Home ಸಿನಿಮಾ ಟಾಕ್ಸಿಕ್‌ನಲ್ಲಿ ಯಶ್‌ ಜೊತೆ ಕರೀನಾ!

ಟಾಕ್ಸಿಕ್‌ನಲ್ಲಿ ಯಶ್‌ ಜೊತೆ ಕರೀನಾ!

0

ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಚಿತ್ರ ‘ಟಾಕ್ಸಿಕ್’ ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಇರಲಿರುವ ಸಾದ್ಯತೆಗಳ ಬಗ್ಗೆ ಬಾಲಿವುಡ್‌ನಲ್ಲಿ ಮಾತುಗಳು ಕೇಳಿಬರುತ್ತಿವೆ. ಇದು ಕರೀನಾ ಅವರ ಚೊಚ್ಚಲ ದಕ್ಷಿಣ ಭಾರತೀಯ ಭಾಷೆಯ ಚಿತ್ರವಾಗಲಿದೆ.

ಯಶ್ ಸೋಶಿಯಲ್ ಮೀಡಿಯಾದಲ್ಲಿ ಆಕರ್ಷಕ ಟೈಟಲ್ ಟೀಸರ್ ಅನ್ನು ಹಂಚಿಕೊಂಡಾಗಿನಿಂದ ‘ಟಾಕ್ಸಿಕ್’ ಸುತ್ತಲಿನ ನಿರೀಕ್ಷೆಯು ಹೆಚ್ಚಾಗುತ್ತಿದೆ. ಈಗ, ಕರೀನಾ ಕಪೂರ್ ಅವರನ್ನು ಪಾತ್ರವರ್ಗಕ್ಕೆ ಸೇರಿಸುವ ಮಾತುಕತೆಯೊಂದಿಗೆ, ನಿರೀಕ್ಷೆಗಳು ಇನ್ನೂ ಹೆಚ್ಚಾಗುತ್ತಿವೆ.

‘ಟಾಕ್ಸಿಕ್’ ಚಿತ್ರದ ಟೈಟಲ್ ಟೀಸರ್ ಈಗಾಗಲೇ ಪ್ರೇಕ್ಷಕರಲ್ಲಿ ಹೊಸಯಿಂದಾಗಿ ಛಾಪು ಮೂಡಿಸಿದೆ. ಈ ಚಿತ್ರದ ನಿಗೂಢ ಶೀರ್ಷಿಕೆ ಮತ್ತು ಆಕರ್ಷಕ ನಿರೂಪಣೆಯಿಂದಾಗಿ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ ಮತ್ತು ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ‘ಟಾಕ್ಸಿಕ್’ ಅನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಲಿದ್ದು, ಏಪ್ರಿಲ್ 10, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಕರೀನಾ ಕಪೂರ್ ಅವರ ಸಂಭಾವ್ಯ ದಕ್ಷಿಣ ಚೊಚ್ಚಲ ಚಿತ್ರ:

ಕರೀನಾ ಕಪೂರ್ ಅವರೊಂದಿಗಿನ ಮಾತುಕತೆಗಳು ಕಾರ್ಯರೂಪಕ್ಕೆ ಬಂದರೆ, ಇದು ದಕ್ಷಿಣ ಭಾರತದ ಚಿತ್ರರಂಗಕ್ಕೆ ಅವರ ಮೊದಲ ಹೆಜ್ಜೆಯಾಗಲಿದೆ. ಇಬ್ಬರು ಪವರ್‌ಹೌಸ್ ಕಲಾವಿದರು ಪರದೆಯನ್ನು ಹಂಚಿಕೊಳ್ಳುತ್ತಿರುವ ಬಗೆಗಿನ ಮಾತುಗಳು ಈಗಾಗಲೇ ಅಪಾರ ನಿರೀಕ್ಷೆ ಸೃಷ್ಟಿಸಿದೆ. ಏಪ್ರಿಲ್ 10, 2025 ರಂದು ಟಾಕ್ಸಿಕ್‌ ಬಿಡುಗಡೆಯಾಗಲಿದ್ದು ಯಶ್, ಕರೀನಾ ಕಪೂರ್ ಕಮಾಲ್‌ ಮಾಡಲಿದ್ದಾರೆ.

You cannot copy content of this page

Exit mobile version