ಕಾಮನ್‌ವೆಲ್ತ್‌ ಗೇಮ್ಸ್: ಸೆಮಿಫೈನಲ್ ಪ್ರವೇಶಿಸಿದ ಬಾಕ್ಸರ್‌ ನೀತು ಘಂಘಾಸ್‌

ಬರ್ಮಿಂಗ್‌ಹ್ಯಾಮ್‌: ಬುಧವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪಜಿಲಿಸ್ಟ್ ನೀತು ಘಂಘಾಸ್ ಮಹಿಳೆಯರ 48 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿ ಪದಕವನ್ನು ಖಚಿತಪಡಿಸಿಕೊಳ್ಳುವ ಭರವಸೆ ಹೊಂದಿದ್ದಾರೆ. 
ಎರಡು ಬಾರಿ ಯುವ ಚಿನ್ನದ ಪದಕ ವಿಜೇತೆಯಾಗಿರುವ 21 ವರ್ಷದ ನೀತು,  ಉತ್ತರ ಐರ್ಲೆಂಡ್‌ನ ಎದುರಾಳಿ ನಿಕೋಲ್ ಕ್ಲೈಡ್ ಕ್ವಾರ್ಟರ್‌ಫೈನಲ್ ಪಂದ್ಯದ  ಅಂತಿಮ ಸುತ್ತಿನಲ್ಲಿ ಸ್ಪರ್ದಿಸಲಾಗದೆ ಟವೆಲ್ ಎಸೆದಾಗ ತೀರ್ಪುಗಾರ ನೀತು ಅವರನ್ನು ವಿಜೇತೆ ಎಂದು ಘೋಷಿಸಿದರು.
ಈ ಗೆಲುವಿನ ಮೂಲಕ ನೀತು ಘಂಘಾಸ್ ಸಮಿಪೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 

Related Articles

ಇತ್ತೀಚಿನ ಸುದ್ದಿಗಳು