ತಿರುವನಂತಪುರಂ: ಥೈಕುಡಮ್ ಬ್ರಿಡ್ಜ್ ಬ್ಯಾಂಡ್ ಹಾಕಿದ್ದ ಹಾಡಿನ ಕಾಪಿರೈಟಿಗೆ ಸಂಬಂಧಿಸಿದಂತೆ ಕಾಂತಾರ ಸಿನೆಮಾ ತಂಡಕ್ಕೆ ಸಣ್ಣ ಬಿಡುಗಡೆ ದೊರೆತಿದೆಯಾದರೂ, ಅದು ಆ ಹಾಡನ್ನು ತನ್ನ ಸಿನೆಮಾದಲ್ಲಿ ಬಳಸಿಕೊಳ್ಳಲು ಇನ್ನೊಂದು ತಡೆಯನ್ನು ದಾಟಿ ಬರಬೇಕಿದೆ.
ಚಿತ್ರತಂಡದ ಭಾಗವಾಗಿರುವ ವರಾಹ ರೂಪಮ್ ಹಾಡಿನ ಬರಹಗಾರ ಶಶಿರಾಜ್ ಕಾವೂರ್ ಅವರು
ಕೇರಳದ ಗೌರವಾನ್ವಿತ ಉಚ್ಚ ನ್ಯಾಯಾಲಯವು ಕಾಂತಾರ ತಂಡಕ್ಕೆ ಕೆಳ ನ್ಯಾಯಾಲಯದಿಂದ (ಮೂಲ ನ್ಯಾಯವ್ಯಾಪ್ತಿ) ಪರಿಹಾರ ಪಡೆಯುವಂತೆ ನಿರ್ದೇಶಿಸಿದೆ.
ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ಅರ್ಜಿಯ ವಿಚಾರಣೆಯ ನಂತರ, ಥೈಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದೆ ಮತ್ತು ಅದರ ಪ್ರಕಾರ ವರಾಹ ರೂಪಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವು ಮಾಡಲಾಗಿದೆ. ನ್ಯಾಯ ಮೇಲುಗೈ ಸಾಧಿಸಿತು
ಜೈ ತುಳುನಾಡು.” ಎಂದು ಬರೆದುಕೊಂಡಿದ್ದಾರೆ. ಅದನ್ನೇ ಮಾಧ್ಯಮಗಳಲ್ಲಿ ಸುದ್ದಿ ಮಾಡಲಾಗಿದೆ.

ಆದರೆ ಮೂಲಗಳ ಪ್ರಕಾರ ಕಾಂತಾರ ತಂಡವು ಪ್ರಸ್ತುತ ಕೋಳಿಕೋಡ್ ನ್ಯಾಯಾಲಯದ ಕೇಸಿನಲ್ಲಿ ಜಯಗಳಿಸಿದ್ದರೂ, ಮನೋರಮಾ ಸಂಸ್ಥೆಯು ಪಾಲಾಕ್ಕಾಡ್ ಸ್ಥಳೀಯ ನ್ಯಾಯಾಲಯದಲ್ಲಿ ಹೂಡಲಾಗಿರುವ ದಾವೆಯನ್ನೂ ಗೆದ್ದ ನಂತರವಷ್ಟೇ ಮೂಲ ಹಾಡನ್ನು ಕಾಂತಾರ ಚಿತ್ರದಲ್ಲಿ ಬಳಸಿಕೊಳ್ಳಬಹುದಾಗಿದೆ. ಅಲ್ಲಿಯವರೆಗೆ ಚಿತ್ರದಲ್ಲಿ ಹಾಡನ್ನು ಬಳಸಿಕೊಳ್ಳಲು ಸಾಧ್ಯವಿಲ್ಲವೆನ್ನುವುದು ತಜ್ಞರ ಅಭಿಪ್ರಾಯ.
ಶಶಿರಾಜ್ ಕಾವೂರು ಅವರ ಪೋಸ್ಟನ್ನು ನೋಡಿದ ನಂತರ ಕಾಂತಾರ ಅಭಿಮಾನಿಗಳ ಹರ್ಷವು ಮುಗಿಲು ಮುಟ್ಟಿದ್ದು, ಇನ್ನೇನು ತುಳುವಿನಲ್ಲಿ ಬಿಡುಗಡೆಯಾಗಲಿರುವ ಆವೃತ್ತಿಯಲ್ಲಿ ಹಾಡಿನ ಮೂಲ ಆವೃತ್ತಿಯೇ ಇರಲಿದೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಈ ಸುದ್ದಿ ನಿರಾಶೆ ಮೂಡಿಸಿದೆ. ಅಲ್ಲದೆ ಹೊಂಬಾಳೆ ಸಂಸ್ಥೆಯಾಗಲೀ, ಚಿತ್ರದ ನಿರ್ದೇಶಕ, ನಿರ್ಮಾಪಕರಾಗಿ ಈ ಹಾಡಿನ ಕುರಿತು ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡದಿರುವುದು ಮೇಲಿನ ಅನುಮಾನಕ್ಕೆ ಹೆಚ್ಚು ಪುಷ್ಟಿ ನೀಡುತ್ತಿದೆ.