Friday, June 14, 2024

ಸತ್ಯ | ನ್ಯಾಯ |ಧರ್ಮ

ಕಾಂತಾರ -2ರಲ್ಲಿ ದೈವಾರಾಧನೆ ತೋರಿಸಿದರೆ ಉಗ್ರ ಹೋರಾಟ ಖಂಡಿತ: ವಿಹೆಚ್‌ಪಿ, ಬಜರಂಗ ದಳ ಖಡಕ್ ಎಚ್ಚರಿಕೆ

ಮಂಗಳೂರು: ಸಿನೆಮಾ, ನಾಟಕ ಇತ್ಯಾದಿಗಳಲ್ಲಿ ದೈವಾರಾಧನೆಗೆ ಅಪಮಾನವಾಗುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದೈವಾರಾಧಕರ ಸಂಘಟನೆಗಳು ಮನವಿ ಸಲ್ಲಿಸಿವೆ.

ಕಾಂತಾರ’ಸಿನಿಮಾದಲ್ಲಿ ದೈವದ ಅಣುಕು ವೇಷ ಹಾಕಿರುವ ರಿಷಬ್ ಶೆಟ್ಟಿ (Rishab Shetty), ಶಿವದೂತೆ ಗುಳಿಗೆ’ ನಾಟಕದಲ್ಲಿ ದೈವದ ಅಣುಕು ವೇಷ ಹಾಕಿರುವ ಸ್ವರಾಜ್ ಹಾಗೂ `ಕಾವೇರಿ’ ಧಾರಾವಾಹಿಯ ಸಿ.ಕೆ ಪ್ರಶಾಂತ್ ವಿರುದ್ಧ ದಲಿತ ದೌರ್ಜನ್ಯ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ.

ಈ ಕುರಿತು ಬೆಳ್ತಂಗಡಿ ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ತುಳುನಾಡಿನಲ್ಲಿ ಹುಟ್ಟಿ ತುಳುನಾಡು ದೈವಕ್ಕೆ ಅಪಮಾನ ಮಾಡುತ್ತಿದ್ದಾರೆ ಅಂದ್ರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಮೂಲ ಪರಂಪರೆಯಿಂದ ನಾವು ಮಾಡಿಕೊಂಡು ಬಂದ ಚಾಕರಿ ಅದರೂ ದೈವದ ಚಾಕರಿಯನ್ನು ಮಾಡಿದವರೇ ಮಾಡಬೇಕು. ಆದ್ರೆ ದೈವದ ಬಣ್ಣ, ಹಚ್ಚಿ, ಗಗ್ಗರ ಕಟ್ಟಿಕೊಂಡು ಇಷ್ಟಬಂದಂತೆ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ಮಾಡಿದ್ದಾರೆ. ಅವರಿಗೆ ಏನು ನೈತಿಕತೆ ಇದೆ? ನಮ್ಮ ದೈವವನ್ನು ಬೀದಿಬದಿಗೆಲ್ಲ ಕೊಂಡೊಯ್ದು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಮೊದಲು ಕರಾವಳಿ ಜಿಲ್ಲೆಗಳಿಗಷ್ಟೇ ಸೀಮಿತವಾಗಿದ್ದ ದೈವಾರಾಧನೆಯು ಕರಾವಳಿ ಹೊರಗೂ ಸದ್ದು ಮಾಡಲಾರಂಭಿಸಿದ್ದು ಕಾಂತಾರ ಚಿತ್ರ ಬಂದ ನಂತರ. ಮೊದಮೊದಲು ಎಲ್ಲರೂ ಚಿತ್ರದ ಯಶಸ್ಸನ್ನು ಸಂಭ್ರಮಿಸಿದರಾದರೂ ನಂತರ ಅದರ ಪರಿಣಾಮಗಳೂ ಕಾಣ ತೊಡಗಿದವು. ಕರಾವಳಿ ಜನರು ಶೃದ್ಧಾ ಭಕ್ತಿಯಿಂದ ಕಾಣು ದೈವದ ವೇಷವನ್ನು ಯಾರ್ಯಾರೋ ಬೇಕಾಬಿಟ್ಟಿ ತೊಟ್ಟು ರೀಲ್ಸ್‌ ಮಾಡುವುದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಂಜುರ್ಲಿಯ ವೇಷ ಧರಿಸಿ ಅಬ್ಬರಿಸುವುದು ಇವೆಲ್ಲ ನಡೆಯತೊಡಗಿದವು.

