Friday, June 14, 2024

ಸತ್ಯ | ನ್ಯಾಯ |ಧರ್ಮ

ಶಂಕರ್‌ ಸಿಹಿಮೊಗ್ಗೆಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ

ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ( ಮಾಹೆ )  ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ – 2023 ಕ್ಕೆ  ಸಂವೇದನಾಶೀಲ ಲೇಖಕ, ಕವಿ ಶಂಕರ್ ಸಿಹಿಮೊಗ್ಗೆ ಅವರ ಅಪ್ರಕಟಿತ ಕವನ ಸಂಕಲನ ʼಇರುವೆ ಮತ್ತು ಗೋಡೆʼ ಆಯ್ಕೆಯಾಗಿದೆ.

ಮೂಲತಃ ಶಿವಮೊಗ್ಗದವರಾದ ಶಂಕರ್ ಸಿಹಿಮೊಗ್ಗೆಯವರು ಇಂಜಿನಿಯರಿಂಗ್ ಪದವೀಧರರಾಗಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸೀನಿಯರ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಂಗಭೂಮಿಯ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಶಂಕರ್ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  

ʼಮಿಂಚುಳ್ಳಿ ಪ್ರಕಾಶನʼ ಪ್ರಾರಂಭಿಸಿದ ಅವರು ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

2015 ರಲ್ಲಿ ಇವರ ಪ್ರಥಮ ಕವನ ಸಂಕಲನ ʼಕುದುರೆಯ ವ್ಯಥೆʼ ಪ್ರಕಟಗೊಂಡಿದೆ. ʼಬಾನ ಬಯಲ ಚುಕ್ಕಿಗಳುʼ. ʼಕಾವ್ಯಯಾನʼ, ʼಕವಿತೆ 2022ʼ ಮುಂತಾದವು ಶಂಕರ್ ಸಿಹಿಮೊಗ್ಗೆ ಅವರ ಸಂಪಾದಿತ ಕೃತಿಗಳು.  ಇವರ ʼಹೊಳಲೂರಿನ  ಹಾಸ್ಟೆಲ್ ಹುಡುಗರುʼ ಎಂಬ ಕತೆ, ಬೆಂಗಳೂರು ವಿವಿಯ ಬಿ.ವಿ.ಎ ಮತ್ತು ಬಿ.ಎಫ್ಎ. ಪದವಿಗೆ ಕನ್ನಡ ಭಾಷೆಯ ಪಠ್ಯ ವಾಗಿದೆ.

ಖ್ಯಾತ ಸಾಹಿತಿ , ಪತ್ರಿಕೋದ್ಯಮಿ,  ಶಂಕರಭಟ್ಟರ ಹೆಸರಿನಲ್ಲಿ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯು 10,000 ರೂ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಇದನ್ನೂ ಓದಿ-https://peepalmedia.com/vibha-literary-award-to-bhagyajyoti-hiremath/ http://ಭಾಗ್ಯಜ್ಯೋತಿ ಹಿರೇಮಠ ಗೆ ವಿಭಾ ಸಾಹಿತ್ಯ ಪ್ರಶಸ್ತಿ

Related Articles

ಇತ್ತೀಚಿನ ಸುದ್ದಿಗಳು