Monday, January 12, 2026

ಸತ್ಯ | ನ್ಯಾಯ |ಧರ್ಮ

ಕಾರ್ಗಿಲ್ ವಿಜಯ ದಿವಸ: ರಕ್ಷಣಾ ಸಚಿವರು, ತ್ರಿದಳಗಳ ಉಪ ಮುಖ್ಯಸ್ಥರಿಂದ ಶ್ರದ್ಧಾಂಜಲಿ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಕಾರ್ಗಿಲ್ ಯುದ್ಧಕ್ಕೆ ಇಂದಿಗೆ 25 ವರ್ಷ. ವಿಜಯ ದಿವಸ ಸಂದರ್ಭದಲ್ಲಿ ಭಾರತೀಯ ಸೇನೆಯ ವೈಸ್ ಚೀಫ್ ಲೆಫ್ಟಿನೆಂಟ್ ಜನರಲ್ ಎನ್ ರಾಜಾ ಸುಬ್ರಮಣಿ, ನೌಕಾಪಡೆಯ ವೈಸ್ ಚೀಫ್ ವೈಸ್ ಅಡ್ಮಿರಲ್ ಕೆ ಸ್ವಾಮಿನಾಥನ್, ಭಾರತೀಯ ವಾಯುಪಡೆಯ ವೈಸ್ ಚೀಫ್ ಏರ್ ಮಾರ್ಷಲ್ ಎಪಿ ಸಿಂಗ್, ಸಿಐಎಸ್‌ಸಿ ಲೆಫ್ಟಿನೆಂಟ್ ಜನರಲ್ ಜಾನ್ಸನ್ ಪಿ ಮ್ಯಾಥ್ಯೂ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿ ವಿಶೇಷ ಹೂಗುಚ್ಛಗಳನ್ನು ಇರಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page