ಇದರ ಜೊತೆಗೆ ದೈವಾರಾಧನೆಯಿಂದ ಹಣ ಮಾಡಿಕೊಳ್ಳುವ ಸಲುವಾಗಿ ರೆಸಾರ್ಟ್‌ ಒಂದು ತನ್ನ ಪ್ಯಾಕೇಜಿನಲ್ಲಿ ಭೂತ ಕೋಲ ಪ್ರದರ್ಶವನ್ನೂ ಸೇರಿಸಿದ್ದ ಸುದ್ದಿಯಾಗಿತ್ತು.

ಈಗ ಮತ್ತೆ ರಿಷಬ್‌ ಶೆಟ್ಟಿಯವರು ಕಾಂತಾರ ಚಿತ್ರದ ಇನ್ನೊಂದು ಅವತರಣಿಕೆಯನ್ನು ಶೂಟ್‌ ಮಾಡಲು ಸಿದ್ಧರಾಗಿರುವ ಹೊತ್ತಿನಲ್ಲೇ ಅದಕ್ಕೆ ವಿರೋಧ ಎದುರಾಗಿದೆ. ಈ ನಡುವೆ ಶಿವದೂತೆ ಗುಳಿಗ ನಾಟಕ ಎಲ್ಲೆಡೆ ಪ್ರದರ್ಶನ ಕಾಣುತ್ತಿದೆ.

ವಿವಾದದ ಕುರಿತು ಚಿತ್ರ ತಂಡ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದ್ದು, ಮೂಲತಃ ಕರಾವಳಿಯವರೇ ಆಗಿರುವ ರಿಷಭ್‌ ಶೆಟ್ಟಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆನ್ನುವುದನ್ನು ನೋಡಬೇಕಿದೆ. ಚಿತ್ರ ಘೋಷಿಸುವ ಮೊದಲೇ ಧರ್ಮಸ್ಥಳ ವೀರೆಂದ್ರ ಹೆಗ್ಗಡೆಯವರಿಂದ ಅನುಮತಿ ಪಡೆಯಲಾಗೆ ಎಂದೂ ಪ್ರಚಾರ ಮಾಡಲಾಗಿತ್ತು.

ಇನ್ನು ಹೋರಾಟಗಾರರು ಗುಳಿಗ ದೈವ ಎನ್ನುವುದು ನಮ್ಮ ನಂಬಿಕೆ. ಇನ್ನೂ ಕಾಂತಾರ-2 ಬರುತ್ತಿದೆ. ಯಾವ ಕಾಂತಾರ ಸಿನಿಮಾ ಬಂದರೂ ನಾವು ಹೋರಾಟಕ್ಕೆ ಇಳಿಯೋದೆ. ಇವರು ದುಡ್ಡು ಮಾಡುವುದಿದ್ದರೆ, ದೇಶದಲ್ಲಿ ಎಷ್ಟೊಂದು ಸಮಸ್ಯೆಗಳಿವೆ, ಅವುಗಳನ್ನಿಟ್ಟುಕೊಂಡು ಮಾಡಲಿ. ವಿಷ್ಣುವರ್ಧನ್ ಅವರು ಸಿನಿಮಾ ಮಾಡಿದ್ದರು. ಆದ್ರೆ ಯಾವೊಂದು ಸಮಾಜಕ್ಕೆ ಅನ್ಯಾಯ ಆಗುವ ರೀತಿಯಲ್ಲಿ ಮಾಡಲಿಲ್ಲ. ಇದು ಮುಂದುವರಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. 

ಈ ಹೋರಾಟದ ಕಣಕ್ಕೆ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳವೂ ಇಳಿದಿದ್ದು ಕಾಂತಾರ – 2 ಮಾಡಿದ್ದೇ ಹೌದಾದರೆ ನಾವು ರಿಷಭ್‌ ಶೆಟ್ಟಿಯವರ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು