ʼಕೈʼ ಟೀಕಿಸಿದ ಕೇಶವ್ ಪ್ರಸಾದ್ ಮೌರ್ಯ

ಲಕ್ನೋ: ಗುಲಾಂ ನಬಿ ಆಜಾದ್ ರಾಜೀನಾಮೆ ಕುರಿತಂತೆ ʼಕಾಂಗ್ರೆಸ್‌ ನಿಂದ ಬಹಳ ಜನ ಮುಕ್ತರಾದರುʼ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼಕಾಂಗ್ರೆಸ್ ಸೆ ಬೋಹೊತ್ ಲೋಗ್ ಆಜಾದ್ ಹೋ ಗಯೇ ಹೈʼ,(ಕಾಂಗ್ರೆಸ್‌ ನಿಂದ ಬಹಳ ಜನ ಮುಕ್ತರಾದರು) ಅದರಲ್ಲಿ ಗುಲಾಂ ನಬಿ ಜಿ ಕೂಡ ಒಬ್ಬರು ಎಂದರು.

ಸ್ವಲ್ಪ ದಿನಗಳ ನಂತರ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮಾತ್ರ ಪಕ್ಷದಲ್ಲಿ ಉಳಿಯುತ್ತಾರೆಂದು ನಾನು ಭಾವಿಸುತ್ತೇನೆ ಎಂದು ಕಾಂಗ್ರೆಸಿಗರನ್ನು ಕುರಿತು ವ್ಯಂಗ್ಯವಾಡಿದ್ದಾರೆ. ಈ ಕುರಿತು ಸುದ್ದಿ-ಸಂಸ್ಥೆ ಎಎನ್‌ಐ ವರದಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು