ನಟಿ ಸಂಸದರೆ ತಾನು ರಾಜಕೀಯಕ್ಕೆ ಹೊಸಬಳಾಗಿದ್ದು, ಜನರ ಕಾರಣದಿಂದಾಗಿ ನನಗೆ ರಾಜಕೀಯವನ್ನು ಆಸ್ವಾದಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ರಾಜಕೀಯವೆನ್ನುವುದು ಹಲವು ಕೆಲಸಗಳನ್ನು ಹೊಂದಿದ ಕ್ಷೇತ್ರವಾಗಿದ್ದು, ಸಾಮಾನ್ಯವಾಗಿ ಸಮಾಜ ಸೇವೆ ಇದರ ಗುರಿ ಎಂದು ಅವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಜನರು ರಸ್ತೆ ರಿಪೇರಿ ಮಾಡಿಸಿಕೊಡುವಂತೆ ಮನವಿ ಸಲ್ಲಿಸಲು ನನ್ನ ಬಳಿ ಬರುತ್ತಾರೆ. ಇದೆಲ್ಲ ಪಂಚಾಯತ್ ಮಟ್ಟದ ಕೆಲಸ, ಆದರೂ ಜನರು ನನ್ನ ಬಳಿ ಬರುತ್ತಾರೋ ಗೊತ್ತಿಲ್ಲ. ಅವರಿಗೆ ನಾನು ಸಂಸದೆ ಎನ್ನುವುದು ಯಾಕೆ ತಿಳಿಯುತ್ತಿಲ್ಲ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಕಂಗನಾ ಸಂದರ್ಶನದಲ್ಲಿ ಅಲವತ್ತುಕೊಂಡಿದ್ದಾರೆ.
ಶಾಸಕರು ಮಾಡಬೇಕಿರುವ ಗುಂಡಿ ಬಿದ್ದ ರಸ್ತೆಗಳ ರಿಪೇರಿಗೂ ಜನರು ನನ್ನ ಬಳಿ ಬರುತ್ತಾರೆ. ಅದು ನನ್ನ ಕೆಲಸ ಅಲ್ಲವೆಂದರೆ ನಿಮ್ಮ ಹತ್ತಿರ ತುಂಬಾ ಹಣವಿದೆಯಲ್ಲ ಸ್ವಲ್ಪ ರಿಪೇರಿ ಮಾಡಿಸಿ ಕೊಡಿ ಎನ್ನುತ್ತಾರೆ.
ಅಲ್ಲದೆ, ಕೆಲವು ಮತದಾರರು ನನ್ನ ಬಳಿ ಹಣವನ್ನೂ ಕೇಳುತ್ತಾರೆ ಎಂದು ಕಂಗನಾ ಈ ಸಂದರ್ಭದಲ್ಲಿ ದೂರಿದ್ದಾರೆ.