Friday, April 11, 2025

ಸತ್ಯ | ನ್ಯಾಯ |ಧರ್ಮ

ಉತ್ತರಪ್ರದೇಶದಲ್ಲಿ ಅರ್ಚಕನ ಲೈಂಗಿಕ ದೌರ್ಜನ್ಯ ಬಹಿರಂಗಪಡಿಸುವುದಾಗಿ ಹೇಳಿದ್ದ ಪತ್ರಕರ್ತನ ಹತ್ಯೆ: ಮೂವರ ಬಂಧನ

ಲಕ್ನೋ: ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದ್ದ ಪತ್ರಕರ್ತ ರಾಘವೇಂದ್ರ ಬಾಜಪೇಯ್ ಹತ್ಯೆಗೆ ಸಂಬಂಧಿಸಿದಂತೆ ದೇವಾಲಯವೊಂದರ ಅರ್ಚಕ ಮತ್ತು ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಮಹೋಲಿಯಲ್ಲಿರುವ ಕರೆದೇವ್ ಬಾಬಾ ದೇವಸ್ಥಾನ ಅರ್ಚಕ ಶಿವಾನಂದ್ ಬಾಬಾ ಅಲಿಯಾಸ್ ವಿಕಾಸ್ ರಾಥೋಡ್ ಮತ್ತು ಆತನ ಸಹಚರರಾದ ನಿರ್ಮಲ್ ಸಿಂಗ್ ಮತ್ತು ಅಸ್ಲಾಂ ಘಾಜಿ ಬಂಧಿತರು. ಇಬ್ಬರು ಶೂಟರ್‌ಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಹಿಂದಿ ದಿನಪತ್ರಿಕೆ ʼದೈನಿಕ್ ಜಾಗರಣ್ ʼನಲ್ಲಿ ವರದಿಗಾರರಾಗಿದ್ದ ರಾಘವೇಂದ್ರ ಬಾಜಪೇಯ್ ಅವರು ದೇವಾಲಯದ ಅರ್ಚಕ ಶಿವಾನಂದ ಬಾಬಾ ಎಂಬಾತನ ಲೈಂಗಿಕ ದೌರ್ಜಯನ್ಯ ಪ್ರಕರಣದ ಕುರಿತು ಇಷ್ಟರಲ್ಲೇ ಸುದೀರ್ಘ ವರದಿ ಮಾಡುವುದಾಗಿ ಬಹಿರಂಗ ಪಡಿಸಿದ್ದ. ಮಾರ್ಚ್ 8ರಂದು ಮಹೋಲಿಯಲ್ಲಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪತ್ರಕರ್ತನ ಹತ್ಯೆ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಯುನೆಸ್ಕೋ ಮಹಾನಿರ್ದೇಶಕರು, ಪತ್ರಕರ್ತರನ್ನು ರಕ್ಷಿಸುವ ಸಮಿತಿ ಸೇರಿದಂತೆ ಹಲವಾರು ಜಾಗತಿಕ ಪತ್ರಿಕಾ ಸಂಘಗಳು ಮತ್ತು ಸಂಘಟನೆಗಳು ಪತ್ರಕರ್ತನ ಹತ್ಯೆಯನ್ನು ಖಂಡಿಸಿತ್ತು. ಪ್ರಕರಣದ ತನಿಖೆಗೆ ಪೊಲೀಸರು ಹಲವು ತಂಡಗಳನ್ನು ರಚಿಸಿದ್ದರು.. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರುಖ ಆರ್ಚಕ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page