Wednesday, September 25, 2024

ಸತ್ಯ | ನ್ಯಾಯ |ಧರ್ಮ

ಕೃಷಿ ಕಾಯ್ದೆ ಹೇಳಿಕೆ: ಕ್ಷಮೆ ಕೇಳಿದ ಕಂಗನಾ

ಬೆಂಗಳೂರು: ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಕೃಷಿ ಕಾಯ್ದೆ ಮತ್ತು ರೈತ ಹೋರಾಟದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಹಂಪಡೆದು ಕ್ಷಮೆ ಯಾಚಿಸಿದ್ದಾರೆ. ಮಂಡಿ ವಿಧಾನಸಭಾ ಕ್ಷೇತ್ರದ ಸಂಸದೆ ತಮ್ಮ ವೈಯಕ್ತಿಕ ಅಭಿಪ್ರಾಯದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಕಂಗನಾ, “ಕೃಷಿ ಕಾನೂನುಗಳನ್ನು ವಾಪಾಸ್ ತರಬೇಕು ಮತ್ತು ರೈತರೇ ಅದನ್ನು ಒತ್ತಾಯಿಸಬೇಕು‌,” ಎಂದು ಹೇಳಿದ್ದರು. “ರೈತರ ಹಿತಾಸಕ್ತಿಗಾಗಿ ಈ ಕಾನೂನನ್ನು ವಾಪಾಸ್ ತರಬೇಕು. ರೈತರ ಏಳಿಗೆಗೆ ಯಾವುದೇ ಅಡ್ಡಿಯಾಗದಂತೆ ರೈತರೇ ಇದನ್ನು (ಕೃಷಿ ಕಾನೂನುಗಳನ್ನು ಮರಳಿ ತರಲು) ಒತ್ತಾಯಿಸಬೇಕು. ರೈತರು ಭಾರತದ ಪ್ರಗತಿಯಲ್ಲಿ ಶಕ್ತಿಯ ಆಧಾರ ಸ್ತಂಭವಿದ್ದಂತೆ. ಕೆಲವು ರಾಜ್ಯಗಳಲ್ಲಿ ಮಾತ್ರ ಇದರ ಬಗ್ಗೆ ಆಕ್ಷೇಪ ಮಾಡಿದ್ದಾರೆ. ರೈತರ ಹಿತದೃಷ್ಟಿಯಿಂದ ಕೃಷಿ ಕಾನೂನುಗಳನ್ನು ಮರಳಿ ತರಬೇಕು ಎಂದು ನಾನು ಕೈ ಜೋಡಿಸಿ ಮನವಿ ಮಾಡುತ್ತೇನೆ,” ಎಂದು ಹೇಳಿದ್ದರು.

ಹೀಗಿದ್ದೂ, ಪಕ್ಷದ ಪರವಾಗಿ ಅಂತಹ ಹೇಳಿಕೆಗಳನ್ನು ನೀಡಲು ಕಂಗನಾ ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಹಿರಿಯ ನಾಯಕ ಗೌರವ್ ಭಾಟಿಯಾ ಎಕ್ಸ್‌ನಲ್ಲಿ ಹೇಳಿಕೆ ನೀಡಿದ್ದರು. ಕಂಗನಾ ಹೇಳಿಕೆಯಿಂದ ಬಿಜೆಪಿ ನಾಯಕತ್ವ ಅಸಮಧಾನಗೊಂಡಿತ್ತು. ಅವರ ಹೇಳಿಕೆಯು ಕೃಷಿ ಮಸೂದೆಗಳ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಪ್ರತಿನಿಧಿಸುವುದಿಲ್ಲ ಮತ್ತು ಪಕ್ಷವು ಈ ಹೇಳಿಕೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಭಾಟಿಯಾ ಹೇಳಿದ್ದರು.

ಭಾಟಿಯಾ ಹೇಳಿಕೆಯು ಕಂಗನಾ ಅವರನ್ನು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಮಾಡಿದೆ. X ನಲ್ಲಿ ವಿಡಿಯೋ ಪೋಸ್ಟ್ ಈ ವಿಚಾರದಲ್ಲಿ ತಮ್ಮ ಪಕ್ಷದ ನಿಲುವನ್ನು ಅನುಸರಿಸುವುದಾಗಿ ಹೇಳಿದ್ದಾರೆ. ಈ ಟೀಕೆಗಳು ತನ್ನ ವೈಯಕ್ತಿಕ ದೃಷ್ಟಿಕೋನ ಮತ್ತು ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಕಂಗನಾ ಹೇಳಿದ್ದಾರೆ.

“ರೈತ ಕಾನೂನುಗಳನ್ನು ಪ್ರಸ್ತಾಪಿಸಿದಾಗ, ಬಹಳಷ್ಟು ಜನರು ಬೆಂಬಲಕ್ಕೆ ಬಂದರು, ಆದರೆ ಬಹಳ ಸೂಕ್ಷ್ಮವಾಗಿ, ನಮ್ಮ ಪ್ರಧಾನಿ ಆ ಕಾನೂನನ್ನು ಹಿಂತೆಗೆದುಕೊಂಡರು, ಆದ್ದರಿಂದ ಅವರ ಮಾತನ್ನು ಗೌರವಿಸುವುದು ಎಲ್ಲಾ ಬಿಜೆಪಿ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ನಾನು ಕೂಡ ಗೌರವಿಸುತ್ತೇನೆ. ಈಗ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ನಾನು ಕೇವಲ ಒಬ್ಬ ಕಲಾವಿದೆಯಲ್ಲ, ನನ್ನ ಅಭಿಪ್ರಾಯಗಳು ನನ್ನದಾಗಿರುವುದಿಲ್ಲ. ಆದರೆ ನನ್ನ ಆಲೋಚನೆಗಳಿಂದ ಯಾರ ಭಾವನೆಗಳಾದರೂ ಘಾಸಿಯಾಗಿದ್ದರೆ ಅದಕ್ಕೆ ವಿಷಾದಿಸುತ್ತೇನೆ,” ಎಂದು ಕಂಗನಾ ವಿಡಿಯೋದಲ್ಲಿ ಹೇಳಿದ್ದಾರೆ.

ಕೃಷಿ ಕಾನೂನುಗಳ ಬಗ್ಗೆ ಕಂಗನಾಗೆ ಅವರದೇ ಪಕ್ಷವು ಪಾಠ ಮಾಡುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆಯೂ ಸಹ, ಮೋದಿ ಸರ್ಕಾರದ ನಿರ್ಣಾಯಕ ಕ್ರಮಗಳಿಲ್ಲದಿದ್ದರೆ ರೈತರ ಪ್ರತಿಭಟನೆಯು ಭಾರತದಲ್ಲಿ ಬಾಂಗ್ಲಾದೇಶದಂತಹ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಅವರು ನೀಡಿದ ಹೇಳಿಕೆಯಿಂದ ಬಿಜೆಪಿ ದೂರ ಸರಿದಿತ್ತು.

ಇವರ ಅವಹೇಳನಕಾರಿ ಹೇಳಿಕೆಗಳಿಗಾಗಿ ಪಕ್ಷದ ನಾಯಕತ್ವದಿಂದ ಖಂಡನೆಗೆ ಒಳಗಾಗಬೇಕಾಯಿತು ಮತ್ತು ಭವಿಷ್ಯದಲ್ಲಿ ತಮ್ಮ ಪದಗಳ ಆಯ್ಕೆಯ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರುವಂತೆ ಬಿಜೆಪಿ ಪಾಠ ಹೇಳಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page