Thursday, June 13, 2024

ಸತ್ಯ | ನ್ಯಾಯ |ಧರ್ಮ

ಸಂಸದೆ ಕಂಗನಾ ರಣೌತ್ ಗೆ ಏರ್ಪೋರ್ಟ್ ಸಿಬ್ಬಂದಿಯಿಂದ ಕಪಾಳಮೋಕ್ಷ

ನಟಿ ಹಾಗೂ ನೂತನವಾಗಿ ಸಂಸತ್ತಿಗೆ ಆಯ್ಕೆಯಾದ ಬಿಜೆಪಿ ಸಂಸದೆ ಕಂಗನಾ ರಣೌತ್ ಗೆ ಏರ್ಪೋರ್ಟ್ ಸಿಬ್ಬಂದಿ ಕಡೆಯಿಂದ ಕಪಾಳಮೋಕ್ಷವಾಗಿದೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್ಎಫ್ ಪೇದೆಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ.

ಏರ್‌ಪೋರ್ಟ್ ಲಾಂಜ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ನೂತನ ಸಂಸದರಿಗೆ ಕಪಾಳಮೋಕ್ಷ ಮಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಾನ್‌ಸ್ಟೆಬಲ್ ಅವರನ್ನು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ.

ಕಂಗನಾ ರನೌತ್‌ಗೆ ಕಪಾಳಮೋಕ್ಷ ಘಟನೆಯ ನಂತರ, ಅರೆಸೈನಿಕ ಕಾನ್‌ಸ್ಟೆಬಲ್ ವಿಚಾರಣೆ ನಡೆಸಿದ ನಂತರ “ರೈತರನ್ನು ಅಗೌರವದಿಂದ ಕಂಡ ಕಾರಣಕ್ಕೆ” ಎಂದು ತಿಳಿದು ಬಂದಿದೆ. “2020-21 ನೇ ಸಾಲಿನಲ್ಲಿ ಪರಿಷ್ಕೃತ ಕೃಷಿ ಕಾನೂನುಗಳ ವಿರುದ್ಧ ರೈತರು 15 ತಿಂಗಳ ಕಾಲ ನಡೆಸುತ್ತಿರುವ ಪ್ರತಿಭಟನೆಗೆ ಇದೇ ಕಂಗನಾ ರಣೌತ್ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು.

ಅಂದು ರೈತರ ಆಂದೋಲನದ ಸಂದರ್ಭದಲ್ಲಿ ಆಂದೋಲನದಲ್ಲಿ ಭಾಗವಹಿಸಿದ ರೈತರ ಕುರಿತು 100 ರೂಪಾಯಿ ಆಸೆಗಾಗಿ ಬಂದವರು ಎಂದು ಈ ಕೆಂಪಿ ಹೇಳಿಕೆ ನೀಡಿದ್ದಳು. ಅಂದು ನನ್ನ ತಾಯಿಯೂ ಆಂದೋಲನದಲ್ಲಿ ಭಾಗವಹಿಸಿದ್ದರು. ಹಾಗಾಗಿ ಬಾರಿಸಿದೆ’ ಎಂದು ಹೇಳಿದ್ದಾರೆ.

ಪ್ರತಿಭಟನಾ ನಿರತ ರೈತರನ್ನು ‘ಖಲಿಸ್ತಾನಿಗಳು’ ಎಂದು ಕಂಗನಾ ಹೀಯಾಳಿಸಿದ್ದರು. ಈ ಕಾರಣಕ್ಕಾಗಿ ಕಪಾಳಮೋಕ್ಷ ಮಾಡಿದ ಬಗ್ಗೆ ಮಹಿಳಾ ಪೇದೆ ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು