Friday, June 14, 2024

ಸತ್ಯ | ನ್ಯಾಯ |ಧರ್ಮ

ಕಾಂತಾರ: ಹಿಂದಿ, ತೆಲುಗು, ತಮಿಳಿನಲ್ಲೂ ಅಬ್ಬರದ ಪ್ರದರ್ಶನ

ಬೆಂಗಳೂರು: ಕರ್ನಾಟಕದ ಬಾಕ್ಸ್‌ ಆಫೀಸ್‌ ನಲ್ಲಿ ಧೂಳೆಬ್ಬಿಸಿದ ನಂತರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕಾಂತಾರ, ಉತ್ತಮ ಪ್ರದರ್ಶನ ಕಾಣುತ್ತಿದ್ದು, ನೆರೆ ಭಾಷೆಯ ಚಲನಚಿತ್ರಗಳಾದ ಪೊನ್ನಿಯಿನ್ ಸೆಲ್ವನ್, ರಾಕೆಟ್ರಿ, ಕಾರ್ತಿಕೇಯ-2 ಸಿನಿಮಾಗಳ ಹಿಂದಿ ಡಬ್ಬಿಂಗ್‌ ಅವತರಣಿಕೆಗಳ ಕಲೆಕ್ಷನ್‌ಗೆ ಸವಾಲು ಹಾಕಿದೆ.

ಕಾಂತಾರ ಸಿನಿಮಾ ಹಿಂದಿಯಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ. ಮೊದಲ ವಾರಂತ್ಯದಲ್ಲಿ ಸಿನಿಮಾ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದ್ದು, ಮಹಾರಾಷ್ಟ್ರದಲ್ಲಿ ಹೆಚ್ಚು ಕಲೆಕ್ಷನ್‌ ಗಿಟ್ಟಿಸಿಕೊಂಡಿದೆ.

ಪೊನ್ನಿಯಿನ್ ಸೆಲ್ವನ್ I, ರಾಕೆಟ್ರಿ, ದಿ ನಂಬಿ ಎಫೆಕ್ಟ್ ಮತ್ತು ಕಾರ್ತಿಕೇಯ-2 ನಂತಹ ಈ ವರ್ಷದ ಇತರ ಪ್ರಾದೇಶಿಕ ಹಿಟ್‌ ಸಿನಿಮಾಗಳ ಹಿಂದಿ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಕಾಂತಾರ ಸವಾಲು ಹಾಕಿದೆ.

ವಾರಾಂತ್ಯದಲ್ಲಿ ಕಾಂತಾರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಏರಿಕೆ

ಕಾಂತಾರ ಹಿಂದಿ ಅವತರಣಿಕೆ ಬಾಕ್ಸ್ ಆಫೀಸ್ ಕಲೆಕ್ಷನ್‌ ಸುಮಾರು 150 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದ್ದು, ಶನಿವಾರದಂದು ಚಿತ್ರವು ರೂ 1.27 ಕೋಟಿ ಸಂಗ್ರಹಿಸಿವುವ ಮೂಲಕ ಒಟ್ಟು 2.75 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಕಾಂತಾರ ಹಿಂದಿ ಸಿನಿಮಾ ಮೊದಲ ದಿನ ಅಷ್ಟೇನು ಸದ್ದು ಮಾಡಿರಲಿಲ್ಲ. ಆದರೆ 2 ದಿನದಲ್ಲಿ 4.02 ಕೋಟಿ ಗಳಿಸಿ, 3ನೇ ದಿನದಲ್ಲಿ 3.50 ಕೋಟಿ ಗಳಿಸಿ, ಮೊದಲ ವಾರಾಂತ್ಯದಲ್ಲಿ 7.52 ಕೋಟಿ ರೂ.ಗಳಿಸುವ ಭರ್ಜರಿ ಯಶಸ್ಸಿನತ್ತ ಸಾಗಿದೆ. ಸಿನಿಮಾ ನೋಡುಗರಿಂದ ಅಪಾರ ಪ್ರಶಂಸೆಯ ಸುರಿಮಳೆ ಕಂಡುಬರುತ್ತಿದೆ.

ಕಾಂತಾರ ಬಗ್ಗೆ ಟ್ವಿಟರ್ ಬಳಕೆದಾರರ ಪ್ರತಿಕ್ರಿಯೆ

ಕಾಂತಾರ ಸಿನಿಮಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಸಿನಿಮಾದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಸೇರಿದಂತೆ ಕ್ಲೈಮ್ಯಾಕ್ಸ್ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ʻʻಗುಳಿಗ ದೈವದ ಕೂಗು ನನ್ನ ಮನಸ್ಸಿನಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆʼʼ ಎಂದು ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರವಿ ಗುಪ್ತ ಎಂಬುವರೂ ಕೂಡ ಟ್ವಿಟರ್‌ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಅಕ್ಟೋಬರ್ 14 ರ ಮೊದಲು ಕನ್ನಡದಲ್ಲಿ ಈ ಚಿತ್ರ ಜನರನ್ನು ಸಂತೃಪ್ತಿಗೊಳಿಸಿತ್ತು, ಈಗ ಹಿಂದಿಯಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ತೃಪ್ತರಾಗಿದ್ದಾರೆ. ಸಿನಿಮಾ ಮಗಿದರೂ ಏಳುವ ಮನಸ್ಸಾಗುತ್ತಿಲ್ಲ. ಮುಂಬೈನಲ್ಲಿ ಕಾಂತಾರ ಮೂರನೇ ಭಾನುವಾರ 100% ಆಕ್ಯುಪೆನ್ಸಿ ಮತ್ತು ದೈವಿಕ ಬ್ಲಾಕ್ಬಸ್ಟರ್ ಎಂದು ಬರೆದುಕೊಂಡಿದ್ದಾರೆ.

ಕಾಂತಾರ ಸಿನಿಮಾವು ಇಂಟರ್ನೆಟ್ ಚಲನಚಿತ್ರ ಡೇಟಾಬೇಸ್ (IMDb) ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ.

ಚಲನಚಿತ್ರ ರೇಟಿಂಗ್ ವೆಬ್‌ಸೈಟ್ IMDb ನಲ್ಲಿ, ಕಾಂತಾರ 9.5/10 ರೇಟಿಂಗ್ ಅನ್ನು ಪಡೆದಿದ್ದು, ಕೆಜಿಎಫ್ 2, RRR ಸಿನಿಮಾಗಳ ರೇಟಿಂಗ್ ಅನ್ನು ಮೀರಿಸಿದೆ.

Related Articles

ಇತ್ತೀಚಿನ ಸುದ್ದಿಗಳು