎಂದು ಹೇಳಿದರು.

ಸಮಾಜದಲ್ಲಿ ತಾರತಮ್ಯ ಹುಟ್ಟಿಸುವಂತಹ ಪದ್ಧತಿ ಯಾವುದೇ ಇದ್ದರೂ ಅದನ್ನು ಇಂದು ಮೂಲೆಗೆ ತಳ್ಳಬೇಕಿದೆ ಎಂದು ಅವರ ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ಕಡೆಯಲ್ಲೂ ಹಿರಿಯರು ತಪ್ಪು ಮಾಡಿದ್ದಾರೆ ಅದಕ್ಕೆ ಭಾರತವೂ ಹೊರತಲ್ಲ, ನಮ್ಮ ಹಿರಿಯರೂ ತಪ್ಪು ಮಾಡಿದ್ದಾರೆ ನಾವಿಂದು ಅದನ್ನು ತಿದ್ದಿಕೊಂಡು ಹೋಗಬೇಕು. ಇದರಿಂದ ನಮ್ಮ ಹಿರಿಯರ ಮೇಲಿನ ಗೌರವವೇನೂ ಕಡಿಮೆಯಾಗುವುದಿಲ್ಲ ಎಂದು ಅವರು ಹೇಳಿದರು.

RSS ನಾಯಕರು ದಿನಕ್ಕೊಂದು ಸ್ಫೋಟಕ ಹೇಳಿಕೆಗಳನ್ನು ನೀಡುತ್ತಿದ್ದು ಇದು ಜಾತಿವಾದಿಗಳ ಹುಬ್ಬೇರಿಸುವಂತೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು