Friday, October 31, 2025

ಸತ್ಯ | ನ್ಯಾಯ |ಧರ್ಮ

 ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಸೂರ್ಯಕಾಂತ್‌ ನೇಮಕ

ನವದೆಹಲಿ : ಸುಪ್ರೀಂಕೋರ್ಟ್‌ನ 53ನೇ (Supreme Court) ಮುಖ್ಯ ನ್ಯಾಯಮೂರ್ತಿಯಾಗಿ (CJI) ನ್ಯಾಯಾಮೂರ್ತಿ ಸೂರ್ಯಕಾಂತ್‌ (Surya Kant) ಅವರನ್ನ ನೇಮಕ ಮಾಡಲಾಗಿದೆ.

ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರ
ಕೇಂದ್ರ ಕಾನೂನು ಸಚಿವಾಲಯದ ನ್ಯಾಯ ಇಲಾಖೆ ಈ ನೇಮಕಾತಿ ವಿಚಾರವಾಗಿ ಆದೇಶ ನೀಡಿದ್ದು, ಹಾಲಿ ಮುಖ್ಯ ನ್ಯಾಯಮೂರ್ತಿಗಳಾದ ಭೂಷಣ್‌ ಆರ್‌ ಗವಾಯಿ ಅವರ ಅಧಿಕದ ಅವಧಿ ಇದೇ ನವೆಂಬರ್‌ 23ಕ್ಕೆ ಮುಗಿಯಲಿದೆ. ಹಾಗಾಗಿ ನವೆಂಬರ್‌ 24 ರಂದು ಸೂರ್ಯಕಾಂತ್‌ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇನ್ನು ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಸುಮಾರು 15 ತಿಂಗಳ ಕಾಲ ಸಿಜೆಐ ಆಗಿ ಕಾರ್ಯನಿರ್ವಹಲಿದ್ದು, 2027ರ ಫೆಬ್ರವರಿ 9 ರಂದು ಅವರ ಅಧಿಕಾರ ಮುಗಿಯಲಿದೆ. ರಾಷ್ಟ್ರಪತಿ ಅವರಿ ಭಾರತದ ಸಂವಿಧಾನ ನೀಡಿರುವ ಅಧಿಕಾರವನ್ನ ಬಳಸಿಕೊಂಡು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾದ ಸೂರ್ಯಕಾಂತ್‌ ಅವರನ್ನ 2025ರ ನವೆಂಬರ್‌ 24 ರಿಂದ ಸಿಜೆಐ ಆಗಿ ನೇಮಕ ಮಾಡಲಾಗಿದೆ.‌

Related Articles

ಇತ್ತೀಚಿನ ಸುದ್ದಿಗಳು

You cannot copy content of this page