ನ್ಯೂಯಾರ್ಕ್: ಪುಲಿಟ್ಜರ್ ಪ್ರಶಸ್ತಿ ವಿಜೇತ ಲೇಖಕಿ ಜುಂಪಾ ಲಾಹಿರಿ ಅವರು ನ್ಯೂಯಾರ್ಕ್ ನಗರದ ನೊಗುಚಿ ಮ್ಯೂಸಿಯಂನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಅಲ್ಲಿ ಪ್ಯಾಲೆಸ್ತೀನ್ ದೇಶಕ್ಕೆ ಬೆಂಬಲದ ಸಂಕೇತವಾದ ಕೆಫಿಯೆಹ್ ಧರಿಸಿದ್ದಕ್ಕಾಗಿ ಮೂವರು ಉದ್ಯೋಗಿಗಳನ್ನು ವಜಾಗೊಳಿಸಿರುವುದನ್ನು ಪ್ರತಿಭಟಿಸಿ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ಸಂಸ್ಥೆಯ ಪರಿಷ್ಕೃತ ಡ್ರೆಸ್ ಕೋಡ್ ನೀತಿಯನ್ನು ಅನುಸರಿಸುವ ಕ್ರಮವನ್ನು ವಿರೋಧಿಸಿ ಜುಂಪಾ ಲಾಹಿರಿ 2024ರ ಇಸಾಮು ನೊಗುಚಿ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ಮ್ಯೂಸಿಯಂ ಹೇಳಿಕೆಯಲ್ಲಿ ತಿಳಿಸಿದೆ.
ಅವರ ಅಭಿಪ್ರಾಯವನ್ನು ನಾವು ಗೌರವಿಸುತ್ತೇವೆ ಮತ್ತು ತಮ್ಮ ನೀತಿಯನ್ನು ಎಲ್ಲರೂ ಒಪ್ಪಲೇಬೇಕಿಲ್ಲ ಎಂದು ಅದು ಹೇಳಿದೆ. ಪ್ಯಾಲೇಸ್ತೀನ್ ದೇಶಕ್ಕೆ ಬೆಂಬಲ ಸೂಚಕವಾಗಿ ಪ್ರಪಂಚದಾದ್ಯಂತ ಹೋರಾಟಗಾರರು ಈ ಕಪ್ಪು-ಬಿಳುಪು ಪೇಟ ಕೆಫಿಯೆಹ್ ಧರಿಸುತ್ತಾರೆ.