Sunday, June 16, 2024

ಸತ್ಯ | ನ್ಯಾಯ |ಧರ್ಮ

ಜಾನ್ಸನ್‌ ಬೇಬಿ ಪೌಡರ್‌ ಉತ್ಪಾದನಾ ಪರವಾನಗಿ ರದ್ದುಗೊಳಿಸಿದ ಮಹರಾಷ್ಟ್ರ ಎಫ್‌ಡಿಎ

ಮುಂಬೈ: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಾನ್ಸನ್ ಮತ್ತು ಜಾನ್ಸನ್ ಪ್ರೈವೇಟ್ ಲಿಮಿಟೆಡ್‌ನ ಬೇಬಿ ಪೌಡರ್ ಉತ್ಪಾದನಾ ಪರವಾನಗಿಯನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತ ( ಎಫ್‌ಡಿಎ)  ರದ್ದುಗೊಳಿಸಿದೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಪ್ರಕಾರ , ಮುಂಬೈ, ಪುಣೆ ಮತ್ತು ನಾಸಿಕ್‌ನಲ್ಲಿ ತಯಾರಾಗುವ ಜಾನ್ಷನ್‌ ಬೇಬಿ ಪೌಡರ್‌ನ ಮಾದರಿಯನ್ನು ಪರಿಶೀಲಿಸಿದ್ದು, ಪ್ರಯೋಗಾಲಯವು ಪೌಡರ್ ಗುಣಮಟ್ಟ‌ವು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಹೇಳಿಕೆ  ನೀಡಿದೆ. ಈ ಕಾರಣ ಕಂಪನಿಯ ಉತ್ಪನ್ನವಾದ ಜಾನ್ಸನ್ ಬೇಬಿ ಪೌಡರ್ ನವಜಾತ ಶಿಶುಗಳ ಚರ್ಮದ ಮೇಲೆ ಪರಿಣಾಮ ಬೀರಬಹುದು ಎಂದು ರಾಜ್ಯ ಸರ್ಕಾರಿ ಸಂಸ್ಥೆ ಹೇಳಿದೆ. ಕೋಲ್ಕತ್ತಾ ಮೂಲದ ಸೆಂಟ್ರಲ್ ಡ್ರಗ್ಸ್ ಪ್ರಯೋಗಾಯಲದ ನಿರ್ಣಾಯಕ ವರದಿಯ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು