ತಮ್ಮ ವಿರುದ್ಧ ಹನಿಟ್ರ್ಯಾಪ್​​​ಗೆ ವಿಫಲ ಯತ್ನ ಗೃಹ ಸಚಿವರಿಗೆ ದೂರು ನೀಡಿದ ಕೆ ರಾಜ‍ಣ್ಣ

ಬೆಂಗಳೂರು : ತಮ್ಮ ವಿರುದ್ಧ ಹನಿಟ್ರ್ಯಾಪ್​​​ಗೆ ವಿಫಲ ಯತ್ನವಾಗಿದೆ ಎಂದು ಸದನದಲ್ಲಿ ಸಚಿವ ಕೆ.ಎನ್​.ರಾಜಣ್ಣ ಅವರು ಗಂಭೀರವಾಗಿ ಆರೋಪ ಮಾಡಿದ್ದು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.ಈ ಸಂಬಂಧ ಸದನದಲ್ಲಿಯೂ ತನಿಖೆಗೆ ಮನವಿ ಮಾಡಿದ ಮೇಲೆ ಇದೂವರೆಗೂ ಪ್ರಕರಣ ಕುರಿತಂತೆ ದೂರ ನೀಡದ ರಾಜಣ್ಣ ಅವರು, ಇಂದು ಖುದ್ದು ಪರಮೇಶ್ವರ್ ಅವರನ್ನು ಭೇಟಿಯಾಗಿ ಸುಮಾರು 3 ಪುಟಗಳ ಲಿಖಿತ ದೂರು ನೀಡಿದ್ದಾರೆಂದು ವರದಿಯಾಗಿದೆ.

ಲಿಖಿತವಾಗಿ ರಾಜಣ್ಣ ಅವರು ಪರಮೇಶ್ವರ್ ಅವರಿಗೆ ದೂರು ನೀಡಿದ್ದು, ಈ ದೂರನ್ನು ವಿಧಾನಸೌಧ ವ್ಯಾಪ್ತಿಗೆ ಬರುವಂತಹ ಪೊಲೀಸ್​ ಠಾಣೆಗೆ ರವಾನೆ ಮಾಡುವ ಸಾಧ್ಯತೆ ಇದ್ದು, ಇಂದು ಸಾಯಂಕಾಲವೇ ಪ್ರಕರಣ ಕುರಿತು ತನಿಖಾ ಸಂಸ್ಥೆ ಬಗ್ಗೆಯೂ ನಿರ್ಧಾರವಾಗಲಿದ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿರುವ ಸಿದ್ಧಾರ್ಥ್ ಮೆಡಿಕಲ್​ ಕಾಲೇಜಿಗೆ ಭೇಟಿ ನೀಡಿ ಪರಮೇಶ್ವರ್​ ಅವರೊಂದಿಗೆ ರಾಜಣ್ಣ ಅವರು ಅನೌಪಚಾರಿಕವಾಗಿ ಚರ್ಚಿಸಿ ದೂರು ನೀಡಲು ನಿರ್ಧರಿಸಿದ್ದಾರೆ. ಈ ಕುರಿತಾದ ಕೆಲ ದಾಖಲೆಗಳ ಜೊತೆಗೆ 3 ಪುಟಗಳಲ್ಲಿ ಪ್ರಮುಖ ವಿಷಯಗಳನ್ನು ಪ್ರಕರಣದ ಕುರಿತಾಗಿ ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.ಸುಮಾರು 48 ಜನರನ್ನು ಹನಿಟ್ರ್ಯಾಪ್ ಮಾಡಲಾಗಿದೆ. ಅದರಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರೂ ಸಿಲುಕಿದ್ದಾರೆಂಬ ಆರೋಪವನ್ನು ರಾಜಣ್ಣ ಮಾಡಿದ್ದರು.

Related Articles

ಇತ್ತೀಚಿನ ಸುದ್ದಿಗಳು