Friday, July 11, 2025

ಸತ್ಯ | ನ್ಯಾಯ |ಧರ್ಮ

ಇದೆ ಭಾನುವಾರ ಪತ್ರಕರ್ತ ಮಲ್ನಾಡ್ ಮೆಹಬೂಬ್ ರವರ ನಾಲ್ಕನೇ ಪುಸ್ತಕಮಲ್ನಾಡ್ ಮನಸ್ಸು ಬಿಡುಗಡೆ

ಸಕಲೇಶಪುರ :- ಹಿರಿಯ ಪತ್ರಕರ್ತ ಮಲ್ನಾಡ್ ಮೆಹಬೂಬ್ ಅವರ ಆಯ್ದ ಲೇಖನಗಳ ಸಂಕಲನ ಮಲ್ನಾಡ್ ಮನಸ್ಸು ಬಿಡುಗಡೆ ಕಾರ್ಯಕ್ರಮ.ಜುಲೈ 13 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು ಈ ಕಾರ್ಯಕ್ರಮ ದ ಬಗ್ಗೆ ವಿವಿಧ ಸಂಘಟನೆಗಳ ಪ್ರಮುಖರು ಸುದ್ದಿಗೊಷ್ಟಿ ನಡೆಸಿ ಕಾರ್ಯಕ್ರಮಕ್ಕೆ ಬಾಗವಹಿಸಲು ಸಾರ್ವಜನಿಕರಿಗೆ ಮನವಿಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಯನಿರತ ಪತ್ರಕರ್ತರ ಸಂಘ, ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಪುಸ್ತಕದ ಲೇಖಕರಾದ ಮಲ್ನಾಡ್ ಮೆಹಬೂಬ್ ಮಾತನಾಡಿ, “ಈ ಪುಸ್ತಕದಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ಆಯ್ದ ಲೇಖನಗಳನ್ನು ಸಂಕಲನವಾಗಿ ಹೊರತರುವ ಯತ್ನವಾಗಿದೆ. ಬದುಕಿಗೆ ಸಂಬಂದಿಸಿದಂತೆ ವಿಷಯಗಳನ್ನು ಸ್ಪಷ್ಟವಾಗಿ ಇಲ್ಲಿ ಒಳಗೊಂಡಿರುವೆ” ಎಂದು ವಿವರಿಸಿದರು. “ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಪರಿಸರ ಸಂಬಂಧಿ ಹಲವಾರು ವಿಷಯಗಳು ಪುಸ್ತಕದಲ್ಲಿ ಬಿಂಬಿಸುತ್ತವೆ” ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಯೋಗೇಶ್ ಅವರು, “ಪುಸ್ತಕದಲ್ಲಿ ಪ್ರಮುಖ ಸಾಮಾಜಿಕ ಅಂಶಗಳು ಸ್ಪಷ್ಟವಾಗಿ ಪ್ರಸ್ತುತವಾಗಿವೆ. ಹಿತಚಿಂತನೆಗಳಿಗೆ ಈ ಪುಸ್ತಕ ಪ್ರೇರಕವಾಗಲಿದೆ. ಹಲವಾರು ಹೊಸ ಬರಹಗಾರರಿಗೆ ಇದು ಮಾದರಿಯಾಗಬಹುದು” ಎಂದು ಹೇಳಿದರು. “ಇದು ಓದುಗರ ಕಣ್ಣು ತೆರೆಸುವಂತಹ ಬರಹಗಳ ಸಂಕಲನ” ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು ಮಾತನಾಡಿ “ಈ ಪುಸ್ತಕ ಬಿಡುಗಡೆ ಒಂದು ವಿಶಿಷ್ಟ ಅವಕಾಶ. ತಾಲ್ಲೂಕಿನ ಎಲ್ಲಾ ಸಾಹಿತ್ಯಾಸಕ್ತರು, ಬರಹಗಾರರು, ಸಂಘಟನೆಗಳು, ಸಮಾಜಪರ ಚಿಂತಕರು ಒಟ್ಟಿಗೆ ಬರುವ ಮಹತ್ವದ ವೇದಿಕೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು. “ಇದು ಸಮಾನಮನಸ್ಕರ ಸಮಾನತೆಯ ಚಿಂತನೆಗಳ ಸಂಕಲನವಾಗಿದೆ” ಎಂದರು.

ನಾಡಪ್ರಭು ಕೆಂಪೇಗೌಡ ಸಂಘದ ದಯಾನಂದ ಮಾತನಾಡಿ, “ಈ ಪುಸ್ತಕದಲ್ಲಿ ಸಮಾಜ ಪರವಾದ ದೃಷ್ಟಿಕೋನ ಸ್ಪಷ್ಟವಾಗಿ ಹೊರಹೊಮ್ಮುತ್ತದೆ. ಪ್ರತಿ ಲೇಖನವೂ ಜೀವನವನ್ನು ಹತ್ತಿರದಿಂದ ನೋಡುವ ಯತ್ನವಾಗಿದೆ. ಎಲ್ಲಾ ಸಂಘಟನೆಗಳು ಇದರ ಬಿಡುಗಡೆಗೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಹೇಳಿದರು.
ಪತ್ರಕರ್ತ ಕಾಂತರಾಜ್ ಮಾತನಾಡಿ, “ಇದು ಮಲ್ನಾಡ್ ಮೆಹಬೂಬ್ ಅವರ ನಾಲ್ಕನೆಯ ಪುಸ್ತಕ. ಈ ಪುಸ್ತಕ ಓದುಗರ ಹೃದಯವನ್ನು ಸ್ಪರ್ಶಿಸುತ್ತದೆ. ಬರವಣಿಗೆಗಳಲ್ಲಿ ಪ್ರಾಮಾಣಿಕತೆ, ನೈಜತೆ ಮತ್ತು ವೈಚಾರಿಕತೆಯ ಮಿಶ್ರಣ ಇದೆ” ಎಂದು ಹೇಳಿದರು.

