Sunday, September 1, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಕುತ್ತಿಗೆಗೆ ಕೋವಿಡ್‌ ಕುಣಿಕೆ: ವರದಿ ಸಲ್ಲಿಸಿದ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾ ಆಯೋಗ

ಬೆಂಗಳೂರು: ಮುಡಾ ವಿವಾದದ ಸುತ್ತ ರಾಜಕೀಯ ಸುತ್ತುತ್ತಿರುವ ಸಮಯದಲ್ಲೇ ರಾಜ್ಯ ಬಿಜೆಪಿಯಲ್ಲಿ ಹೊಸದೊಂದು ತಲ್ಲಣ ಶುರುವಾಗಿದೆ. ಕೊವಿಡ್‌ ಮಹಾಮಾರಿ ನಿರ್ವಹಣೆ ಸಮಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಈ ಹಿಂದೆ ತನಿಖಾ ಆಯೋಗವೊಂದನ್ನು ರಚಿಸಿತ್ತು.

ಪ್ರಸ್ತುತ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾ ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ರಾಜಕೀಯ ವಲಯದಲ್ಲಿ ಗುಸುಗುಸು ಆರಂಭವಾಗಿದೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಕಾಲಾ ವಧಿಯಲ್ಲಿ ಕೋವಿಡ್‌-19 ನಿಯಂತ್ರಣ ಸಾಮಗ್ರಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆ ಏಕ ಸದಸ್ಯ ಆಯೋಗ ತನ್ನ ವರದಿಯನ್ನು ಸಲ್ಲಿಸಿದೆ.

ಕೋವಿಡ್‌ ಸಂದರ್ಭದಲ್ಲೇ ಯಡಿಯೂರಪ್ಪನವರನ್ನು ಕೆಳಗಿಳಿಸಿ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಇನ್ನು ಎರಡೂ ಸಂದರ್ಭಗಳಲ್ಲೂ ವೈದ್ಯರಾಗಿರುವ ಸುಧಾಕರ್‌ ಆರೋಗ್ಯ ಮಂತ್ರಿಯಾಗಿದ್ದರು.

ನ್ಯಾ| ಜಾನ್‌ ಮೈಕಲ್‌ ಕುನ್ಹಾ ಅವರು ಮುಚ್ಚಿದ ಪೆಟ್ಟಿಗೆಯಲ್ಲಿ 1,722 ಪುಟಗಳ ವರದಿಯನ್ನು ಸಲ್ಲಿಸಿ ದ್ದಾರೆ. ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ, ಮುಖ್ಯಮಂತ್ರಿ ಯವರ ಕಾನೂನು ಸಲಹೆಗಾರ ಎ.ಎಸ್‌. ಪೊನ್ನಣ್ಣ, ರಾಜಕೀಯ ಕಾರ್ಯ ದರ್ಶಿಗಳಾದ ಗೋವಿಂದರಾಜ್‌, ನಸೀರ್‌ ಅಹ್ಮದ್‌ ಈ ಸಂದರ್ಭದಲ್ಲಿ ಜೊತೆಗಿದ್ದರು.

ವರದಿಯಲ್ಲಿನ ವಿಷಯಗಳು ಸೋರಿಕೆಯಾಗದಂತೆ ಮುಖ್ಯಮಂತ್ರಿ ಗಮನವಹಿಸಿದ್ದು, ಸೀಮಿತ ಸಂಖ್ಯೆಯ ಅಧಿಕಾರಿಗಳು ಮತ್ತು ಸಚಿವರು ಈ ಸಮಯದಲ್ಲಿ ಸ್ಥಳದಲ್ಲಿದ್ದರು.

ಸಿದ್ದರಾಮಯ್ಯ ಅವರು ಮುಂದಿನ ಎರಡು ದಿನಗಳ ಕಾಲ ವರದಿಯ ಬಗ್ಗೆ ಸುದೀರ್ಘ‌ ಅಧ್ಯಯನ ನಡೆಸ ಲಿದ್ದಾರೆ. ಆ ಬಳಿಕ ಸೆ. 5ರಂದು ನಡೆ ಯುವ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಮಂಡಿಸುವ ಸಾಧ್ಯತೆಗಳು ದಟ್ಟವಾಗಿದ್ದು, ವರದಿಯ ಆಧಾರದ ಮೇಲೆ ಆದಷ್ಟು ಬೇಗ ಶಿಸ್ತುಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ವಿರೋಧ ಪಕ್ಷದಲ್ಲಿದ್ದ ಸಮಯದಲ್ಲಿ 40 ಪರ್ಸೆಂಟ್‌ ಮತ್ತು ಕೋವಿಡ್‌ ಹಗರಣ ಅದರ ಮುಖ್ಯ ಅಸ್ತ್ರಗಳಾಗಿದ್ದವು. ಹಗಲು ರಾತ್ರಿ ಪಕ್ಷವು ಈ ಕುರಿತು ಸದನದ ಹೊರಗೂ ಒಳಗೂ ಹೋರಾಟ ನಡೆಸಿತ್ತು.

ನಂತರ ಕಳೆದ ವರ್ಷ ಅಧಿಕಾರಕ್ಕೆ ಬಂದ ನಂತರ ಈ ಭ್ರಷ್ಟಾಚಾರಗಳು ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿತ್ತು

ಈ ನಿಟ್ಟಿನಲ್ಲಿ 2023ರ ಆ. 26ರಂದು ರಾಜ್ಯ ಸರಕಾರವು ನ್ಯಾ| ಜಾನ್‌ ಮೈಕಲ್‌ ಕುನ್ಹಾ ನೇತೃತ್ವದಲ್ಲಿ ಕೋವಿಡ್‌ ಸಂದರ್ಭದಲ್ಲಿ ನಡೆದ ಅವ್ಯವಹಾರಗಳ ತನಿಖೆ ಏಕ ಸದಸ್ಯ ತನಿಖಾ ಆಯೋಗ ವನ್ನು ನೇಮಿಸಿತ್ತು. ಮೂರು ತಿಂಗಳೊಳಗಾಗಿ ವರದಿ ನೀಡುವಂತೆ ಆಯೋಗಕ್ಕೆ ಗಡುವು ನೀಡಲಾಗಿತ್ತು

Related Articles

ಇತ್ತೀಚಿನ ಸುದ್ದಿಗಳು

You cannot copy content of this page