Saturday, March 8, 2025

ಸತ್ಯ | ನ್ಯಾಯ |ಧರ್ಮ

ಪ್ರಜಾಪ್ರಭುತ್ವ ಸದೃಢವಾಗಲು ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತದೆ – ನ್ಯಾ. ಹೆಚ್. ಪಿ . ಸಂದೇಶ್

ಹಾಸನ : ಸಿವಿಲ್ ನ್ಯಾಯಾಧೀಶರ ಆಯ್ಕೆ ಪರೀಕ್ಷೆಗೆ ಹಾಸನ ಜಿಲ್ಲಾ ವಕೀಲರ ಸಂಘ ಹಾಗು  ಹುಬ್ಬಳ್ಳಿಯ SSK ಮೆಮೋರಿಯಲ್ ಟ್ರಸ್ಟ್   ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸಿವಿಲ್ ನ್ಯಾಯಾಧೀಶರ ಆಯ್ಕೆ ಪರೀಕ್ಷೆ ಮತ್ತು ಉಚಿತ ತರಬೇತಿ ಶಿಬಿರವನ್ನು ಹಮ್ಮಿ ಳ್ಳಲಾಗಿತ್ತು ಕಾರಯ್ಕ್ರಮದವನ್ನು ಉದ್ದೇಶಿಸಿ ಮಾತನಾಡಿದ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ರವರು ಪ್ರಜಾಪ್ರಭುತ್ವ ಸದೃಢವಾಗಲು ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತದೆ  ನಮ್ಮ ದೇಶದ ನ್ಯಾಯಾಂಗವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುತ್ತಾ ಬಂದಿದೆ  ಅಭಿಪ್ರಾಯಪಟ್ಟರು. ನಾನು 2 ವರ್ಷ ಹಾಸನದಲ್ಲಿ ವಕೀಲ ವೃತಿಯಲ್ಲಿ ಪ್ರಾಕ್ಟೀಸ್ ಮಾಡಿದ್ದೆ ಅದು ನನಗೆ ಒಳ್ಳೆಯ ತಳಹದಿ ನೀಡಿತು. ನಾಯಾಧೀಶ ಅಗುವವರಿಗೆ ರಾಷ್ಟ್ರೀಯ ಪ್ರಜ್ಞೆ -ದೇಶದ ಕುರಿತ ಅಭಿಮಾನ ಹೊಂದಿರಬೇಕು.ಸ್ವಾತಂತ್ರ ಹೋರಾಟದಲ್ಲೂ ಹೆಚ್ಚು ವಕೀಲರು ಭಾಗವಹಿಸಿದ್ದರು.ಪ್ರಜಾಪ್ರಭುತ್ವ ಸದೃಢವಾಗಲು ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತದೆ.

ನಮ್ಮ ದೇಶದ ನ್ಯಾಯಾಂಗವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುತ್ತಾ ಬಂದಿದೆ ಎಂದು ಅವರು ಹೇಳಿದರು. ವಕೀಲರು ಹಾಗು ನ್ಯಾಯಾಧೀಶರು ಒಟ್ಟೊಟ್ಟಿಗೆ ಸಾಗಿದರೆ ಮಾತ್ರ ದೇಶದಲ್ಲಿ ಅರಾಜಕತೆ ಉಂಟಾಗದಂತೆ ಸಂರಕ್ಷಣೆ ಹೊಂದುತ್ತದೆ. ನ್ಯಾಯಾಧೀಶರು ದೇಶದ ಪರಮಾಧಿಕಾರವನ್ನು ಜಾರಿಗೆ ತರುವವರು.ಗ್ರಾಮೀಣ ಹಿನ್ನೆಲೆಯಿಂದ ಬಂದ ಪರೀಕ್ಷಾರ್ಥಿಗಳು ಹೆದರಬಾರದು ನಾನೂ ಕೂಡ ಪಿಯುಸಿ ವರಗೆ ಸರ್ಕಾರಿ ಕ ಶಾಲೆಯಲ್ಲಿ ಕಲಿತಿದ್ದೆ.  ನೀವೆಲ್ಲರೂ ಏಕಾಗ್ರತೆಯಿಂದ ಶಿಬಿರದಲ್ಲಿ ಭಾಗವಹಿಸಿ. ವಕೀಲರಾದವರು ಸದಾ ಕೋರ್ಟ್ ಹಾಲ್ ನಲ್ಲಿದ್ದು ಕಲಾಪಗಳನ್ನು ಗಮನಿಸಬೇಕು.  ಜನರ ಸೇವೆಗೆ ಅವಕಾಶವನ್ನು ದೇವರು ನನಗೆ ನೀಡಿದ್ದಾನೆ ಎಂಬ ಭಾವನೆಯಿಂದ ಕೆಲಸಮಾಡಬೇಕು ಎಂದರು.

ಪ್ರಾಸ್ತಾವಿಕವಾಗಿ  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ  ಡಿ.ಟಿ ಪ್ರಸನ್ನ  ರವರು ಮಾತನಾಡಿ ಈ ಬಾರಿ ಹಾಸನ ಜಿಲ್ಲೆಯಿಂದ ಹೆಚ್ಚು ನ್ಯಾಯಾದೀಶರುಗಳು ಆಯ್ಕೆಯಾಗಲಿ ಎಂಬ ಉದ್ದೇಶದಿಂದ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಈ  ತರಬೇತಿ ಶಿಬಿರವನ್ನು ಹಾಸನದಲ್ಲಿ ಆಯೋಜಿಸಲಾಗಿದ್ದು 180 ಶಿಬಿರಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ ಎಂದರು.ಐದನೇ ಹೆಚ್ಚುವರಿ ಜಿಲ್ಲಾ ಮತ್ತು  ಸತ್ರ ನ್ಯಾಯಾಧೀಶರಾದ ಎಚ್ಆರ್ ರವಿಕುಮಾರ್ ಮಾತನಾಡಿ, ಈ ತರಬೇತಿ ಆನ್ ಲೈನ್ ನಲ್ಲಿಯೂ ಪ್ರಸಾರವಾಗಲಿದ್ದು,ರಾಜ್ಯದ ಇತರ ಪರೀಕ್ಷಾರ್ಥಿಗಳೂ ಸದುಪಯೋಗ ಪಡಿಸಿಕೊಳ್ಳಬೇಕೆಂದ ಅವರು, ಈ ಬಾರಿ ಪರೀಕ್ಷೆಗೆ ಹೊಸ ಅಂಶಗಳೂ ಸೇರ್ಪಡೆಯಾಗಿದ್ದು ವಿದ್ಯಾರ್ಥಿಗ ಶೇಕಡ 100ರಷ್ಟು ತೊಡಗಿಕೊಳ್ಳಬೇಕು.ಪರಸ್ಪರ ಚರ್ಚಿಸಿ,ಜ್ಞಾನ ವಿನಿಮಯ ಮಾಡಿಕೊಂಡು ಯಶಸ್ವಿಯಾಗಲಿ ಎಂದು ಹಾರೈಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ಅವರು ಮಾತನಾಡುತ್ತಾ,ತರಬೇತಿ ಶಿಬಿರ ಯಶಸ್ವಿಯಾಗಲಿ ಎಂದು ಶುಭ ಕೋರಿದರು. ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಹೇಮಾವತಿ ಅವರು ಹಾಗೂ ಐದನೇ ಹೆಚ್ಚುವರಿ ಜಿಲ್ಲಾ ಮತ್ತು  ಸತ್ರ ನ್ಯಾಯಾಧೀಶರಾದ ಎಚ್ಆರ್ ರವಿಕುಮಾರ್ ಹಾಗು ಜಿಲ್ಲಾ ನ್ಯಾಯಾಲಯ ಸಂಕೀರ್ಣದ ನ್ಯಾಯಾಧೀಶರುಗಳು ಹಾಗು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ  ಡಿ.ಟಿ ಪ್ರಸನ್ನ, ಕಾರ್ಯದರ್ಶಿ ಬಿ.ಎಂ ಸಂತೋಷ್, ಉಪಾಧ್ಯಕ್ಷ ಹೆಚ್ ಎನ್ ಯೋಗೀಶ್, ಖಜಾಂಜಿ HN ಪ್ರತಾಪ್ ಜಂಟಿ ಕಾರ್ಯದರ್ಶಿ ರೂಪ ಕರಿಗೌಡ ಮತ್ತು ಹುಬ್ಬಳ್ಳಿಯ SSK ಮೆಮೋರಿಯಲ್ ಟ್ರಸ್ಟ್ ನ ಸಂಯೋಜಕರಾದ ಬಿ.ವಿ. ಕೋರಿಮಥ್ ಅವರು  ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page