Sunday, June 16, 2024

ಸತ್ಯ | ನ್ಯಾಯ |ಧರ್ಮ

ಕನ್ನಡತಿ ಉತ್ಸವ-2022: ʼಮಿಸ್‌ ಮಹಾಲಕ್ಷ್ಮೀʼ ರ್‍ಯಾಂಪ್ ವಾಕ್‌

ಬೆಂಗಳೂರು: ʼಅವಳ ಹೆಜ್ಜೆʼ ಸಂಸ್ಥೆಯು ಸತತ 6 ವರ್ಷಗಳಿಂದ ʼಕನ್ನಡತಿ ಉತ್ಸವʼ ವನ್ನು ವಾರ್ಷಿಕ ಹಬ್ಬವಾಗಿ ನಡೆಸಿಕೊಂಡು ಬರುತ್ತಿದೆ.

ಪ್ರತಿವರ್ಷವೂ ಒಂದಿಲ್ಲೊಂದು ವಿಶಿಷ್ಟ ಕಾರ್ಯಕ್ರಮದ ಮೂಲಕ ಮಹಿಳೆಯರ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ರಾಜಕೀಯ ಬದುಕಿನ ಮೇಲೆ ಪರಿಣಾಮವನ್ನು ಬೀರುವಂತ ವಸ್ತುವಿಷಯಗಳ ಮೇಲೆ ಕವಿತೆ, ನಾಟಕ, ಸಿನಿಮಾ, ಚರ್ಚಾಗೋಷ್ಠಿಗಳನ್ನು ಏರ್ಪಡಿಸಿ ಅದರ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳಾ ಆಶಯಗಳಿಗೆ ದನಿಯಾಗುತ್ತಾ ಬಂದಿರುವುದು ಇದರ ವಿಶೇಷ.

ಇದೀಗ 2022ರ ʼಕನ್ನಡತಿ ಉತ್ಸವʼದ ಅಂಗವಾಗಿ ʼಮಿಸ್‌ ಮಹಾಲಕ್ಷ್ಮೀʼ ಶೀರ್ಷಿಕೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಮಹಿಳೆಯರಿಗಾಗಿ ಒಂದು ವಿನೂತನ ರ್‍ಯಾಂಪ್ ವಾಕ್‌ ಆಯೋಜಿಸಿದೆ.

ಕಾರ್ಯಕ್ರಮವು ಎರಡು ವಿಭಾಗಗಳಲ್ಲಿ ನಡೆಯಲಿದ್ದು ಆಸಕ್ತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.

ಕಾರ್ಯಕ್ರಮದ ವಿವರ ಹೀಗಿದೆ:
• PASSION SHOW – ಇದು ಫ್ಯಾಷನ್‌ ಶೋ ಅಲ್ಲ, ಪ್ಯಾಷನ್‌ ಶೋ!

ಈ ವಿಭಾಗದಲ್ಲಿ ಭಾಗವಹಿಸಲು ಮಹಿಳೆಯರು ಮತ್ತು ಹೆಣ್ಣುಮಕ್ಕಳು ತಮ್ಮ ವೈಯಕ್ತಿಕ ಕನಸು, ಕಸುಬು ಮತ್ತು ಕಲೆಯನ್ನು ಉಡುಗೆ-ತೊಡುಗೆ, ವೇಷಭೂಷಣಗಳ ಮೂಲಕ ವೇದಿಕೆ ಮೇಲೆ ಪ್ರದರ್ಶಿಸಲು 30 ಸೆಕೆಂಡುಗಳ ಕಾಲಾವಕಾಶ ನೀಡಲಾಗುವುದು.

• ʼಹಳೆ ಬೇರು, ಹೊಸ ಚಿಗುರು – ಇದು ತಲೆಮಾರುಗಳ ಬಾಂಧವ್ಯದ ನಡಿಗೆ

ಈ ವಿಭಾಗದಲ್ಲಿ ಭಾಗವಹಿಸಲು ಅಜ್ಜಿ, ತಾಯಿ, ಮಗಳು, ಮೊಮ್ಮಗಳು ಹೀಗೆ ಹೆಣ್ಣು ತಲೆಮಾರು ಒಟ್ಟಿಗೆ ಒಂದು ತಂಡವಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಬೇಕು. ಪ್ರತೀ ತಂಡಕ್ಕೆ 1 ನಿಮಿಷಗಳ ಕಾಲಾವಕಾಶವಿದ್ದು, ತಮ್ಮ ಬಾಂಧವ್ಯವನ್ನು ಒಂದು ವಿಶೇಷ ಥೀಮ್‌ ಮೂಲಕ ಪ್ರದರ್ಶಿಸಬಹುದು.

ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳಲು ಅಕ್ಟೋಬರ್‌ 31 ಕಡೆಯ ದಿನಾಂಕವಾಗಿದ್ದು, ನೊಂದಣಿಗಾಗಿ 9740022909 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು