Thursday, July 31, 2025

ಸತ್ಯ | ನ್ಯಾಯ |ಧರ್ಮ

ಕಮಲ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು – ಮುಖ್ಯಮಂತ್ರಿ ಚಂದ್ರು ಆಗ್ರಹ

“ಒಂದು ಭಾಷೆಯ ಉಗಮದ ವಿಚಾರಗಳು ಅತ್ಯಂತ ಸೂಕ್ಷ್ಮವಾಗಿದೆ. ಯಾವುದೇ ಸಂಶೋಧನೆ, ಅಧ್ಯಯನಗಳು ಇಲ್ಲದೆ ಇಂತಹ ವಿಚಾರಗಳನ್ನು ಮಾತನಾಡಲು ಯಾರಿಗೂ ಸಾಧ್ಯವಿಲ್ಲ. ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ತಮಿಳು ನಟ ಕಮಲ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು” ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಆಗ್ರಹಪಡಿಸಿದರು.

“ಕನ್ನಡದ ಸುಪ್ರಸಿದ್ಧ ಕಲಾವಿದ ಶಿವರಾಜ್ ಕುಮಾರ್ ರವರ ಮುಂದೆಯೇ, ಅದೇ ವೇದಿಕೆಯಲ್ಲಿಯೇ ಕನ್ನಡ ಭಾಷೆಯ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದು ಕನ್ನಡಿಗರಿಗೆ ಮತ್ತಷ್ಟು ನೋವನ್ನುಂಟು ಮಾಡಿದೆ. ಈಗಾಗಲೇ ಕನ್ನಡ ಮತ್ತು ತಮಿಳು ಭಾಷೆಯ ನಡುವಿನ ಸಂಘರ್ಷಗಳನ್ನು ಸಾಕಷ್ಟು ಕಂಡಿರುವ ಸಂದರ್ಭದಲ್ಲಿ ಮತ್ತಷ್ಟು ತುಪ್ಪ ಸುರಿಯುವಂತಹ ಇವರ ಹೇಳಿಕೆ ತೀರ ಖಂಡನೀಯ. ಶಿವರಾಜ್ ಕುಮಾರ್ ರವರು ಕೂಡಲೇ ಇವರ ಹೇಳಿಕೆಯನ್ನು ಪ್ರತಿಭಟಿಸಬಹುದಿತ್ತು”

“ಕನ್ನಡಪರ ಆಲೋಚಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸರ್ಕಾರ ಕೂಡಲೇ ಇವರ ಹೇಳಿಕೆಯನ್ನು ಖಂಡಿಸಬೇಕು. ಇದ್ಯಾವುದೂ ಆಗದಿದ್ದ ಪಕ್ಷದಲ್ಲಿ ಇವರ ಹೇಳಿಕೆಯ ವಿರುದ್ಧದ ಕನ್ನಡಿಗರ ಕಿಚ್ಚಿಗೆ ನಾವು ಸಹ ಧ್ವನಿಗೂಡಿಸಬೇಕಾಗುತ್ತದೆ” ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page