Thursday, November 28, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆ.ಎಂ. ಶ್ರೀನಿವಾಸ್ ನಾಮಪತ್ರ ಸಲ್ಲಿಕೆ

ಹಾಸನ: ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿದ್ದು, ಈ ನಡುವೆ ಹೆಚ್ಚಿನ ನಿರ್ದೇಶಕರ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಬುಧವಾರದಂದು ಸಂಘದ ಭವನದಲ್ಲಿ ಕೆ.ಎಂ. ಶ್ರೀನಿವಾಸ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಖಜಾಂಚಿ ಸ್ಥಾನಕ್ಕೆ ಎಸ್. ಮಧು, ರಾಜ್ಯ ಪರಿಷತ್ತು ಸ್ಥಾನಕ್ಕೆ ಟಿ. ರಾಜು ಅವರು ನಾಮಪತ್ರ ಸಲ್ಲಿಕೆ ಮಾಡಿದರು.

    ಸರಕಾರಿ ನೌಕರರ ಸಂಘದ ಚುನಾವಣೆ ಅಧ್ಯಕ್ಷ ಆಕಾಂಕ್ಷಿ ಕೆ.ಎಂ. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ೨೦೨೪-೨೯ನೇ ಸಾಲಿನ ನೌಕರರ ಸಂಘದ ಚುನಾವಣೆಯಲ್ಲಿ ಆಯ್ಕೆ ಆಗಿರುವ ಎಲ್ಲಾ ನಿರ್ದೇಶಕರಿಗೆ ಅಭಿನಂದನೆ ತಿಳಿಸುತ್ತೇವೆ. ಡಿಸೆಂಬರ್ ೪ ರಂದು ನಡೆಯುವ ಪದಾಧಿಕಾರಿಗಳ ಚುನಾವಣೆಯಲ್ಲಿ ನಾನು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಜೊತೆಯಲ್ಲಿ ನನ್ನ ಆತ್ಮಿಯರು ಆದ ಎಸ್. ಮಧು ಖಜಾಂಚಿ ಸ್ಥಾನಕ್ಕೆ, ಟಿ. ರಾಜು ಅವರು ರಾಜ್ಯ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಈ ತಂಡವನ್ನು ಎಲ್ಲಾ ನಿದೇಶಕರು ಸ್ವಾಭೀಮಾನದ ತಂಡ ಎಂದು ಆಯ್ಕೆ ಮಾಡಿ ಸಂಘವನ್ನು ಸಂಘಟನೆ ಮಾಡುವುದಕ್ಕೆ ಶಕ್ತಿ ತುಂಬುವಂತೆ ಎಲ್ಲಾ ಆತ್ಮಿಯರಲ್ಲಿ ನಿರ್ದೇಶಕರಿಗೆ ಮನವಿ ಮಾಡುವುದಾಗಿ ಹೇಳಿದರು. ಸರಕಾರಿ ನೌಕರರ ಚುನಾವಣೆಯು ಬಂಡವಾಳ ಶಾಹಿಗಳ ಹಣಬಲ - ಜನಬಲದ ನಡುವೆ ಸ್ಪರ್ದೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಸಮಸ್ತ ನೌಕರರ ಅಭಿಪ್ರಾಯ ಸಂಗ್ರಹಿಸಿ ಎಲ್ಲಾರ ಸಹಕಾರದಲ್ಲಿ ಇಲಾಖೆಯ ಎಲ್ಲಾ ಸರಕಾರಿ ನೌಕರರು ನಮ್ಮ ತಂಡಕ್ಕೆ ಮತ ನೀಡುವಂತೆ ನಿರ್ದೇಶಕರು ಯಾವ ಆಮಿಷಕ್ಕೆ ಒಳಗಾಗದೇ ಇರಲು ತಿಳಿ ಮಾತು ಹೇಳಿ ಮನವೊಲಿಸುವಂತೆ ಮನವಿ ಮಾಡಿದರು. ೬೦ ರಿಂದ ೬೫ ನಿರ್ದೇಶಕರು ದೃತಿಗೆಡದೆ ಯಾವ ಒತ್ತಡಕ್ಕೆ ಮಣಿಯದೆ ಎಲ್ಲಾ ನಿರ್ದೇಶಕರು ನಮ್ಮ ತಂಡಕ್ಕೆ ಮತ ನೀಡಿ ಹೆಚ್ಚುನ ಮತಗಳಲ್ಲಿ ಜಯಶೀಲರನ್ನಾಗಿ ಮಾಡಿ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಇದೆ ವೇಳೆ ಜಿಲ್ಲಾ ಸರಕಾರಿ ನೌಕರರ ಸಂಘದ ಮಧು, ರಘು, ಪ್ರದೀಪ್, ರಾಜು, ವಿಶ್ವನಾಥ್, ಯಶೋಧರ್, ಗಿರೀಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page