Monday, July 28, 2025

ಸತ್ಯ | ನ್ಯಾಯ |ಧರ್ಮ

ರದ್ದಾಗಿರುವ ಕೃಷಿ ಕಾಯಿದೆಗಳನ್ನು ಮತ್ತೆ ತರಬೇಕು: ಬಿಜೆಪಿ ಸಂಸದೆ ಕಂಗನಾ ರಣಾವತ್

ಶಿಮ್ಲಾ, ಸೆಪ್ಟೆಂಬರ್ 24: ರೈತರ ಹೋರಾಟದಿಂದಾಗಿ ರದ್ದುಗೊಂಡಿರುವ ಮೂರು ಕೃಷಿ ಕಾನೂನುಗಳನ್ನು ಮತ್ತೆ ತರಬೇಕು ಎಂದು ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಹೇಳಿದ್ದಾರೆ.

”ನನ್ನ ಹೇಳಿಕೆ ವಿವಾದಕ್ಕೀಡಾಗಲಿದೆ ಎಂಬುದು ನನಗೆ ಗೊತ್ತು. ಆದರೆ, ಮತ್ತೆ ಮೂರು ಕೃಷಿ ಕಾನೂನುಗಳನ್ನು ತರಬೇಕು. ಇವುಗಳಿಗೆ ರೈತರು ಬೇಡಿಕೆ ಇಡಬೇಕು” ಎಂದು ಅವರು ಹೇಳಿದರು.

ಈ ಮೂರು ಕಾನೂನುಗಳು ರೈತರಿಗೆ ತುಂಬಾ ಪ್ರಯೋಜನಕಾರಿ ಎಂದ ಅವರು, ಕೆಲವು ರಾಜ್ಯಗಳಲ್ಲಿ ರೈತ ಸಂಘಗಳ ಕಳವಳದಿಂದಾಗಿ ಸರ್ಕಾರವು ಅವುಗಳನ್ನು ರದ್ದುಗೊಳಿಸಬೇಕಾಯಿತು. ರೈತರ ಅನುಕೂಲಕ್ಕಾಗಿ ಮತ್ತೆ ಈ ಕಾನೂನುಗಳನ್ನು ತರಲು ಬಯಸುವುದಾಗಿ ಕಂಗನಾ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page