ನವದೆಹಲಿ : ಈಗಂತೂ ಡಿಜಿಟಲ್ ಯುಗ. ಟಿವಿ ಗಳನ್ನು ಮೊಬೈಲ್ ಗಳು, ಕೇಬಲ್ ಮತ್ತು ಡಿಟಿಎಚ್ ಗಳನ್ನು ಒಟಿಟಿ ಗಳು (OTT) ಆವರಿಸಿಕೊಳ್ಳುತ್ತಿದೆ. ಹೀಗಾಗಿ ಪ್ರೇಕ್ಷಕರೂ ಕೂಡ ಹೆಚ್ಚೆಚ್ಚು ಒಟಿಟಿಗಳ ಕಡೆಗೆ ವಾಲುತ್ತಿದ್ದಾರೆ. ಇದೀಗ ಪ್ರಖ್ಯಾತ ಒಟಿಟಿ ಗಳ ಪೈಕಿ ಒಂದಾದ ಜಿಯೋ ಹಾಟ್‌ಸ್ಟಾರ್ (JioHotstat) ತನ್ನ ಸಬ್ ಸ್ಕ್ರಿಪ್ಷನ್ (Subscription) ಪ್ಲಾನ್‌ಗಳ ಬೆಲೆಗಳನ್ನು ಏರಿಕೆ (Price hike) ಮಾಡಿದೆ. ಹೌದು, ಇತ್ತೀಚೆಗೆ ಜಿಯೋ ಹಾಟ್ ಸ್ಟಾರ್ ಹೆಚ್ಚು ಜನಪ್ರಿಯವಾಗಿದ್ದು, ಇದೀಗ ತನ್ನ ಪ್ಲಾನ್ ಗಳ ದರ ಹೆಚ್ಚಿಸಿದೆ. ಜ. 28ರಿಂದ ಅನ್ವಯವಾಗುವಂತೆ ಸೂಪರ್ ಮತ್ತು ಪ್ರೀಮಿಯಂ ವಿಭಾಗಗಳ 3 ತಿಂಗಳ & ವಾರ್ಷಿಕ ಪ್ಲಾನ್‌ಗಳ ಬೆಲೆಗಳನ್ನು ಹೆಚ್ಚಳ ಮಾಡಿದೆ. ಈ ದರ ಹೆಚ್ಚಳ ಹೊಸ ಚಂದಾದಾರರಿಗೆ ಅನ್ವಯವಾಗಲಿದೆ.
ಹೀಗಾಗಿ ಜಿಯೋ ಹಾಟ್ ಸ್ಟಾರ್ ನ ಪ್ರೀಮಿಯಂ ವಾರ್ಷಿಕ ಪ್ಲಾನ್ 1,499ರ/- ರಿಂದ 2,199 ಕ್ಕೆ ಏರಿಕೆ ಮಾಡಲಾಗಿದೆ. ಆದ್ರೆ ಮೊಬೈಲ್ ಪ್ಲಾನ್‌ಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಜೊತೆಗೆ ₹79, ಸೂಪರ್ ₹149 & ಪ್ರೀಮಿಯಂ ₹299 ಮಾಸಿಕ ಪ್ಲಾನ್‌ಗಳ ಹೊಸ ಮೊಬೈಲ್ ಪ್ಲಾನ್‌ಗಳನ್ನು ಪರಿಚಯಿಸಲಾಗಿದೆ.