ಪತ್ರಕರ್ತ ಅಕ್ಬರ್ ಜನೈದ್ ಮಾತನಾಡಿ, “ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳನ್ನು ಪುಸ್ತಕ ರೂಪದಲ್ಲಿ ತರಲು ಮಲ್ನಾಡ್ ಮೆಹಬೂಬ್ ಅವರು ಮುಂದಾಗಿರುವುದು ತಾಲ್ಲೂಕಿನ ಇತರ ಪತ್ರಕರ್ತರಿಗೆ ಮಾದರಿಯಾಗಿದೆ. ಇದು ಬರವಣಿಗೆಯ ಗುಣಮಟ್ಟದ ಸಂಕಲನ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಹಾಗೂ ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರಾದ ಎಚ್ ಎಂ ವಿಶ್ವನಾಥ್ ವಹಿಸಲಿದ್ದು
ಉದ್ಘಾಟನೆಯನ್ನು ಯಸಳೂರು,ತೆಂಕಲಗೋಡು ಬ್ರಹ್ಮಾನ್ಮಠದ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ನಡೆಸಲಿದ್ದಾರೆ.ಮುಖ್ಯ ಅಥಿತಿಗಳಾಗಿ
ಸಾಹಿತಿ, ರಂಗ ಕರ್ಮಿ, ಪ್ರಸಾದ್ ರಕ್ಷಿದಿ,ಆನೆಮಹಾಲ್ ಜುಮಾ ಮಸೀದಿ,ಅಧ್ಯಕ್ಷರಾದ ಇಬ್ರಾಹಿಂ ಕೆ ಮುಸ್ಲಿಯಾರ್, ಕನ್ನಡ ಸಾಹಿತ್ಯ ಪರಿಷತ್ತು,ಮಾಜಿ ಅಧ್ಯಕ್ಷ, ಜೈ ಮಾರುತಿ ದೇವರಾಜ್ ದಲಿತ ಮುಖಂಡ ಹೆತ್ತೂರು ಅಣ್ಣಯ್ಯ ಭೀಮ ವಿಜಯ ಪತ್ರಿಕೆ,ಸಂಪಾದಕ, ನಾಗರಾಜ್ ಹೆತ್ತೂರು ನಮ್ಮ ಹಾಸನ ಟಿವಿ ಮುಖ್ಯಸ್ಥ ತೌಪಿಕ್ ಅಹಮದ್.
ಪ್ರಕಾಶಕ ಅಝರ್ ಉದ್ದೀನ್ (ಅಕ್ಕಿ ಬಾಳು),ಸಾಮಾಜಿಕ ಕಾರ್ಯಕರ್ತರಾದಯಡೆಹಳ್ಳಿ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತು,ಅಧ್ಯಕ್ಷೆ ಶಾರದ ಗುರುಮೂರ್ತಿ,ಕಾರ್ಯನಿರತ ಪತ್ರಕರ್ತರ ಸಂಘ,ಅಧ್ಯಕ್ಷ, ಜೈ ಭೀಮ್ ಮಂಜು.ಲೇಖಕರು,ಮಲ್ನಾಡ್ ಮೆಹಬೂಬ್ ಪಾಲ್ಗೊಳ್ಳುವರು.

ವಿವಿಧ ಸಂಘಟನೆಗಳಾದ ಕೇಂದ್ರ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಮಂಜಮ್ಮ ಮಹಿಳಾ ಸಮಾಜ, ಸರ್ಕಾರಿ ನೌಕರರ ಸಂಘ, ಶಿಕ್ಷಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಮತ್ತು ಪ್ರವೀಣ್ ಶೆಟ್ಟಿ ಬಣ), ಮಲೆನಾಡು ರಕ್ಷಣಾ ವೇದಿಕೆ, ಮಾನವ ಬಂಧುತ್ವ ವೇದಿಕೆ, ವಿವಿಧ ದಲಿತ ಸಂಘಟನೆಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಆದಿದ್ರಾವಿಡ ಪೌರಕಾರ್ಮಿಕರ ಸಂಘ, ಎಸ್.ಕೆ.ಎಸ್.ಎಸ್.ಎಫ್., ಎಸ್.ಎಸ್.ಎಫ್., ಬದ್ರಿಯಾ ಯೂತ್ ಸೆಂಟರ್, ಮಹಿಳಾ ಮಾರ್ಗದರ್ಶಿ ಅಸೋಸಿಯೇಷನ್, ಆಟೋ ಚಾಲಕರ ಸಂಘ, ವಿಕಲಚೇತನರ ಸಂಘ, ಮೊದಲಾದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page